ಮಂಡ್ಯ:ಸರ್ಕಾರ ಮೈಮರೆತಿಲ್ಲ, ತಪಾಸಣೆ ಮಾಡಿಯೇ ಪಾದರಾಯನಪುರ ಆರೋಪಿಗಳನ್ನು ಸ್ಥಳಾಂತರ ಮಾಡಿದೆವು ಎಂಬ ಡಿಸಿಎಂ ಅಶ್ವಥ್​ ನಾರಾಯಣ್ ಹೇಳಿಕೆಗೆ ಮಾಜಿ ಸಿಎಂ ಎಚ್​​​.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿ, ಡಿಸಿಎಂಗೆ ಪರಿಜ್ಞಾನ ಇದೆಯಾ? ಎಂದು ಕಿಡಿಕಾರಿದರು.
ಕೆಆರ್​ಎಸ್​ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯಾರನ್ನು ಕೇಳಿ ಅವರನ್ನು ರಾಮನಗರಕ್ಕೆ ಕರೆದುಕೊಂಡು ಬಂದ್ರಿ. ಐದು ಜನಕ್ಕೆ ಏಕೆ ಪಾಸಿಟಿವ್ ಆಗಿದೆ? ಪರಿಜ್ಞಾನ ಇದೆಯಾ ಇವರಿಗೆ? ಸರ್ಕಾರಕ್ಕೆ ಮೈಯೂ ಇಲ್ಲ, ಮೆದುಳು ಇಲ್ಲ. ಉಪ ಮುಖ್ಯಮಂತ್ರಿಗೆ ದುಡ್ಡು ಹೊಡೆಯೋದು ಅಷ್ಟೇ ಗೊತ್ತು ಎಂದು ಕಿಡಿಕಾರಿದರು.
ಕರೊನಾ ಹೆಸರಲ್ಲೂ ದುಡ್ಡು ಹೊಡೆಯುತ್ತಿದ್ದಾರೆ. ಇದೆಲ್ಲವನ್ನೂ ಈಗಲೇ ಹೇಳಲ್ಲ. ಮುಂದೆ ಹೇಳ್ತೀನಿ. ಐದು ಜನರಿಗೆ ಪಾಸಿಟಿವ್ ಬಂದಿರುವುದನ್ನು ಗುಟ್ಟಾಗಿ ಹಿಡಲು ಮುಂದಾಗಿದ್ದರು. ಗುಟ್ಟಾಗಿ ಇಟ್ಟರೆ ನಮಗೇನು ಮಾಹಿತಿ ಬರಲ್ವಾ? ತಪ್ಪು ಮಾಡಿರುವುದನ್ನು ಒಪ್ಪಿಕೊಳ್ಳಿ. ತಪ್ಪನ್ನು ಸರಿಪಡಿಸಿಕೊಳ್ಳುವ ಬಗ್ಗೆ ತೀರ್ಮಾನಕ್ಕೆ ಬನ್ನಿ. ಈ ಭಂಡತನ ಬೇಡ ಎಂದರು.
ಐಟಿ-ಬಿಟಿ ಪುನರಾರಂಭಕ್ಕೆ ಸರ್ಕಾರ ನಿರ್ಧರಿಸಿದೆ. ಐಟಿ, ಬಿಟಿ ಕಥೆ ಇರಲಿ. ಅವರು ಮನೆಯಲ್ಲೇ ಕೂತ ಕೆಲಸ ಮಾಡಬಹುದು. ಆದರೆ, ರೈತರ ಪರವಾಗಿ ಏನು ಮಾಡ್ತಿದ್ದಾರೆ? ಗ್ರೀನ್ ಝೋನ್ ಇರುವುದನ್ನು ರೆಡ್ ಝೋನ್ ಮಾಡಲು ಹೊರಟಿದ್ದಾರೆ. ನಾನು ರಾಮನಗರಕ್ಕೆ ಸೀಮಿತವಾಗಿ ಮಾತಾಡ್ತಿಲ್ಲ. ರಾಮನಗರ ಕೂಡ ಕರ್ನಾಟಕದಲ್ಲಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿಕೆಗೆ ತಿರುಗೇಟು ನೀಡಿದರು.
ಆರಂಭದಲ್ಲೇ ಸರ್ಕಾರಕ್ಕೆ ನಾನು ಹೇಳಿದ್ದೆ. ರಾಮನಗರಕ್ಕೆ ಆರೋಪಿಗಳನ್ನು ಕರೆತರುವುದನ್ನು ವಿರೋಧಿಸಿದ್ದೆ. ಆರಂಭದಲ್ಲಿ ಸಿಎಂ, ಗೃಹಮಂತ್ರಿ ಒಪ್ಪಿದ್ದರು. ಆದರೂ ಅಧಿಕಾರಿಗಳ ಒತ್ತಡಕ್ಕೆ ಮಣಿದು ರಾಮನಗರಕ್ಕೆ ಸ್ಥಳಾಂತರ ಮಾಡಿದ್ದಾರೆ. ಇದೀಗ ಕಾರಾಗೃಹವನ್ನು ಸಂಪೂರ್ಣ ಕ್ವಾರಂಟೈನ್ ಮಾಡಬೇಕಿದೆ. ಆ ಪ್ರದೇಶವನ್ನು ಲಾಕ್ಡೌನ್ ಮಾಡಬೇಕು. ಕಾರಾಗೃಹ ಸಿಬ್ಬಂದಿ ಮೇಲೆ ನಿಗಾವಹಿಸಬೇಕಿದೆ ಎಂದರು.
ಸರ್ಕಾರವನ್ನು ತಪ್ಪು ದಾರಿಗೆ ಎಳೆದ ಅಧಿಕಾರಿಗಳ ಬಗ್ಗೆ ಎಚ್ಚರವಹಿಸಬೇಕು. ಇದು ಸರ್ಕಾರದ ಹುಡುಗಾಟದ ನಿರ್ಧಾರ. ಜನರ ಗೌರವವನ್ನು ಲಘುವಾಗಿ ತೆಗೆದುಕೊಳ್ಳಬಾರದು. ಮುಂಜಾಗ್ರತೆಯಿಂದ ಆರೋಪಿಗಳನ್ನು ಸ್ಥಳಾಂತರ ಮಾಡಬೇಕು ಎಂದು ಸಲಹೆ ನೀಡಿದರು.(ದಿಗ್ವಿಜಯ ನ್ಯೂಸ್​)
ನನ್ನ ಮೇಲಿನ ದ್ವೇಷಕ್ಕಾಗಿ ಜನರಿಗೆ ತೊಂದರೆ ಕೊಡಬೇಡಿ: ಮಾಜಿ ಸಿಎಂ ಎಚ್​ಡಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × two =
Remember me
