ಚಿಕ್ಕಬಳ್ಳಾಪುರ:ಪ್ರಧಾನಿ ನರೇಂದ್ರ ಮೋದಿ ರಾಜ್ಯದ ವಿವಿಧ ಭಾಗಗಳಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಮಾತನಾಡುತ್ತಾ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ವಿರುದ್ಧ ಗುಡುಗಿದ್ದರು. ಎರಡೂ ಪಕ್ಷಗಳು ಕುಟುಂಬ ರಾಜಕಾರಣ ಮಾಡುತ್ತಾ ಬರುತ್ತಿವೆ. ಜೆಡಿಎಸ್​ಗೆ ನೀಡುವ ಮತ ಕಾಂಗ್ರೆಸ್​ ಪಾಲಾಗುತ್ತದೆ. ಅಂತೆಯೇ ಜೆಡಿಎಸ್​ಗೆ ಮತ ನೀಡುವುದರಿಂದ ರಾಜ್ಯದಲ್ಲಿ ಅತಂತ್ರ ಸರ್ಕಾರ ಬರಲಿದೆ ಎಂದು ಹೇಳಿದ್ದರು.
ಇದನ್ನೂ ಓದಿ:ವಿಜಯಪುರ | ಹಾಡಹಗಲೇ ಗುಂಡಿನ ದಾಳಿ; ಸ್ಥಳದಲ್ಲಿಯೇ ಪ್ರಾಣಬಿಟ್ಟ ರೌಡಿಶೀಟರ್
ಇದೀಗ ಈ ವಿಚಾರವಾಗಿ ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ಮೋದಿ ಪ್ರಧಾನಿಯಾದ 10 ವರ್ಷದಲ್ಲಿ ಕರ್ನಾಟಕದಲ್ಲಿ ಏನು ಅಭಿವೃದ್ಧಿ ಆಗಿದೆ. ಈ ಬಗ್ಗೆ ತೀರ್ಮಾನ ಮಾಡುವ ರಾಜಕೀಯ ಪ್ರಬುದ್ದತೆ ನಾಡಿನ ಜನರಿಗಿದೆ. ಮೋದಿ ಹೇಳಿಕೆಗೆ ಪ್ರತಿಕ್ರಿಯೆ ಆಗತ್ಯ ಇಲ್ಲ. ಏಳೂವರೆ ಕೋಟಿ ಜನರಿಗೆ ತೀರ್ಪು ಕೊಡುವ ಶಕ್ತಿ ಇದೆ. ಜೆಡಿಎಸ್​ಗೆ ಮತ ಕೊಡಬೇಡಿ ಎಂದು ಹೇಳುವ ಅಧಿಕಾರ ಮೋದಿ ಅವರಿಗೆ ಇದೆಯಾ? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:ಸಿದ್ದರಾಮಯ್ಯ ಪರ ಪ್ರಚಾರ; ಶಿವರಾಜ್ ಕುಮಾರ್​ಗೆ ಟಾಂಗ್ ಕೊಟ್ಟ ಪ್ರತಾಪ್ ಸಿಂಹ!
ಜೆಡಿಎಸ್​ಗೆ ಮತ ಕೊಡಬೇಡಿ ಎಂದು ಹೇಳುವ ಅಧಿಕಾರ ಮೋದಿ ಅವರಿಗೆ ಇದೆಯಾ? ಆದರೆ ತೀರ್ಪು ಕೊಡುವ ಅಧಿಕಾರ ನಾಡಿನ ಜನರಿಗೆ ಇದೆ. ಹೇಳುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಸಂವಿಧಾನಾತ್ಮಕವಾಗಿ ತೀರ್ಪು ನೀಡುವ ಹಕ್ಕು ಜನರಿಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಕರ್ನಾಟಕಕ್ಕೆ ಪ್ರಧಾನಿ ಮೋದಿ ಏನು ಕೊಡುಗೆ ಕೊಟ್ಟಿದ್ದಾರೆ ಎಂಬ ಪ್ರಬುದ್ದತೆ ಜನರಲ್ಲಿದೆ ಎಂದು ಮಾಜಿ ಪ್ರಧಾನಿ ಎಚ್​​.ಡಿ.ದೇವೇಗೌಡ ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + thirteen =
Remember me
