ಕೋಲಾರ:ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವಾಚ್ಯ ಪದವೊಂದನ್ನು ಉಚ್ಛರಿಸಿದ್ದಾರೆ. ಇದು ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
ನಿನ್ನೆ (ನ.22) ಶ್ರೀನಿವಾಸಪುರ ತಾಲ್ಲೂಕು ಮಾಸ್ತೇನಹಳ್ಳಿ ಗ್ರಾಮದಲ್ಲಿ ಶಿಥಿಲವಾದ ಸರ್ಕಾರಿ ಶಾಲೆ ವೀಕ್ಷಣೆಗೆ ಕುಮಾರಸ್ವಾಮಿ ಆಗಮಿಸಿದ್ದರು. ವೀಕ್ಷಣೆಯ ಬಳಿಕ ಕಾರು ಹತ್ತುವ ವೇಳೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ವಿರುದ್ಧ ಕುಮಾರಸ್ವಾಮಿ ಆಡಿರುವ ಮಾತು, ಇದೀಗ ವೈರಲ್ ಆಗುತ್ತಿದೆ.
ಮಾಜಿ ಸ್ಪೀಕರ್ ರಮೇಶ್ ಕುಮಾರ್​ ಅವರನ್ನು ಸೂ…ಮಗ ಎಂದು ಎಚ್​.ಡಿ.ಕುಮಾರಸ್ವಾಮಿ ಕರೆದಿದ್ದಾರೆ. ಪ್ರವಾಸದ ವೇಳೆ ಮಾಸ್ತೇನಹಳ್ಳಿ ಸರ್ಕಾರಿ ಶಾಲೆಯ ಮಕ್ಕಳು ಕಟ್ಟಡ ಸರಿಪಡಿಸುವಂತೆ ಕುಮಾರಸ್ವಾಮಿ ಎದುರು ಪ್ರತಿಭಟನೆ ಮಾಡಿದ್ದರು. ಹೀಗಾಗಿ ಕುಮಾರಸ್ವಾಮಿ, ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು.
ಮಕ್ಕಳೊಂದಿಗೆ ತೆರಳಿ ಶಾಲಾ ಕಟ್ಟಡ ವೀಕ್ಷಿಸಿ, ಅವ್ಯವಸ್ಥೆಯನ್ನು ಕಂಡು ಎಚ್.ಡಿ.ಕುಮಾರಸ್ವಾಮಿ ಕೋಪಗೊಂಡಿದ್ದರು. ಈ ವೇಳೆ ಕಾರು ಹತ್ತುತ್ತಾ ರಮೇಶ್ ಕುಮಾರ್ ಅಷ್ಟುದ್ದ ಭಾಷಣ ಮಾಡ್ತಾನೆ ಸೂ…ಮಗ ಎಂದು ಬೈದಿದ್ದಾರೆ.
ಎಚ್​.ಡಿ. ಕುಮಾರಸ್ವಾಮಿ ಆಡಿರುವ ಮಾತು ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಾರು​ ಹತ್ತುವ ವೇಳೆ ಡ್ರೈವರ್ ಸೆಲ್ಫಿ ವಿಡಿಯೋ ಕ್ಯಾಮರಾ ಆನ್ ಮಾಡಿದ್ದ. ಇದನ್ನು ಗಮನಿಸದ ಮಾಜಿ ಸಿಎಂ, ಮಾಜಿ ಸ್ಪೀಕರ್ ಅವರನ್ನು ನಿಂದಿಸಿದ್ದಾರೆ. ಇದೀಗ ಈ ವಿಡಿಯೋ ಎಲ್ಲೆಡೆ ಎಲ್ಲೆಡೆ ವೈರಲ್ ಆಗುತ್ತಿದೆ.
Sign in to your account
Please enter an answer in digits:six + four =
Remember me
