ಬೆಂಗಳೂರು:ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡರ ಮೊಮ್ಮಕ್ಕಳ ಸೋಗಿನಲ್ಲಿ ದುಷ್ಕರ್ಮಿಗಳಿಬ್ಬರು ಅಮಾಯಕರಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.
ದೇವೇಗೌಡರ ಹೆಸರು ದುರುಪಯೋಗ ಪಡಿಸಿಕೊಂಡು ಮೋಸ ಮಾಡುತ್ತಿರುವವರ ವಿರುದ್ಧ ಬನಶಂಕರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಚ್​ಡಿಡಿ ಅವರ ಸಾಮಾಜಿಕ ಜಾಲತಾಣ ನಿರ್ವಹಣೆ ಮಾಡುತ್ತಿರುವ ಆರ್​. ನಾರಾಯಣಪ್ಪ ಎಂಬುವವರು ದೂರು ನೀಡಿದ್ದಾರೆ.ಇದನ್ನೂ ಓದಿರಿಡ್ರಗ್ಸ್ ಮಾಫಿಯಾ ಕಾರಣಕ್ಕೆ ಬೆಂಗಳೂರು ಕಾಂಗ್ರೆಸ್ ನಾಯಕರಿಗೆ ಶುರುವಾಗಿದೆ ಟೆನ್ಷನ್!
ತಾನು ಎಚ್​.ಡಿ.ದೇವೇಗೌಡರ ಮೊಮ್ಮಗ ಎಂದೇಳಿಕೊಂಡು ನಿಶಾಂತ್​ ಎಂಬಾತ, ರೋಲ್ಸ್​ ರಾಯ್ಸ್​ ಕಾರನ್ನು ಖರೀದಿಸಲು ಬಂದಿದ್ದ ದೃಶ್ಯ ಕಾರು ಮಾರಾಟ ಮಳಿಗೆಯಲ್ಲಿ ಸೆರೆಯಾಗಿದೆ. ಈ ವಿಡಿಯೋ ವೈರಲ್​ ಆಗಿದೆ. ಇದೇ ರೀತಿ ಮತ್ತೊಬ್ಬ ಪ್ರದಿಪ್​ ಸಹ ‘ನಾನು ದೇವೇಗೌಡರ ಮೊಮ್ಮಗ. ಸರ್ಕಾರದ ವಿವಿಧ ಕೆಲಸಗಳನ್ನು ಮಾಡಿಸಿಕೊಡುತ್ತೇನೆ’ ಎಂದು ಹೇಳಿಕೊಂಡು ಅಮಾಯಕರಿಗೆ ವಂಚನೆ ಮಾಡುತ್ತಿರುವ ಬಗ್ಗೆಯೂ ವಿಡಿಯೋ ಪತ್ತೆಯಾಗಿದೆ. ಈ ಇಬ್ಬರ ವಿಡಿಯೋಗಳು ಫೇಸ್​ಬುಕ್​ ಮತ್ತು ಯೂಟ್ಯೂಬ್​ನಲ್ಲಿ ಅಪ್​ಲೋಡ್​ ಆಗಿದ್ದವು. ಕರೆ ಮಾಡಿ ಪ್ರಶ್ನೆ ಮಾಡಿದಾಗ ಡಿಲೀಟ್​ ಆಗಿವೆ. ಮಾಜಿ ಪ್ರಧಾನಿ ಹೆಸರನ್ನು ದುರುಪಯೋಗ ಪಡಿಸಿಕೊಂಡಿರುವ ಆರೋಪಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ದೂರಿನಲ್ಲಿ ನಾರಾಯಣಪ್ಪ ಮನವಿ ಮಾಡಿದ್ದಾರೆ.
ಈ ಮೇರೆಗೆ ಆರೋಪಿಗಳಾದ ನಿಶಾಂತ್​ ಮತ್ತು ಪ್ರದೀಪ್​ ಎಂಬುವರ ವಿರುದ್ಧ ಎಫ್​ಐಆರ್​ ದಾಖಲಿಸಿ ಬಂಧನಕ್ಕೆ ಬಲೆಬೀಸಲಾಗಿದೆ ಎಂದು ಬನಶಂಕರಿ ಠಾಣೆ ಪೊಲೀಸರು ತಿಳಿಸಿದ್ದಾರೆ.
ನಟಿ ರಾಗಿಣಿ ಬಗ್ಗೆ ಸಿಎಂ ಬಿಎಸ್​ವೈ ಪುತ್ರ ವಿಜಯೇಂದ್ರ ಹೇಳಿದ್ದೇನು?

ಮಾಜಿ ಶಾಸಕರೊಬ್ಬರ ಮಗ ಆತ್ಮಹತ್ಯೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 3 =
Remember me
