ಬೆಂಗಳೂರು:ಇಂದು ಎಚ್​.ಡಿ. ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ರೇವಣ್ಣ ಪರ ಹಿರಿಯ ವಕೀಲ ನಾಗೇಶ್​ ಅವರ ವಾದವನ್ನು ಆಲಿಸಿದ ಬಳಿಕ ಇದೀಗ​ ಸೋಮವಾರದವರೆಗೂ ಮಧ್ಯಂತರ ಜಾಮೀನು ಮುಂದುವರೆಯಲಿದೆ ಎಂದು ತಿಳಿಸಿ, ಮೇ.20ಕ್ಕೆ ಆದೇಶ ಕಾಯ್ದಿರಿಸಿದೆ.
ಇನ್ನು ಇದಕ್ಕೂ ಮೊದಲು ಜಾಮೀನು ಕೋರಿ ನ್ಯಾಯಾಲಯ ಮೆಟ್ಟಿಲೇರಿದ್ದ ಎಚ್​.ಡಿ. ರೇವಣ್ಣಗೆ ಜಾಮೀನು ನೀಡದಂತೆ ಪ್ರಾಸಿಕ್ಯೂಷನ್‌ ಪರ ವಕೀಲರು ನ್ಯಾಯಾಧೀಶರಿಗೆ ಮನವಿ ಮಾಡಿದ್ದರು. ಕೆಲ ಸಮಯ ಇಬ್ಬರ ವಾದ ಆಲಿಸಿದ ನ್ಯಾಯಾಧೀಶರು, 5 ಲಕ್ಷ ರೂ. ಬಾಂಡ್‌ ನೀಡಬೇಕು ಮತ್ತು ಇದೇ ಮೊತ್ತಕ್ಕೆ ಇಬ್ಬರ ಭದ್ರತೆ ಒದಗಿಸಬೇಕು ಎಂಬ ಕಂಡಿಷನ್​ ಮೇರೆಗೆ ರೇವಣ್ಣಗೆ ಮಧ್ಯಂತರ ಜಾಮೀನು ನೀಡಿ ಅರ್ಜಿ ವಿಚಾರಣೆಯನ್ನು ಮೇ 17ಕ್ಕೆ ಮುಂದೂಡಿತ್ತು.
ಇಂದು ಇದೇ ಜಾಮೀನು ಅರ್ಜಿ ವಿಚಾರಣೆಯನ್ನು ನಡೆಸಿದ ನ್ಯಾಯಾಲಯ ರೇವಣ್ಣ ಪರ ವಕೀಲರಾದ ನಾಗೇಶ್​ರ ವಾದ ಆಲಿಸಿದ ಬಳಿಕ ಇದೀಗ ಆದೇಶವನ್ನು ಮೇ.20ಕ್ಕೆ ಕಾಯ್ದಿರಿಸಿದೆ. ಇದು ಮಾಜಿ ಶಾಸಕರಿಗೆ ತಪ್ಪದ ಸಂಕಷ್ಟವಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 3 =
Remember me
