ಹಾಸನ:ಅರಸೀಕೆರೆ ಕ್ಷೇತ್ರದಿಂದ ಬಿಜೆಪಿ ಟಿಕೆಟ್​ ಸಿಗದಿದ್ದಕ್ಕೆ ಬಂಡಾಯವೆದ್ದು ಜೆಡಿಎಸ್​ ಪಕ್ಷ ಸೇರಿ ಅರಸೀಕೆರೆಯಿಂದ ಕಣಕ್ಕಿಳಿದಿರುವ ಎನ್​. ಆರ್​. ಸಂತೋಷ್​ ಅವರನ್ನು ಮಾಜಿ ಸಚಿವ ಎಚ್​.ಡಿ. ರೇವಣ್ಣ ಹಾಡಿ ಹೊಗಳಿದ್ದಾರೆ.
ಎನ್​​.ಆರ್​. ಸಂತೋಷ್​ ಈ ಹಿಂದೆ ಕಾಂಗ್ರೆಸ್​-ಜೆಡಿಎಸ್ ಮೈತ್ರಿ ಸರ್ಕಾರವನ್ನು ಕೆಡುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರನ್ನೇ ಪಕ್ಷಕ್ಕೆ ಸೇರಿಸಿಕೊಂಡಿರುವುದರ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ರೇವಣ್ಣ ಅವರು ಅಚ್ಚರಿಯ ಪ್ರತಿಕ್ರಿಯೆಯನ್ನು ನೀಡಿದ್ದಾರೆ.ಇದನ್ನೂ ಓದಿ:ಬದನೆಕಾಯಿ ಬೆಳೆಯಲು ಇನ್ಫೋಸಿಸ್ ಉದ್ಯೋಗ ತೊರೆದು ರೈತನಾದ ಟೆಕ್ಕಿ; 40,000 ಸಾವಿರ ರೂ. ಸಂಬಳಕ್ಕಿಂತ ದುಪ್ಪಟ್ಟು ಹಣ ಗಳಿಕೆ!
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪಾಪ ಆ ಹುಡುಗ (ಎನ್​.ಆರ್​. ಸಂತೋಷ್​) ಏನು ಮಾಡಿದಾನ್ರಿ? ಪಕ್ಷ ನಿಷ್ಟೆಯಾಗಿ ಕೆಲಸ ಮಾಡಿದ್ದಾನೆ ಅಷ್ಟೆ. ನಮ್ಮ ಪಕ್ಷದಲ್ಲೇ ಇದ್ದ ಶಿವಲಿಂಗೇಗೌಡ ನಮ್ಮ ಬೆನ್ನಿಗೆ ಚಾಕು ಹಾಕಿ ಹೋಗಿದ್ದಾರಲ್ಲ. ತಾಯಿ ಮನೆಗೆ ಬೆನ್ನಿಗೆ ಚೂರಿ ಹಾಕಿದ್ದಾರಲ್ಲ. ಸಂತೋಷ್ ಏನು ಮಾಡಿದ್ದಾರೆ? ಎಂದು ಸಂತೋಷ್​ ಪರ ಬ್ಯಾಟ್​ ಬೀಸಿದರು.
ಅವರುಗಳೆಲ್ಲ (ಬಿಜೆಪಿ ಮತ್ತು ಕಾಂಗ್ರೆಸ್​) ‌ಕರೆದುಕೊಂಡಿಲ್ವೆನ್ರಿ? ವಿಶೇಷ ವಿಮಾನ ಮಾಡಿ ಎಲ್ಲರನ್ನು ಕರೆಸಿಕೊಂಡಿದ್ದಾರೆ. ಜಗದೀಶ್ ಶೆಟ್ಟರ್ ಅವರೆನ್ನೆಲ್ಲ ಕರೆಸಿ ಕೊಂಡಿದ್ದಾರಲ್ಲ ಎಂದು ರೇವಣ್ಣ ಹೇಳಿದರು.ಇದನ್ನೂ ಓದಿ:ಬೆಂಗಳೂರಿನಲ್ಲಿ ಸೆಕೆಂಡ್​ ಪಿಯುಸಿಯಲ್ಲಿ 90% ಅಂಕ ಗಳಿಸಿಲ್ಲವೆಂದು ಬಾಡಿಗೆಗೆ ಮನೆ ಕೊಡಲ್ಲ ಎಂದ ಮಾಲೀಕ!
ಶಿವಲಿಂಗೇಗೌಡ ಜೆಡಿಎಸ್ ಮನೆಯಲ್ಲೇ ಅನ್ನ ತಿಂದು, ಜೆಡಿಎಸ್ ಬಿಟ್ಟು ಹೋಗುವುದಿಲ್ಲ ಅಂತ ಮಂಜುನಾಥ ಸ್ವಾಮಿ ಮೇಲೆ ಆಣೆ ಮಾಡಿ, ಈಗ ಸತ್ಯ ನಾರಾಯಣ ಹಡಗಿನ ಕಥೆಯಂತೆ ನಮ್ಮ ಹಡಗು ಸರಿ ಇಲ್ಲ ಅಂತ ಬಿಟ್ಟು ಹೋಗಿದ್ದಾರೆ ಎಂದರು.(ದಿಗ್ವಿಜಯ ನ್ಯೂಸ್​)
ಪೋರ್ನ್​ ಸ್ಟಾರ್​ ಆಗಿರುವುದು ದೇವರ ಇಚ್ಛೆ! ಶಿಕ್ಷಕಿ ಹುದ್ದೆ ತೊರೆದು ನೀಲಿತಾರೆಯಾದ ಟಿಲಿಯಾ ಬೋಲ್ಡ್​ ಹೇಳಿಕೆ

ಮೋದಿ ಅವರು ಭ್ರಷ್ಟರು, ಕ್ರಿಮಿನಲ್ಸ್ ಪರ ಪ್ರಚಾರ ಮಾಡುತ್ತಿದ್ದಾರೆ: ದಿನೇಶ್ ಗುಂಡೂರಾವ್

ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ವಿಚಾರ: ವಿ. ಸೋಮಣ್ಣ ಕೊಟ್ಟ ಪ್ರತಿಕ್ರಿಯೆ ಹೀಗಿದೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + 16 =
Remember me
