ಬೆಂಗಳೂರು:ರಾಜ್ಯ ಹಾಗೂ ಕೇಂದ್ರ ಬಿಜೆಪಿ ವಿರುದ್ಧ ಟ್ವಿಟರ್​ ಟೀಕಾಸ್ತ್ರ ಮುಂದುವರಿಸಿರುವ ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರು ಮೊದಲಿಗೆ ರಾಜ್ಯದ ಜನತೆಗೆ ಗಣತರಾಜ್ಯೋತ್ಸವದ ಶುಭಕೋರಿ ಬಿಜೆಪಿ ನೇತೃತ್ವದ ರಾಜ್ಯ ಹಾಗೂ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸರಣಿ ಟ್ವೀಟ್​ ಮಾಡಿರುವ ಎಚ್​ಡಿಕೆ, ನಾನು ಸಿಎಂ ಆಗಿದ್ದಾಗ ರೈತರ ಸಾಲ‌ಮನ್ನಾ ಬಗ್ಗೆ ಬಿಜೆಪಿ‌ ಅನುದಿನವೂ ಕಿತಾಪತಿ ಮಾಡಿತು‌‌. ಸಾಲಮನ್ನಾ ಆಗಿಲ್ಲ‌ ಎಂದು ಭಾಷಣವೀರ ಮೋದಿ‌ ಕೂಡ ಹೇಳಿದ್ದರು. ಆದರೆ, ಇಂದು ಕೇಂದ್ರ ಬಿಜೆಪಿ ಸರ್ಕಾರ ರೈತರ ಬೆಳೆ-ಒಡವೆ ಸಾಲದ ಬಡ್ಡಿ‌ ಮೇಲಿನ ಸಬ್ಸಿಡಿಗೆ ಮಣ್ಣು ಹಾಕಿದೆ ಎಂದು ಕಿಡಿಕಾರಿದ್ದಾರೆ.
ರೈತರ ಬೆಳೆ ಮತ್ತು ಒಡವೆ ಸಾಲಗಳ ಬಡ್ಡಿಗೆ ನೀಡಬೇಕಾದ ಸಬ್ಸಿಡಿಯನ್ನು‌ ನಿಲ್ಲಿಸಿರುವ ಸರ್ಕಾರ ರೈತರನ್ನು ಲೇವಾದೇವಿದಾರರಿಗೆ ಶರಣಾಗುವಂತೆ ಮಾಡಿದೆ. ಇನ್ನೊಂದೆಡೆ ಬ್ಯಾಂಕ್​ಗಳಲ್ಲಿರುವ ಬಡವರ ಚಿನ್ನವನ್ನು ಹರಾಜಿನ‌ ಮೂಲಕ‌ ಕೇಂದ್ರ ಸರ್ಕಾರ ಲಪಟಾಯಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ಪ್ರಮಾಣ ವಚನದಲ್ಲಿ ಹಸಿರು ಶಾಲು ಹೊದ್ದು ಹಲ್ಲು‌ ಕಿರಿದರೆ ಸಾಲದು, ಕಿಸಾನ್ ಸಮ್ಮಾನ್ ಎಂಬ ಹೆಸರಲ್ಲಿ ಪ್ರಧಾನಿ ಬೂಟಾಟಿಕೆ ಮಾಡಿದರೆ ಆಗದು. ಕೇಂದ್ರ ಸರ್ಕಾರ ಕೂಡಲೇ ರೈತರ ಬೆಳೆ-ಒಡವೆ ಸಾಲದ ಬಡ್ಡಿಯ ಮೇಲಿನ ಸಬ್ಸಿಡಿ‌ ಬಿಡುಗಡೆ ಮಾಡಬೇಕು. ಇಲ್ಲವೇ ರಾಜ್ಯವೇ ಅದನ್ನು‌ ಭರಿಸಬೇಕು. ಇಲ್ಲದಿದ್ದರೆ ಬಿಜೆಪಿ ರೈತ ವಿರೋಧಿ ಎಂಬುದನ್ನು ಒಪ್ಪಬೇಕು ಎಂದು ಆಗ್ರಹಿಸಿದರು.
ಭಾರತೀಯ ಪ್ರಜಾಪ್ರಭುತ್ವದ ಆತ್ಮ ಸಂವಿಧಾನ ಜಾರಿಗೆ ಬಂದ ದಿನವಿದು. ಎಲ್ಲರನ್ನೂ ಸಮಾನರೆಂದು ನೋಡುವ, ಸಮಾನ ಅವಕಾಶ ನೀಡುವ ಸಂವಿಧಾನದ ಆಶಯಗಳನ್ನೇ ಬಳಸಿಕೊಂಡು ಅಧಿಕಾರಕ್ಕೆ ಬಂದ ಶಕ್ತಿಗಳು ಇಂದು ಅದರ ಆತ್ಮಕ್ಕೇ ಕೈ ಹಾಕಿ ಕೊಲ್ಲುವ ಮಟ್ಟಕ್ಕಿಳಿದಿವೆ. ಈ ಮೂಲಕ ಶಾಶ್ವತ ಅಧಿಕಾರ ರಕ್ಷಣೆಗೆ ಮುಂದಾಗಿವೆ. ಇದರ ವಿರುದ್ಧ ಹೋರಾಡುವ ಪಣ ನಮ್ಮದಾಗಲಿ ಎಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − 4 =
Remember me
