ಬೆಂಗಳೂರು:‘ನಿಮಗೆ ಮತ್ತೊಮ್ಮೆ ರಾಜ್ಯದ ದೊರೆಯಾಗುವ ಯೋಗವಿದೆ. ಜನವರಿ ನಂತರ ಎಲ್ಲವೂ ಒಳ್ಳೆಯದಾಗಲಿದೆ’ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಅವಧೂತ ವಿನಯ್ ಗುರೂಜಿ ಭವಿಷ್ಯ ಹೇಳಿದ್ದಾರೆ.
ಗುರೂಜಿ ಟಿ.ಎ ಶರವಣ ನಿವಾಸಕ್ಕೆ ಭೇಟಿ ನೀಡಿದ್ದ ವೇಳೆ ಕುಮಾರಸ್ವಾಮಿಗೆ ಈ ಭವಿಷ್ಯ ಹೇಳಿದ್ದಾರೆ. ರಾಜ್ಯದಲ್ಲಿ ಜೆಡಿಎಸ್​ಗೆ ಒಳ್ಳೆಯ ಕಾಲ ಬರಲಿದೆ. ಜತೆಗೆ ನಿಖಿಲ್ ಕುಮಾರಸ್ವಾಮಿಗೆ ಉತ್ತಮ ಭವಿಷ್ಯವಿದೆ. ಮುಂದಿನ ದಿನಗಳಲ್ಲಿ ನಿಖಿಲ್ ಕುಮಾರಸ್ವಾಮಿ ಶಾಸಕರಾಗುತ್ತಾರೆ ಎಂದು ತಿಳಿಸಿರುವುದಾಗಿ ಮೂಲಗಳು ಹೇಳಿವೆ.
ನಿಖಿಲ್​ಗೆ ಗಂಡು ಮಗುವಿನ ಯೋಗವಿದೆ ಎಂದು ಗುರೂಜಿ ಹೇಳಿದ್ದಾರೆ ಎನ್ನಲಾಗಿದೆ. ವಿನಯ್ ಗುರೂಜಿ ಮಾತು ಕೇಳಿ ಕುಮಾರಸ್ವಾಮಿ ಖುಷಿಯಾಗಿದ್ದಾರೆ.
ಇದಾದ ಕೆಲವೇ ಗಂಟೆಗಳಲ್ಲಿ ವಿನಯ್ ಗುರೂಜಿ ಸ್ಪಷ್ಟನೆಯೊಂದನ್ನು ನೀಡಿದ್ದಾರೆ. ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ ಅವರ ಮನೆಗೆ ವಿನಯ್ ಗುರೂಜಿ ಅವರು ಸೌಜನ್ಯಯುತ ಭೇಟಿ ನೀಡಿ, ಆಶೀರ್ವದಿಸಿದ್ದ ಸಂದರ್ಭದಲ್ಲಿ, ಅಲ್ಲಿಗೆ ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ಆಗಮಿಸಿದ್ದರು. ಆಗ ಅವರ ಯೋಗಕ್ಷೇಮದ ಕುರಿತು ಮಾತನಾಡಲಾಯಿತೇ ಹೊರತು ಮುಂದಿನ ರಾಜಕೀಯ ಭವಿಷ್ಯ ಅಥವಾ ಕುಮಾರಸ್ವಾಮಿ ಅವರ ಕೌಟುಂಬಿಕ ವಿಚಾರಗಳ ಕುರಿತು ಪ್ರಸ್ತಾಪವಾಗಿಲ್ಲ ಎಂಬುದಾಗಿ ವಿನಯ್ ಗುರೂಜಿ ಅವರ ಕಚೇರಿಯಿಂದ ಸ್ಪಷ್ಟೀಕರಣ ಹೊರಡಿಸಲಾಗಿದೆ.
ಎರಡು ಟ್ರಕ್​ಗಳ ಮಧ್ಯೆ ಸಿಕ್ಕಿದ ಕಾರು! ಕ್ಷಣಾರ್ಧದಲ್ಲಿ ನಡೆದೇಹೋಯಿತು ದುರಂತ

ಬಾಸ್​ ಮರ್ಮಾಂಗವನ್ನೇ ಕತ್ತರಿಸಿ ಪೊಲೀಸರಿಗೆ ಕರೆ ಮಾಡಿದ ಮಹಿಳೆ! ಕಾರಣ ಕೇಳಿ ಬೆಚ್ಚಿಬಿದ್ದ ಪೊಲೀಸ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 2 =
Remember me
