ಹಾವೇರಿ:ಊಟ ಕೊಡುವ ನೆಪದಲ್ಲಿ ಬುದ್ಧಿಮಾಂದ್ಯ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದ ಕಾಮುಕನನ್ನು ಹಾವೇರಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಹಾವೇರಿ ತಾಲೂಕಿನ ಯತ್ತಿನಹಳ್ಳಿ ಗ್ರಾಮದ ನಿವಾಸಿ ತಸ್ಲೀಮ್ ಸೆರವಾಡ (24) ಬಂಧಿತ ಆರೋಪಿ. ಊಟ ಕೊಡುವ ನೆಪದಲ್ಲಿ ಡಿಸೆಂಬರ್ 7ರ ಮಧ್ಯರಾತ್ರಿ ಆರೋಪಿ ತಸ್ಲೀಮ್​ ಮುಸುಕು ಹಾಕಿಕೊಂಡು 40 ರಿಂದ 45 ವಯಸ್ಸಿನ ಬುದ್ಧಿಮಾಂಧ್ಯ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದ. ಹಾವೇರಿಯ ಎಪಿಎಂಸಿ ಬಳಿಯ ಉಜ್ಜಿವನ್ ಫೈನಾನ್ಸ್ ಕಟ್ಟಡದಲ್ಲಿ ಘಟನೆ ನಡೆದಿತ್ತು.
ಇದನ್ನೂ ಓದಿ:ಇನ್​ಸ್ಟಾಗ್ರಾಂ ಸ್ಟಾರ್​ಗೆ 10 ವರ್ಷ ಜೈಲು! ವಿಚಿತ್ರವಾಗಿ ಕಾಣಲು ಹೋಗಿ ಜೈಲು ಸೇರಿದ ಯುವತಿ
ಹಾವೇರಿ ಸಿಟಿಯಲ್ಲಿ ಆಟೋ ಚಾಲಕನಾಗಿದ್ದ ಆರೋಪಿ. ರಾತ್ರಿ ಸಮಯದಲ್ಲಿ ಆಟೋ ಚಾಲನೆ ಮಾಡುತ್ತಿದ್ದ. ಸಂತ್ರಸ್ತ ಮಹಿಳೆಗೆ ಹಿಂದೂ-ಮುಂದೂ ಯಾರು ಇಲ್ಲ. ಇವಳು ಅನಾಥೆ ಎಂದು ತನ್ನ ಕಾಮತೃಷೆಗೆ ಬಳಸಿಕೊಂಡಿದ್ದ. ಐದು ಬಾರಿ ಅತ್ಯಾಚಾರ ಮಾಡಿದ್ದ ಎನ್ನಲಾಗಿದೆ.
ಸಿಸಿಟಿವಿ ದೃಶ್ಯ ನೋಡಿ ಬಿಲ್ಡಿಂಗ್ ಮಾಲೀಕ ನವೀನಕುಮಾರ ತೋಟಣ್ಣನವರ ಪೋಲಿಸರಿಗೆ ದೂರು ನೀಡಿದ್ದರು. ಇದೀಗ ಆರೋಪಿಯನ್ನು ಡಿವೈಎಸ್ಪಿ ವಿಜಯಕುಮಾರ ಮತ್ತು ಸಿಪಿಐ ಮಂಜಣ್ಣ ನೇತೃತ್ವದ ಅಪರಾಧ ವಿಭಾಗದ ತಂಡ ಬಂಧಿಸಿದೆ.(ದಿಗ್ವಿಜಯ ನ್ಯೂಸ್​)
ಚಿತ್ರಾ ಸಾವಿನ ಹಿಂದೆ ರಾಜಕಾರಣಿಯ ಹೆಸರು? ಹೋಟೆಲ್​ಗೂ ಭೇಟಿ ನೀಡಿದ್ದರಂತೆ ಸಚಿವರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − 2 =
Remember me
