ಹಾವೇರಿ:ಸೆವೆನ್​ ಅಪ್​ ಅಂತ ತಿಳಿದು ವಿಷ ಕುಡಿದ ಯುವಕನೊಬ್ಬ ಚಿಕಿತ್ಸೆ ಫಲಿಸದೇ ಮೃತಪಟ್ಟಿರುವ ಘಟನೆ ಸವಣೂರು ತಾಲೂಕಿನ ಚಿಕ್ಕ ಮರಳಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹನುಮಂತ ಲಮಾಣಿ ಮೃತ ದುರ್ದೈವಿ. ಎರಡು ದಿನಗಳ ಹಿಂದೆ ನಡೆದಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಹಲಸಂದೆ ಮತ್ತು ಮೆಕ್ಕೆಜೋಳ ಬೆಳೆಗಳನ್ನು ಕಾಡುವ ಕೀಟಗಳಿಗಾಗಿ ಹನುಮಂತ ತಂದೆ ಕ್ರೀಮಿನಾಶಕ ತಂದಿದ್ದರು. ಬಳಿಕ ಅದನ್ನು ಸೆವನ್ ಅಪ್​ ಬಾಟಲ್​ನಲ್ಲಿ ಶೇಖರಿಸಿ ಇಟ್ಟಿದ್ದರು.
ಇದನ್ನೂ ಓದಿರಿ:ಲೈಂಗಿಕ ಶಕ್ತಿ ವೃದ್ಧಿಗೆ ಆಂಧ್ರದಲ್ಲಿ ಕತ್ತೆಗಳ ಮಾರಣಹೋಮ: ಅಳಿವಿನಂಚಿಗೆ ಸಾಗುತ್ತಿರುವ ಮೂಕ ಪ್ರಾಣಿ!
ಸೆವೆನ್ ಅಪ್ ಕುಡಿಯುವುದಕ್ಕೆ ತಂದಿದ್ದಾರೆಂದು ಭಾವಿಸಿ, ಹನುಮಂತ ಕ್ರಿಮಿನಾಶಕವನ್ನು ಧಾವಂತದಲ್ಲಿ ಕುಡಿದಿದ್ದ. ಆನಂತರವೇ ಅದು ವಿಷ ಎಂದು ಆತನಿಗೆ ತಿಳಿದಿದೆ. ತಕ್ಷಣ ಆತನನ್ನು ಹುಬ್ಬಳ್ಳಿಯ ಕಿಮ್ಸ್​ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಯಿತು. ಆದರೆ, ಚಿಕಿತ್ಸೆ ಫಲಿಸದೆ ಹನುಮಂತ ಅಸುನೀಗಿದ್ದಾನೆ.
ಅನ್ಯಾಯವಾಗಿ ಪ್ರಾಣ ಕಳೆದುಕೊಂಡ ಹನುಮಂತನನ್ನು ನೆನೆದು ಸಂಬಂಧಿಕರು ರೋಧಿಸುತ್ತಿದ್ದಾರೆ. ಇನ್ನು ಹನುಮಂತು ಎರಡು ತಿಂಗಳ ಹಿಂದಷ್ಟೇ ತಂದೆಯಾಗಿದ್ದ. ಇದೊಂದು ಆಕಸ್ಮಿಕ ಘಟನೆ ಎಂದು ತಂದೆ ಪೋಲಿಸರಿಗೆ ಹೇಳಿಕೆ ನೀಡಿದ್ದು, ಸವಣೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.(ದಿಗ್ವಿಜಯ ನ್ಯೂಸ್​)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವೈರಲ್​ ಆಯ್ತು ರಾಹುಲ್​ ಫಿಟ್​ನೆಸ್​ ಫೋಟೋ: ನೆಟ್ಟಿಗರಿಂದ ಪ್ರಶ್ನೆಗಳ ಜತೆ ಮೆಚ್ಚುಗೆಯ ಮಹಾಪೂರ!

ಯೂಟ್ಯೂಬ್ ಪ್ರಾಂಕ್ಸ್​ ಸೋಗಿನಲ್ಲಿ ಎಲ್ಲೆಲ್ಲೋ ಮುಟ್ತಿದ್ದ… ಮಾಡಿದ್ದೆಲ್ಲ ದುಡ್ಡಿಗಾಗಿ !

‘ಖಾಸಗಿ ಆಸ್ಪತ್ರೆಗಳಲ್ಲಿ 250 ರೂಪಾಯಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಫ್ರೀ’ ಲಸಿಕಾ ಕೇಂದ್ರದ ಆಯ್ಕೆ ನಿಮ್ಮದು ಎಂದು ಆರೋಗ್ಯ ಇಲಾಖೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × one =
Remember me
