
ಬೆಂಗಳೂರು:ಜೆಡಿಎಸ್ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಮತ್ತು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ನಡುವೆ ಹಗ್ಗ ಜಗ್ಗಾಟ ನಡೆಯುತ್ತಿರುವ ಹೊತ್ತಿನಲ್ಲಿಯೇ ‘ಉಚ್ಛಾಟನೆ’ ಪತ್ರವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಭಾರಿ ಸದ್ದು ಮಾಡಿತು.ನಮ್ಮದೇ ನಿಜವಾದ ಜೆಡಿಎಸ್ ಎಂದು ಮೊನ್ನೆಯಷ್ಟೆ ಹೇಳಿಕೊಂಡಿದ್ದ ಪಕ್ಷದ ರಾಜ್ಯ ಘಟಕ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಹೆಸರಿನ ಲೆಟರ್‌ಹೆಡ್‌ನಲ್ಲಿ ‘ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮತ್ತು ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ’ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ ಎಂದು ಪ್ರಕಟಣೆ ನೀಡಿದ್ದು ಸುದ್ದಿಯಾಯಿತು.ಲೆಟರ್‌ಹೆಡ್‌ನಲ್ಲಿ ಸಿಎಂ ಇಬ್ರಾಹಿಂ ಅವರದ್ದೆ ಸಹಿ ಇದ್ದ ಕಾರಣ ಸಹಜವಾಗಿ ಇದು ನಿಜವೆಂದು ಭಾವಿಸಿ ಸುದ್ದಿ ಪ್ರಕಟಿಸಿದ್ದರಿಂದ ಒಂದು ರೀತಿ ಗೊಂದಲ ವಾತಾವರಣವೂ ನಿರ್ಮಾಣವಾಗಿತ್ತು.ತೀರ್ಮಾನ ತೆಗೆದುಕೊಳ್ಳಲು ಸಿಎಂ ಇಬ್ರಾಹಿಂ ಸ್ವತಂತ್ರರು ಎಂದು ಎಚ್‌ಡಿಕೆ ಪ್ರತಿಕ್ರಿಯಿಸಿದರೆ, ಹಾಸನದಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಎಚ್.ಡಿ.ರೇವಣ್ಣ, ಕಾಂಗ್ರೆಸ್‌ಗೆ ಇಬ್ರಾಹಿಂ ಸೇರಿಕೊಳ್ಳುವುದಾದರೆ ನಮ್ಮ ಅಭ್ಯಂತರವೇನಿಲ್ಲ. ನಾವೆಲ್ಲ 19 ಶಾಸಕರು ಒಟ್ಟಾಗಿದ್ದೇವೆ ಎಂದು ಟಾಂಗ್ ನೀಡಿದ್ದರು. ಮತ್ತೊಂದೆಡೆ ಶಾಸಕ ಸಮೃದ್ಧಿ ಮಂಜುನಾಥ್ ಅವರು ತೆವಲಿಗೋಸ್ಕರ ಮಾತನಾಡಬಾರದು. ನಿಮ್ಮ ಆತ್ಮಸಾಕ್ಷಿ ಮುಟ್ಟಿ ನೋಡಿಕೊಳ್ಳಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ನಕಲಿ ಪತ್ರ ಎಂದು ಇಬ್ರಾಹಿಂತಮ್ಮ ಲೆಟರ್ ಹೆಡ್ ಮತ್ತು ಸಹಿಯನ್ನು ದುರುಪಯೋಗಪಡಿಸಿಕೊಂಡು, ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಅವರ ಉಚ್ಛಾಟನೆ ಹೇಳಿಕೆಯನ್ನು ನೀಡಲಾಗಿದ್ದು, ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಟರ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಸ್ವತಃ ಸಿಎಂ ಇಬ್ರಾಹಿಂ ಅವರೇ ಪೊಲೀಸರಿಗೆ ದೂರು ನೀಡಿದ ಬಳಿಕ ಉಚ್ಛಾಟನೆ ಪತ್ರದ ಬಿಸಿ ತಣ್ಣಗಾಯಿತು.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:4 + 6 =
Remember me
