ಮಂಡ್ಯ:ಮಳೆಯಿಂದ ಕೆರೆ ಕೋಡಿ ಬಿದ್ದು ಭತ್ತದ ಬೆಳೆ ಹಾಳಾಗಿ ಸಂಕಷ್ಟಕ್ಕೆ ಸಿಲುಕಿದ್ದ ರೈತನ ನೆರವಿಗೆ ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಅವರು ಧಾವಿಸಿದ್ದಾರೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಬೊಪ್ಪ ಸಮುದ್ರ ಗ್ರಾಮದ ಗೌರಿಶಂಕರ್ ಎಂಬ ರೈತನ 1.5 ಎಕರೆಯಷ್ಟು ಭತ್ತದ ಬೆಳೆ ನಷ್ಟವಾಗಿತ್ತು. ಇದಾದ ಬಳಿಕ ಬೆಳೆ ನಾಶದ ಕುರಿತು ರೈತ ಗೌರಿಶಂಕರ್​ ಫೇಸ್​ಬುಕ್​ನಲ್ಲಿ ವಿಡಿಯೋ ಮೂಲಕ ಪರಿಹಾರಕ್ಕಾಗಿ ಮನವಿ ಮಾಡಿಕೊಂಡಿದ್ದ.
ರೈತನ ವಿಡಿಯೋ ಗಮನಿಸಿದ ಮಾಜಿ ಸಿಎಂ ಎಚ್​​ಡಿಕೆ ಇಂದು ಬೊಪ್ಪ ಸಮುದ್ರ ಗ್ರಾಮಕ್ಕೆ ಭೇಟಿ ಕೊಟ್ಟು ರೈತ ಗೌರಿಶಂಕರ್ ಸೇರಿದಂತೆ ನಷ್ಟಕ್ಕೊಳಗಾಗಿದ್ದ ಮೂವರು ರೈತರಿಗೆ ತಲಾ 55 ಸಾವಿರ ರೂ. ಪರಿಹಾರ ನೀಡಿದ್ದಾರೆ. ಪರಿಹಾರ ನೀಡಿದ ಎಚ್ಡಿಕೆಗೆ ರೈತರು ಧನ್ಯವಾದ ಹೇಳಿದ್ದಾರೆ.(ದಿಗ್ವಿಜಯ ನ್ಯೂಸ್​)
ಸುಮಲತಾರಿಂದ ಹೆಸರು ಪ್ರಸ್ತಾಪ: ಪಾಪ ಪ್ರಜ್ವಲ್ ನನಗೆ ಪೋನ್ ಮಾಡಿದ್ದ ಅಂದ್ರು ಎಚ್​.ಡಿ. ರೇವಣ್ಣ

ಪಕ್ಕದೂರಲ್ಲಿ 22 ವರ್ಷದ ಯುವತಿ ಸಾವು! ಶವದ ಪಕ್ಕದಲ್ಲೇ ಇತ್ತು ಆಸಿಡ್​, ಚಾಕು…

ಪೊಲೀಸರು ಡಿಜಿಟಲ್ ದಾಖಲೆ ತಿರಸ್ಕರಿಸುವಂತಿಲ್ಲ: ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಸೂಚನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 3 =
Remember me
