ಮಂಡ್ಯ:ರಾಜ್ಯದ ಜನರು ಎರಡು ಬಾರಿ ಅಧಿಕಾರ ನಡೆಸಲು ಅವಕಾಶ ನೀಡಿರುವುದು ನಿಜ. ಮೂರನೇ ಬಾರಿ ಆಶೀರ್ವಾದ ಮಾಡುವುದರಿಂದ ಜನತೆಗೆ ಒಳ್ಳೆಯದಾಗುತ್ತದೆ. ಯಾವುದೋ ದೊಡ್ಡ ಮಾಲ್ ಕಟ್ಟುವ ಸಲುವಾಗಿ ನಾನು ಮತ ಕೇಳುತ್ತಿಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಈ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ಗೆ ಟಾಂಗ್ ಕೊಟ್ಟಿದ್ದಾರೆ.
ಇದನ್ನೂ ಓದಿ:ಮುಳಬಾಗಿಲ ದೋಸೆ ಇಂದು ಸಂಪರ್ಕ ಕ್ಷೇತ್ರದ ಅಭಿವೃದ್ಧಿಯಿಂದಾಗಿ ಎಲ್ಲೆಡೆ ಪ್ರಸಿದ್ಧವಾಗಿದೆ: ಕೋಲಾರದಲ್ಲಿ ಮೋದಿ ಭಾಷಣ
ಇತ್ತೀಚೆಗೆ ಡಿಕೆಶಿ ಮಾತನಾಡುತ್ತಾ, ಕುಮಾರಸ್ವಾಮಿಗೆ ಎರಡು ಬಾರಿ ಅವಕಾಶ ನೀಡಿದ್ದೀರಿ. ಈಗ ನನಗೆ ಅವಕಾಶ ನೀಡಿ ಎಂದು ಹೇಳಿದ್ದರು. ಈ ಬಗ್ಗೆ ಎಚ್​​ಡಿಕೆ ಮಂಡ್ಯದಲ್ಲಿ ಪ್ರತಿಕ್ರಿಯಿಸಿ ನಾವು ಜನತೆಯ ಬದುಕು ಸರಿಪಡಿಸಲು ಮತ ಕೇಳುತ್ತಾ ಇದ್ದೇವೆ. ಅವರು ಏನು ಮಾಡುತ್ತೇವೆ ಎಂದು ಮತ ಕೇಳುತ್ತಿದ್ದಾರೆ ಎಂಬುದನ್ನು ಜನತೆ ಅರ್ಥ ಮಾಡಿಕೊಳ್ಳಬೇಕಿದೆ ಎಂದರು.
80 ಶಾಸಕರ ಬೆಂಬಲ‌ ನೀಡಿಯೂ‌ ಎಚ್​ಡಿಕೆ ಸರಿಯಾಗಿ‌ ಉಪಯೋಗಿಸಿಕೊಳ್ಳಲಿಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್​ನ 17 ಜನ ಶಾಸಕರು ಪಕ್ಷಾಂತರವಾಗಿರುವಾಗ ಯಾವ ರೀತಿ ಉಪಯೋಗ ಮಾಡಿಕೊಳ್ಳಲಿ? ನಾನು ಏನು ತಪ್ಪು ಮಾಡಿದೆ ಎಂದು ಕಾಂಗ್ರೆಸ್ ಶಾಸಕರು ಪಕ್ಷಾಂತರವಾದರು? ರೈತರ ಸಾಲ ಮನ್ನಾ ಮಾಡಿದ್ದು ತಪ್ಪೇ? ನೀರಾವರಿ ಮಂತ್ರಿಯಾಗಿ ಒಳ್ಳೆಯ ಅವಕಾಶ ದೊರಕಿಸಿಕೊಟ್ಟಿದ್ದು ತಪ್ಪಾ? ಎಂದು ಎಚ್​ಡಿಕೆ ಪ್ರಶ್ನಿಸಿದರು.
ಇದನ್ನೂ ಓದಿ:ಶೆಟ್ಟರ್ v/s ಬಿಜೆಪಿ ಹೈಕಮಾಂಡ್!; ಹು-ಧಾ ಸೆಂಟ್ರಲ್​ನಲ್ಲಿ ರಂಗೇರಿದ ಚುನಾವಣಾ ಅಖಾಡ
ಕಾಂಗ್ರೆಸ್‌ನ ಶಾಸಕರಿಗೆ 19 ಸಾವಿರ ಕೋಟಿ ಅನುದಾನ ಕೊಟ್ಟಿದ್ದೆ. ಅವರ ಎಲ್ಲಾ ಯೋಜನೆಗಳನ್ನು ಮುಂದುವರೆಸಿದ್ದೆ. ನಾನು ಏನು ಮಾಡಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅವರು ಕೊಟ್ಟ ಎಲ್ಲಾ ಭಾಗ್ಯಗಳಿಂದ ಜನ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರಾ? ಎಚ್​ಡಿಕೆ ಕಿಡಿಕಾರಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 5 =
Remember me
