ಬೆಂಗಳೂರು:ಮಹಿಳೆ ಅಪಹರಣದ ಪ್ರಕರಣದಡಿ ಮಾಜಿ ಶಾಸಕ ಎಚ್​.ಡಿ. ರೇವಣ್ಣರನ್ನು ಬಂಧಿಸಿರುವ ಎಸ್​ಐಟಿ ಅಧಿಕಾರಿಗಳು, ಇಂದು ಅವರಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳ ಸುರಿಮಳೆಯನ್ನೇ ಹರಿಸಿದ್ದಾರೆ. ಆದರೆ, ಅಧಿಕಾರಿಗಳ ಯಾವ ಪ್ರಶ್ನೆಗೂ ರೇವಣ್ಣ ಸರಿಯಾದ ಉತ್ತರ ನೀಡಿಲ್ಲ ಎಂಬುದು ವರದಿಗಳ ಮೂಲಕ ತಿಳಿದುಬಂದಿದೆ.
ಒಂದೆಡೆ ಹೊಳೆನರಸೀಪುರದಲ್ಲಿ ರೇವಣ್ಣ ಬಂಧನ ನೆನೆದು ಅವರ ಅಭಿಮಾನಿಗಳು ಭಾವುಕರಾದರೆ, ಮತ್ತೊಂದೆಡೆ ಇಂದು ಎಸ್​ಐಟಿ ಅಧಿಕಾರಿಗಳು ಸರಣಿ ಪ್ರಶ್ನೆಗಳನ್ನು ಕೇಳಿದ್ದಾರೆ. ಈ ವೇಳೆ ನನಗೆ ಆಕೆ ಯಾರೆಂದು ಗೊತ್ತಿಲ್ಲ, ಸಂತ್ರಸ್ತ ಮಹಿಳೆ ಬಗ್ಗೆ ನನಗೆ ಮಾಹಿತಿಯೇ ಇಲ್ಲ, ರೇವಣ್ಣ ಅಂತ ಬೇರೆಯವರು ಇರಬಹುದಲ್ವಾ ಎಂದಿದ್ದಾರೆ.
ಸದ್ಯ ರೇವಣ್ಣ ನೀಡಿದ ಯಾವ ಉತ್ತರಗಳು ಸೂಕ್ತವಾಗಿಲ್ಲ ಎಂದಿರುವ ಎಸ್​ಐಟಿ ಅಧಿಕಾರಿಗಳು, ಸದ್ಯ ವಿಚಾರಣೆಯನ್ನು ಮುಂದುವರೆಸುವಲ್ಲಿ ಹೆಚ್ಚು ನಿರತರಾಗಿದ್ದಾರೆ. ಇದೆಲ್ಲದರ ಮಧ್ಯೆ ಇಂದು ಸಂಜೆ 6:30ಕ್ಕೆ ಪ್ರಜ್ವಲ್ ರೇವಣ್ಣ ಬೆಂಗಳೂರು ಏರ್​ಪೋರ್ಟ್​ಗೆ ಬರುತ್ತಾರೆ ಎಂಬ ಮಾಹಿತಿ ಖಚಿತಪಡಿಸಿಕೊಂಡಿರುವ ಎಸ್​ಐಟಿ, ಅಲ್ಲಿಯೇ ಅವರನ್ನು ಬಂಧಿಸಲು ಸಜ್ಜಾಗಿದೆ.
5 ರೂ. ಪಾರ್ಲೆ-ಜಿ ಬಿಸ್ಕತ್​ ಬೆಲೆ ದುಬೈ, ಪಾಕಿಸ್ತಾನ ರಾಷ್ಟ್ರಗಳಲ್ಲಿ ಎಷ್ಟಿದೆ ಗೊತ್ತಾ? ಕೇಳಿದ್ರೆ ದಂಗಾಗ್ತೀರಾ!

ಈತ ಕ್ರೀಸ್​ಗೆ ಬಂದ್ರೆ ಬೌಲರ್​ಗಳೇ ಬೆವರುತ್ತಾರೆ! ಅಜಯ್​ ಜಡೇಜಾ ಹೆಸರಿಸಿದ ಸ್ಟಾರ್​ ಬ್ಯಾಟ್ಸ್​ಮನ್ ಇವರೇ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:2 × four =
Remember me
