ಮೈಸೂರು:ಜಿ.ಟಿ. ದೇವೇಗೌಡರು ಜೆಡಿಎಸ್​ ಶಾಸಕ. ಆದರೆ, ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿಗೆ ಈ ಬಗ್ಗೆ ಗೊತ್ತಿಲ್ಲವಂತೆ. ಹಾಗಂತ ಅವರೇ ಹೇಳಿದ್ದಾರೆ.
ಜಿಟಿಡಿ ಅವರು ಜೆಡಿಎಸ್​ ಶಾಸಕರಲ್ಲವೇ? ಎಂದು ಸುದ್ದಿಗಾರರು ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ಎಚ್​ಡಿಕೆ, ‘ನನಗೆ ಗೊತ್ತಿಲ್ಲ ಬ್ರದರ್‌’ ಎಂದರು. ‘ಜಿ.ಟಿ.ದೇವೇಗೌಡ ಎಲ್ಲಿದ್ದಾರೆ ಅಂತನೂ ನನಗೆ ಗೊತ್ತಿಲ್ಲ. ಅವರು ನಮ್ಮ ಪಕ್ಷದ ಸಿಂಬಲ್‌ನಿಂದ ಗೆದ್ದರಿಬಹುದು. ಅವರು ಚುನಾವಣೆಯಲ್ಲಿ ಗೆಲ್ಲಲು ನನ್ನ ಕಾಣಿಕೆಯೂ ಇರಬಹುದು. ಆದ್ರೆ ನಮ್ಮ ಸಭೆಗಳಿಗೆ ಬರ್ತಿಲ್ಲ, ನಮ್ಮ ಪಕ್ಷದ ಚಟುವಟಿಕೆಗಳಿಂದ ದೂರ ಇದ್ದಾರೆ. ಅವರು ಯಾವ ಪಾರ್ಟಿಯಲ್ಲಿದ್ದಾರೆ ಅಂತ ಅವರೇ ಹೇಳಬೇಕಿದೆ. ಈಗ ಎಲ್ಲಿದ್ದಾರೆ? ಮುಂದೆ ಎಲ್ಲಿರ್ತಾರೆ? ಅನ್ನೋದನ್ನು ಅವರೇ ಸ್ಪಷ್ಟಪಡಿಸಬೇಕು’ ಎಂದು ಕುಮಾರಸ್ವಾಮಿ ಹೇಳಿದರು.ಇದನ್ನೂ ಓದಿರಿರಾಜ್ಯದ ಜನತೆಗೆ ಎಚ್ಚರಿಕೆಯ ಗಂಟೆ ಬಾರಿಸಿದ ಸಚಿವ ಡಾ.ಸುಧಾಕರ್​!
‘ಜೆಡಿಎಸ್‌ನಲ್ಲಿ ಹೈಕಮಾಂಡ್ ಅನ್ನೋದೇ ಇಲ್ಲ. ನಮ್ಮದು ಲೋಕಮಾಂಡ್ ಪಾರ್ಟಿ. ನಮ್ಮಲ್ಲಿ ಎಲ್ಲರೂ ಹೈಕಮಾಂಡ್‌ಗಳೆ. ಜಿ.ಟಿ.ದೇವೇಗೌಡರನ್ನ ಪಾರ್ಟಿಯಿಂದ ಉಚ್ಛಾಟಿಸಲು ನಾವು ನಿರ್ಧರಿಸಿಲ್ಲ. ಜನರೇ ಅವರ ನಡವಳಿಕೆ ನೋಡಿ ನಿರ್ಧರಿಸಲೆಂದು ಬಿಟ್ಟಿದ್ದೇವೆ’ ಎಂದು ಕುಮಾರಸ್ವಾಮಿ ಹೇಳಿದರು.
‘ಅಂದು ಸಿದ್ದರಾಮಯ್ಯರನ್ನೂ ನಾವು ಉಚ್ಛಾಟಿಸಿರಲಿಲ್ಲ. ಕೇವಲ ಉಪಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದ್ದೆವು ಅಷ್ಟೆ. ಅವರು ಪಕ್ಷದಲ್ಲಿ ಅಲ್ಪಸಂಖ್ಯಾತ ಹಾಗೂ ಇತರ ಘಟಕ ಇದ್ದರೂ ಅಹಿಂದ ಕಟ್ಟಿದ್ದರು. ಪಕ್ಷಕ್ಕೆ ಪರ್ಯಾಯವಾಗಿ ಶಕ್ತಿ ಪ್ರದರ್ಶನ ಮಾಡಲು ಹೊರಟಿದ್ದರು. ಅದಕ್ಕಾಗಿ ಮಂತ್ರಿ ಸ್ಥಾನದಿಂದ ಇಳಿಸಲಾಗಿತ್ತು. ಆಮೇಲೆ ಅವರು ಪಾರ್ಟಿ ಬಿಟ್ಟು ಹೋದರು. ಆದರೆ ಜಿಟಿಡಿ ವಿಚಾರದಲ್ಲಿ ಜನರು ಮತ್ತು ಕಾರ್ಯಕರ್ತರಿಗೆ ಅರ್ಥವಾಗಲಿ ಅಂತ ಸುಮ್ಮನೆ ಬಿಟ್ಟಿದ್ದೇವೆ’ ಎಂದು ಎಚ್​ಡಿಕೆ ಹೇಳಿದರು.
ನೇಣುಬಿಗಿದ ಸ್ಥಿತಿಯಲ್ಲಿ ತಾಯಿ-ಮಗನ ಶವ ಪತ್ತೆ! ಶಿವರಾತ್ರಿ ಸಡಗರಕ್ಕೆ ಕೊಳ್ಳಿ ಇಟ್ಟ ಸಾವು

Video| ಕಪಾಳಕ್ಕೆ ಹೊಡೆದ ಪಿಎಸ್​ಐಗೆ ​ಯುವತಿ ಅವಾಜ್​! ನನ್​ ಗಾಡಿ ಮುಟ್ಟೋಕೆ ನೀನ್ಯಾರೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × one =
Remember me
