ಶಿರಸಿ:ರಾಜ್ಯ ಬಿಜೆಪಿಯಲ್ಲಿ ಕಾಳಸಂತೆಕೋರರು ಹಾಗೂ ಬೆಟ್ಟಿಂಗ್​ ದಂಧೆ ನಡೆಸುವವರು ಹೆಚ್ಚಾಗಿ ಇದ್ಧಾರೆ. ಅಂಥವರಿಗೆ ಹೆಚ್ಚಿನ ಟಿಕೆಟ್​ ನೀಡಲಾಗಿದೆ ಎಂದು ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಬುಧವಾರ ಶಿರಸಿಯಲ್ಲಿ ಪಂಚರತ್ನ ರಥಯಾತ್ರಯನ್ನು ಉದ್ದೇಶಿಸಿ ಮಾತನಾಡಿದ ಎಚ್​.ಡಿ.ಕೆ ಬಿಜೆಪಿ ನಾಯಕರು ನೀಡುವ ಹೇಳಿಕೆಗೂ ಮಾಡುವ ಕೆಲಸಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಎಂದು ಹೇಳಿದ್ದಾರೆ.
ಇನ್ನು ಮಂಗಳವಾರ ಬಿಡುಗಡೆಯಾಗಿರುವ ಬಿಜೆಪಿ ಪಟ್ಟಿ ಕುರಿತು ಪ್ರತಿಕ್ರಿಯಿಸಿ ಆ ಪಕ್ಷದಲ್ಲಿ ಇರುವವರು ರೌಡಿ ಶೀಟರ್​, ಕಾಳ ಸಂತೆಕೋರರು, ಬೆಟ್ಟಿಂಗ್​​​ ದಂಧೆಕೋರರು ಇಂತಹವರಿಗೆ ಟಿಕೆಟ್​ ನೀಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ:ಶಾಲೆಗೆ ಬಾಂಬ್​ ಬೆದರಿಕೆ; ಶೋಧ ಕಾರ್ಯಾಚರಣೆ
2004ರ ರಾಜ್ಯ ವಿಧಾನಸಭೆ ಚುನಾವಣೆ ವೇಳೆ ಅನೇಕರು ಜೆಡಿಎಸ್​ ತೊರೆದು ಕಾಂಗ್ರೆಸ್​-ಬಿಜೆಪಿ ಸೇರಿದ್ದರು. ಆದರೆ, ಅಲ್ಲಿ ಈಗ ಟಿಕೆಟ್​ ಸಿಗದ ಕಾರಣ ಮಾತೃಪಕ್ಷಕ್ಕೆ ವಾಪಸ್ ಆಗುತ್ತಿದ್ದಾರೆ. ಪಕ್ಷ ತೊರೆದವರಿಗೆ ಇನ್ನೆರಡು ವರ್ಷಗಳಲ್ಲಿ ಬುದ್ದಿ ಬರಲಿದೆ. ಇನ್ನೆರಡು ದಿನಗಳಲ್ಲಿ ಪಕ್ಷಕ್ಕೆ ವಾಪಸ್ಸಾಗುವವರ ಹೆಸರು ಅಂತಿಮ ಆಗಲಿದೆ ಎಂದು ತಿಳಿಸಿದ್ದಾರೆ.
ಕಳೆದ ಬಾರಿ ಸಮ್ಮಿಶ್ರ ಸರ್ಕಾರ ರಚನೆಗೆ ಆದ್ಯತೆ ನೀಡಿದ್ದೀರಿ. ಆದರೆ, ಈ ಬಾರಿ ಹಾಗಾಗಲು ಬಿಡಬೇಡಿ ಎರಡು ರಾಷ್ಟ್ರೀಯ ಪಕ್ಷಗಳ ಆಳ್ವಿಕೆಯನ್ನು ನೀವು ನೋಡಿದ್ದು ಪ್ರಾದೇಶಿಕ ಪಕ್ಷವಾದ ಜೆಡಿಎಸ್​ಗೆ ಒಮ್ಮೆ ಅಧಿಕಾರ ಕೊಡಿ ಎಂದು ವಿನಂತಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್​ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 5 =
Remember me
