ರಾಯಚೂರು:ಜೇನುತುಪ್ಪ ತುಂಬಿದ ಬಾಟಲಿಯಲ್ಲಿ ಕಿಡಿಗೇಡಿಗಳು ವಿಷದ ಬಾಟಲಿಯ ಚಿತ್ರ ಅಂಟಿಸಿದಂತೆ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡರಿಗೆ ಲಿಂಗಾಯತ ವಿರೋಧಿ ಪಟ್ಟ ಕಟ್ಟಲಾಗಿತ್ತು ಎಂದು ಜೆಡಿಎಸ್​ನ ಮಾಜಿ ಶಾಸಕ ವೈಎಸ್​ವಿ ದತ್ತಾ ಹೇಳಿದರು.
ದೇವದುರ್ಗದಲ್ಲಿ ಬುಧವಾರ ಆಯೋಜಿದ್ದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ವೈಎಸ್​ವಿ ದತ್ತಾ, ಉತ್ತಮ ಕೆಲಸ ಮಾಡಿದ ದೇವೇಗೌಡರಿಗೆ ಲಿಂಗಾಯತ ವಿರೋಧಿ ಪಟ್ಟ ಕಟ್ಟಲಾಗಿತ್ತು. ಆದರೆ ದೇವದುರ್ಗದ ರೈತನೊಬ್ಬ ದೇವೇಗೌಡರ ಪ್ರತಿಮೆ ನಿರ್ಮಿಸಿದ್ದಾರೆ. ಇಂದು ಈ ನೆಲದಲ್ಲಿ ಜೆಡಿಎಸ್​ ಸಮಾವೇಶ ನಡೆದಿದೆ. ದೇವೇಗೌಡರಿಗೆ ಅಂಟಿದ್ದ ಆ ಪಟ್ಟವನ್ನು ಈ ಸಮಾವೇಶದ ಮೂಲಕ ತೆಗೆದು ಹಾಕಿದಂತಾಗಿದೆ ಎಂದರು.ಇದನ್ನೂ ಓದಿರಿತಾಲೂಕು ಪಂಚಾಯಿತಿಯನ್ನೇ ರದ್ದು ಮಾಡಲು ಸಿದ್ಧತೆ! ಕರ್ನಾಟಕದಲ್ಲಿ ಜಿಪಂ, ಗ್ರಾಪಂ ಮಾತ್ರ ಇರುತ್ತೆ…
ದೇವೇಗೌಡರು ಜಿಲ್ಲೆಗೆ ಎನ್‍ಆರಬಿಸಿ ತಂದಿದ್ದಕ್ಕೆ ದೇವದುರ್ಗದ ಗಾಣಧಾಳ ಗ್ರಾಮದ ರೈತ ಪ್ರಭಾಕರ್ ರೆಡ್ಡಿ ಎಂಬಾತ ದೇವೇಗೌಡರ ಪ್ರತಿಮೆ ನಿರ್ಮಿಸಿ ಪೂಜೆ ಮಾಡುತ್ತಿದ್ದಾರೆ. ಆ ರೈತನ ಅಭಿಮಾನವೇ ಇಂದಿನ ಸಮಾವೇಶಕ್ಕೆ ಕಾರಣ ಎಂದು ವೈಎಸ್​ವಿ ದತ್ತಾ ಹೇಳಿದರು.
ಎಚ್​.ಡಿ.ದೇವೇಗೌಡ ಮಾತನಾಡಿ, ಇಂದಿನ ರಾಜಕೀಯ ಅವ್ಯವಸ್ಥೆಯಲ್ಲಿದೆ. ನನ್ನಲ್ಲಿಂದ ಬೆಳೆದವರೇ ಈ ಪಕ್ಷವನ್ನೇ ಸರ್ವನಾಶ ಮಾಡುತ್ತೇನೆ ಎಂದು ಹೇಳುತ್ತಾರೆ. ಕೆಲವರಲ್ಲಿ ಇಂಥ ಮಾತುಗಳನ್ನು ಹೇಳುವ ಗರ್ವವಿದೆ. ಅದಕ್ಕೆ ದೇವದುರ್ಗ ಸಮಾವೇಶ ಉತ್ತರ ನೀಡಲಿದೆ ಎಂದರು.
ನಮ್ಮತ್ರ ಹಣವಿಲ್ಲ, ಉಪ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳನ್ನ ಹಾಕುತ್ತಿಲ್ಲ: ದೇವೇಗೌಡ

ಅಡಕೆ ರೂಪದಲ್ಲಿ ಮನೆಗೆ ಬಂದ ಜವರಾಯ 1 ವರ್ಷದ ಮಗುವಿನ ಪ್ರಾಣ ಹೊತ್ತೊಯ್ದ!

ಛೇ, ಅದೆಂಥ ಅಸಹ್ಯ ಮಾತು ಹೇಳಿಬಿಟ್ಟೆ? ನೊಂದ ಪ್ರಿಯತಮೆ ಸತ್ತೇ ಹೋದಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 3 =
Remember me
