ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಅವರು ನನ್ನ ಮೇಲೆ ವೈಯಕ್ತಿಕವಾಗಿ ವಾಗ್ದಾಳಿ ಮಾಡಿದ್ದಾರೆ. ಡಿಸಿಎಂ ನನ್ನ ಮೇಲೆ ಸವಾಲು ಹಾಕಿದ್ದರಲ್ಲ ಅದನ್ನು ನಾನು ಸ್ವೀಕಾರ ಮಾಡುತ್ತೇನೆ. ನಾನು ಪಲಾಯನವಾದ ಮಾಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಹೇಳಿದರು.
ನಗರದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಿಎಂ ಎಚ್​ಡಿಕೆ, ಆರ್ಥಿಕ ಪರಿಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಅದಕ್ಕೆ ನಾನು ಸಂಪೂರ್ಣವಾಗಿ ಸ್ವಾಗತ ಮಾಡುತ್ತೇನೆ. ಮೈತ್ರಿ ಸರ್ಕಾರದಲ್ಲಿ ಯಾವುದೇ ಷರತ್ತು ಹಾಕಿಲ್ಲ ಅಂತ ಹೇಳುತ್ತಿದ್ದಾರೆ. ಆದರೆ, ಸರ್ಕಾರದ ಆರಂಭದ ದಿನದಿಂದಲೇ ಷರತ್ತು ಹಾಕುತ್ತಿದ್ದರು. ರೈತರ ಸಾಲಮನ್ನಾ ಮಾಡುವುದಕ್ಕಾಗಿ ಆರ್ಥಿಕ ಇಲಾಖೆಯನ್ನು ನನ್ನ ಬಳಿಯೇ ಇಟ್ಟುಕೊಂಡಿದ್ದೆ. ನಾನು ಆರ್ಥಿಕ ಇಲಾಖೆ ಇಟ್ಟುಕೊಂಡಿಲ್ಲ ಅಂದಿದ್ದರೆ ಸಾಲಮನ್ನಾ ಮಾಡಲು ಆಗುತ್ತಿರಲಿಲ್ಲ ಎಂದರು.
ಕಾಂಗ್ರೆಸ್ ಪಕ್ಷವೇ ನೇರ ಕಾರಣನಾನು ರಾಜಕೀಯ ವಿಲನ್ ಹೌದು. ಇನ್ನೇನು ಅವರ ಸ್ನೇಹಿತನಾಗಲು ಆಗುತ್ತಾ? ಇವರು ಮಾಡುವ ತಪ್ಪು ಕೆಲಸಕ್ಕೆ ನಾನು ವಿಲನ್. ತಾಜ್ ವೆಸ್ಟೆಂಡ್​ನಲ್ಲಿ ಇದ್ದು ರಾಜಕೀಯ ಮಾಡಿದೆ ಎಂದು ಹೇಳುತ್ತಾರೆ. ಹೌದು, ನಾನು ಅಧಿಕಾರ ಮಾಡಿದೆ. ಪ್ರತಿ ದಿನದ ದಾಖಲೆ ನನ್ನ ಬಳಿಯೇ ಇದೆ. ಇದೆಲ್ಲವನ್ನೂ ನಾನು ವಿಧಾನಸಭೆಯಲ್ಲಿ ಚರ್ಚೆ ಮಾಡ್ತೀನಿ. ನೀವು ನನ್ನನ್ನು ಕೈಗೊಂಬೆಯಂತೆ ಮಾಡಿಕೊಂಡಿದ್ರಿ. ಹೇಳುತ್ತಾ ಹೋದರೆ ಇಡೀ ಚರಿತ್ರೆ ಹೇಳಲು ಎರಡು ದಿವಸ ಬೇಕು. ವಿಧಾನಸಭೆಯಲ್ಲಿ ಬೇಕಾದ್ರೆ ಎಲ್ಲವೂ ಚರ್ಚೆ ಮಾಡಬಲ್ಲೆ. ಮೈತ್ರಿ ಸರ್ಕಾರದ ಪತನವಾಗಲು ಕಾಂಗ್ರೆಸ್ ಪಕ್ಷವೇ ನೇರ ಕಾರಣ ಎಂದು ಎಚ್​ಡಿಕೆ ಹೇಳಿದರು. ಅಲ್ಲದೆ, ತಾಜ್​ ವೆಸ್ಟೆಂಡ್​ ಹೋಟೆಲ್​ನಲ್ಲಿ ನಾನೇನು ಮಾಡಬಾರದ್ದು ಮಾಡಿದ್ನಾ? ಎಂದು ಪ್ರಶ್ನೆ ಮಾಡಿದರು.
ಜನರು ಚೀ ಥೂ ಅನ್ನೂದು ದೂರವಿಲ್ಲ14 ತಿಂಗಳು ನನ್ನನ್ನು ಮುಖ್ಯಮಂತ್ರಿ ಮಾಡಿದ್ದಕ್ಕೆ ನಮಸ್ಕಾರ ಕಣ್ರಪ್ಪ. ನಾನು ಕೃತಜ್ಞತೆಯನ್ನು ನಿಮ್ಮಿಂದ ಕಲಿಯಬೇಕಿಲ್ಲ. ಗೃಹಲಕ್ಷ್ಮಿ ಯೋಜನೆ ಎಷ್ಟು ದಿನ ಇರುತ್ತೆ‌? ಎಷ್ಟು ಜನಕ್ಕೆ ಬಂದಿದೆ? ಪಾರ್ಲಿಮೆಂಟ್​ ಬಳಿಕ ಎಲ್ಲವೂ ಗೊತ್ತಾಗುತ್ತೆ. ರಾಜಸ್ಥಾನಲ್ಲಿ 10 ಸಾವಿರಕ್ಕೆ ಏಕೆ ಘೋಷಣೆ ಮಾಡಿದ್ರಿ? ಈ ನಿಮ್ಮ ಗ್ಯಾರಂಟಿ ಯೋಜನೆ ಬಗ್ಗೆ ಜನರು ಚೀ ಥೂ ಅನ್ನೂದು ದೂರವಿಲ್ಲ ಎಂದರು.
ಇಡಿ ಮಣ್ಣು ಮೂರಡಿ ನೆಲದಲ್ಲಿರಾಮನಗರ ಜಿಲ್ಲೆಯಲ್ಲಿ ಎಷ್ಟು ಕೈಗಾರಿಕೆ ಇದ್ದಾವೆ ಲೆಕ್ಕೆ ಹೇಳಿ? ಬಿಡದಿಯಲ್ಲಿ ಜಪಾನ್ ಟೌನ್​ಶಿಪ್ ಇತ್ತು ಯಾಕೆ ಮಾಡೋಕೆ ಆಗಲಿಲ್ಲ? ಬಿಡದಿಯ ಹಾರೋಹಳ್ಳಿ ಇಂಡಸ್ಟ್ರಿಯಲ್ ಯಾಕೆ ಅಭಿವೃದ್ಧಿಯಾಗಲಿಲ್ಲ? ಡಿಕೆ ಶಿವಕುಮಾರ್ ಸಾಹೇಬ್ರೆ ಕನಕಪುರದಲ್ಲಿ ಮೆಗಾ ಡೈರಿಗಾಗಿ ಲ್ಯಾಂಡ್ ಖರೀದಿ ಮಾಡಿದ್ರಲ್ಲ, ರೈತರಿಗೆ ಎಷ್ಟು ಸಿಗ್ತು? ನಿಮ್ಮ ಪಟಾಲಯಂ ಎಲ್ಲ ಸೇರಿಕೊಂಡು ಏನು ಮಾಡಿದ್ರಿ? ಅಧಿಕಾರ ಯಾವತ್ತೂ ಶಾಶ್ವತ ಅಲ್ಲ ಮಿಸ್ಟರ್ ಡಿ.ಕೆ. ಶಿವಕುಮಾರ್. ಕಾಲ ಚಕ್ರ ತಿರುಗುತ್ತಾ ಇರುತ್ತೆ. ಮೊನ್ನೆ ಒಂದು ಹಾಡು ಕೇಳ್ತಿದ್ದೆ ತೋಟದಲ್ಲಿ, ಆರಡಿ ಮೂರಡಿ ನೆಲದಲ್ಲಿ ಇಡಿ ಮಣ್ಣು ಮೂರಡಿ ನೆಲದಲ್ಲಿ ಎಂಬ ಹಾಡು ಕೇಳ್ತಿದ್ದೆ ಎಂದು ಮಾರ್ಮಿಕವಾಗಿ ಹೇಳಿದರು.
ಪ್ರಮಾಣ ಮಾಡಿನೀವು ಅಧಿಕಾರಿಗಳ ವರ್ಗಾವಣೆಯಲ್ಲಿ ದುಡ್ಡು ತೆಗೆದುಕೊಂಡಿಲ್ವಾ? ಧರ್ಮಸ್ಥಳಕ್ಕೆ ಬಂದು ಆಣೆ ಮಾಡುತ್ತೀರಾ ಎಂದು ಸವಾಲು ಹಾಕಿದ್ದೀರಿ ಅಲ್ವಾ? ನಾನು ಡಿ.ಕೆ. ಶಿವಕುಮಾರ್ ಸವಾಲು ಸ್ವೀಕರಿಸುತ್ತೇನೆ. ಯಾವುದೇ ದೇವಸ್ಥಾನಕ್ಕೆ ಬರುವುದಕ್ಕೆ ಸಿದ್ಧ. ನಿಮ್ಮ ಸಿಎಂ, ಡಿಸಿಎಂ ಮತ್ತು ಮಂತ್ರಿಗಳು ದೇವಸ್ಥಾನಕ್ಕೆ ಬನ್ನಿ, ವರ್ಗಾವಣೆ ಹಣ ತಗೆದುಕೊಂಡಿಲ್ಲ ಎಂದು ಪ್ರಮಾಣ ಮಾಡಿ, ನಾನು ಕೂಡ ಪ್ರಮಾಣ ಮಾಡ್ತೀನಿ. ನಾನು ಯಾವುದೇ ಅಧಿಕಾರಿ ಹತ್ತಿರ ವರ್ಗಾವಣೆಗಾಗಿ ದುಡ್ಡು ತೆಗೆದುಕೊಂಡಿಲ್ಲ. ನೀವು ಈ 5 ತಿಂಗಳಲ್ಲಿ ವರ್ಗಾವಣೆಗಾಗಿ ಹಣ ತಗೆದುಕೊಂಡಿಲ್ಲ ಅಂತ ಪ್ರಮಾಣ ಮಾಡಿ ಎಂದು ಸವಾಲು ಹಾಕಿದರು.
ದೇವರ ಮುಂದೆ ಹೇಳಲಿನನ್ನ ಜೀವನದಲ್ಲಿ ಯಾವುದೇ ಅಧಿಕಾರಿಯ ಹತ್ತಿರ ಹಣ ತೆಗದುಕೊಂಡಿಲ್ಲ. ಯಾವನಾದರೂ ಒಬ್ಬ ಅಧಿಕಾರಿ ಎಚ್​ಡಿಕೆ ಮತ್ತು ರೇವಣ್ಣನಿಗೆ ದುಡ್ಡು ಕೊಟ್ಟಿದ್ದೀನಿ ಎಂದು ದೇವರ ಮುಂದೆ ಹೇಳಲಿ ಎಂದ ಎಚ್​​​ಡಿಕೆ, ನಾನು ಆವತ್ತು ಸಿನಿಮಾ ಕ್ಷೇತ್ರದಲ್ಲಿದ್ದೆ. ಆವತ್ತು ನಾನು ಭೂಮಿ‌ ಖರೀದಿ ಮಾಡಿದೆ. ಸಿನಿಮಾ ಕ್ಷೇತ್ರದಲ್ಲಿ ಬಂದ ಹಣದಿಂದ ಖರೀದಿಸಿದ ಭೂಮಿ ಅದು. ಆ ಭೂಮಿಗೆ ಈಗ ಬೆಲೆ ಬಂದಿದೆ. ಅದಕ್ಕೆ ಬೆಂಗಳೂರು ಬ್ರ್ಯಾಂಡ್ ಅಂತ ಬಂದಿದ್ದು ಅಲ್ಲ ಎಂದರು.
ಲಘುವಾಗಿ ಮಾತನಾಡುವುದನ್ನು ನಿಲ್ಲಿಸಿಏನು ಅಭಿವೃದ್ಧಿ ಮಾಡಿದ್ದೇವೆ ಅಂತ ರಾಮನಗರ ಜಿಲ್ಲೆಯ ಇತಿಹಾಸ ನನಗೆ ಹೇಳಿ ಕೊಡಬೇಕಾಗಿಲ್ಲ. ಕುಮಾರಸ್ವಾಮಿ, ರಾಮನಗರ ತಾಲ್ಲೂಕಿಗೆ ಮಾತ್ರ ಅಲ್ಲ ಇದದ್ದು, ಕನಕಪುರದಲ್ಲಿ ಎಷ್ಟು ಅಭಿವೃದ್ಧಿ ಕೆಲಸಗಳಾಗಿವೆ? ರಸ್ತೆ ಕೆಲಸಗಳು ಯಾರು ಮಾಡಿದ್ದು? ಕನಕಪುರ ಹೊಸ ಬ್ರಿಡ್ಜ್ ಕಟ್ಟಿದ್ದು ನಾನು. ಎಲ್ಲವೂ ದಾಖಲೆ ಇಟ್ಟಿದ್ದೇನೆ. ವಿಧಾನಸಭೆಯಲ್ಲಿ ಚರ್ಚೆ ಮಾಡೋಣ. ಅದನ್ನು ಬಿಟ್ಟು ಲಘುವಾಗಿ ಮಾತನಾಡುವುದನ್ನು ನಿಲ್ಲಿಸಿ ಎಂದು ಹೇಳಿದರು.
ಅಮಾರಣಾಂತ ಉಪವಾಸ ಮಾಡ್ತೀನಿರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ನಾಮಕರಣ ಮಾಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಎಚ್​ಡಿಕೆ, ನಾನು ಸವಾಲು ತಗೆದುಕೊಳ್ಳುತ್ತೇನೆ ಎಂದು ಬೆಂಚ್ ತಟ್ಟಿ ಜೋರು ಧ್ಚನಿಯಲ್ಲಿ ಮಾತನಾಡಿದರು. ನನಗೆ ಜಿಲ್ಲೆಯ ಮೇಲೆ ವ್ಯವಹಾರಿಕ ಸಂಬಂಧವಿಲ್ಲ, ಭಾವನಾತ್ಮಕ ಸಂಬಂಧವಿದೆ. ಹಾಗೇ ಹೆಸರು ಬದಲಾವಣೆ ಮಾಡಿದರೆ ಅಮರಣಾಂತ ಉಪವಾಸ ಮಾಡ್ತೀನಿ. ಆರೋಗ್ಯ ಸರಿ ಇಲ್ಲ ಅಂದ್ರು ಕೊನೆ ತನಕ ಹೋರಾಟ ಮಾಡ್ತೀನಿ ಎಂದು ಸವಾಲು ಹಾಕಿದರು.
ಅಂತ್ಯ ಕಾಣೋದು ರಾಮನಗರದ ಮಣ್ಣಲ್ಲಿರಾಮನಗರ ಜಿಲ್ಲೆ ಮಾಡಿ 17 ವರ್ಷ ಆಯ್ತು, ಈಗ ಯಾಕೆ ಬದಲಾವಣೆ ಮಾಡ್ತಿದ್ದಿರಾ? ರಾಮನಗರ ಹೆಸರು ಇಟ್ಟುಕೊಂಡೇ ಯಾಕೆ ಅಡಿ ಲೆಕ್ಕ ಮಾಡಲು ಆಗ್ತಿಲ್ಲ? 450 ಕೋಟಿ ಆಸ್ಪತ್ರೆ ಮಾಡಲು ಕನಕಪುರದಲ್ಲಿ ಅವಕಾಶ ಕೊಟ್ಟೆ. 100 ಕೋಟಿ ಕೂಡ ಬಿಡುಗಡೆ ಮಾಡಿದ್ದೆ, ಬಿಜೆಪಿ ಬಂದಾಗ ಚಿಕ್ಕಬಳ್ಳಾಪುರಕ್ಕೆ ತೆಗೆದುಕೊಂಡು ಹೋದರು. ಕನಕಪುರ ಆಸ್ಪತ್ರೆ ಮಾಡಲು ಈಗ ಹಣ ಬಿಡುಗಡೆ ಮಾಡಿಸಿಕೊಳ್ಳಲಿ. ಮೆಡಿಕಲ್ ಕಾಲೇಜು ಮಾಡಿಕೊಳ್ಳಿ ನಾನೇನೂ ಹಿಡಿದುಕೊಂಡಿದ್ದೇನಾ? ನನ್ನ ಜೀವನದ ಕೊನೆ ಅಂತ್ಯ ಕಾಣೋದು ಇದೇ ರಾಮನಗರದ ಮಣ್ಣಲ್ಲಿ ಎಂದರು.
ಬಿಲ ಕೊರೆದು ಅವಕಾಶ ಮಾಡಿ ಕೊಟ್ಟಿದ್ದೇ ನೀವುಸಿಎಂ ಪದೇಪದೆ ಹೇಳ್ತಿದ್ದಾರೆ ನಾನು ತಾಜ್ ವೆಸ್ಟ್ ಎಂಡ್​ನಲ್ಲಿ ಇದ್ನಂತೆ ಜನರಿಗೆ ಸಿಗ್ತಿರಲಿಲ್ಲವಂತೆ. ಅವರಿಗೆ ನಾನು ರಾಜಕೀಯ ವಿಲನ್ ಅಂತೆ. ಹೌದು, ನಾನು ಅವರಿಗೆ ರಾಜಕೀಯ ವಿಲನ್. ನಾನು 18 ತಿಂಗಳ ಅವಧಿಯಲ್ಲಿ ನನ್ನ ಕಾರ್ಯಕಲಾಪಗಳ ದಾಖಲೆ ನಿಮ್ಮ ಮುಂದೆ ಇಟ್ಟಿದ್ದೇನೆ. ಅಧಿವೇಶನದಲ್ಲಿ ಚರ್ಚೆ ಮಾಡ್ತೀನಿ. ನಾನು ಕೃಷ್ಣಾದಲ್ಲಿ ಜನರಿಗೆ, ಶಾಸಕರಿಗೆ ಯಾವ ರೀತಿ ಸ್ಪಂದಿಸಿದೆ ಅನ್ನೋ ದಾಖಲೆ ಕೊಡ್ತೀನಿ. ನಾನು ಸಿಎಂ ಅನ್ನೋದು ಬಿಡದೆ, ಇಸ್ಪೀಟ್ ಎಲೆ ಎಸೆದಂತೆ ಪೊಪೆಟ್ ತರ ನಡೆಸಿಕೊಂಡ್ರಿ. ಬಿಜೆಪಿಯವರು ಸರ್ಕಾರ ತೆಗೆಯಲಿಕ್ಕೆ ಎಲ್ಲ ವೇದಿಕೆ ಸಿದ್ದ ಮಾಡಿಕೊಟ್ಟಿದ್ದು ಸಿಎಂ, ಡಿಸಿಎಂ ನೀವೆ. ಬಿಜೆಪಿಯವರಿಗೆ ಬಿಲ ಕೊರೆದು ಅವಕಾಶ ಮಾಡಿ ಕೊಟ್ಟಿದ್ದೇ ನೀವು. ಪದೇಪದೆ ವೆಸ್ಟ್ ಎಂಡ್ ಹೋಟೆಲ್, ಅಮೆರಿಕದಲ್ಲಿ ಕೂತಿದ್ದ ಅಂತೀರಲ್ಲ, ನಾನು ಅಮೆರಿಕಗೆ ಹೋಗಿದ್ದು ನಮ್ಮ ಸ್ವಾಮೀಜಿಯವರು ದೇವಸ್ಥಾನ ಉದ್ಘಾಟನೆಗೆ ಕರೆದಿದ್ರು ಅದಕ್ಕೆ ಹೋಗಿದ್ದೆ. ಸಿಎಂ ಅವರೇ ನಿಮ್ಮ ಸರಕಾರದ ಚರಿತ್ರೆ ಸದನದಲ್ಲಿ ಹೇಳೋದ್ರೆ 2 ದಿನ ಬೇಕಾಗುತ್ತೆ ಅಷ್ಟಿದೆ ಎಂದು ಹೇಳಿದರು.
Tiger Claw Case: ಅರಣ್ಯಾಧಿಕಾರಿಗಳ ಕ್ರಮ ಪ್ರಶ್ನಿಸಿ ಹೈಕೋರ್ಟ್​​ ಮೊರೆಹೋದ ನಟ ಜಗ್ಗೇಶ್

ನವಿಲು ಮಾಂಸ ಭಕ್ಷಣೆಗೆ ಮುಂದಾಗಿದ್ದ ತುಮಕೂರಿನ ಮೂವರು ಅರೆಸ್ಟ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + four =
Remember me
