ಬೆಂಗಳೂರು:ಹೊಳೆನರಸೀಪುರ ಸರ್ಕಾರಿ ಮಹಿಳಾ ಗೃಹ ವಿಜ್ಞಾನ ಕಾಲೇಜಿನಲ್ಲಿ ಎಂಎಸ್​ಸಿ ಸೈಕಾಲಜಿ ಹಾಗೂ ಫುಡ್ ಮತ್ತು ನ್ಯೂಟ್ರೀಷಿಯನ್ ಕೋರ್ಸ್ ಗಳ ಆರಂಭಕ್ಕೆ ಆಗ್ರಹಿಸಿ ಧರಣಿ ನಡೆಸಲು ಮುಂದಾಗಿದ್ದ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರನ್ನು ಸಿಎಂ ಬಸವರಾಜ ಬೊಮ್ಮಾಯಿ ಸಂತೈಸಿದ್ದಾರೆ.
ಸಿಎಂ ಗೃಹ ಕಚೇರಿ ಕೃಷ್ಣಾ ಎದುರು ಧರಣಿ ಮಾಡುವುದಾಗಿ ಬಂದಿದ್ದ ರೇವಣ್ಣ, ಸಿಎಂ ದೂರವಾಣಿ ಕರೆಗೆ ಓಗೊಟ್ಟು ಮನವಿ ಸಲ್ಲಿಸಿ ವಾಪಸ್ಸಾದರು. ಸಿಎಂ ಎರಡು ದಿನ ಕಾಲಾವಕಾಶ ಕೊಡಿ. ಆಮೇಲೆ ನಿಮ್ಮ ಸಮಸ್ಯೆ ಬಗೆ ಹರಿಸುತ್ತೇನೆ ಎಂದು ಹೇಳಿದ್ದಾರೆ. ಸಿಎಂ ಮೇಲೆ ನಮಗೆ ನಂಬಿಕೆ ಇದೆ. ಅದಕ್ಕೆ ವಾಪಸ್ ಹೋಗುತ್ತೇನೆ ಎಂದು ಹೇಳಿದರು.
ಹೊಳೆನರಸೀಪುರ ಕಾಲೇಜಿಗೆ 2022-23ನೇ ಶೈಕ್ಷಣಿಕ ಸಾಲಿನಲ್ಲಿ ಎರಡು ಹೊಸ ಕೋರ್ಸ್ ಪ್ರಾರಂಭಕ್ಕೆ ಮೈಸೂರು ವಿ.ವಿ. ಶಿಫಾರಸು ಮಾಡಿದ್ದು, ಆ ಶಿಫಾರಸನ್ನು ಉನ್ನತ ಶಿಕ್ಷಣ ಸಚಿವರು ತಿರಸ್ಕರಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಎರಡೂ ಕೋರ್ಸ್​ಗಳ ಉಪನ್ಯಾಸಕರಿಗೆ ತಗುಲುವ ವೇತನ ವೆಚ್ಚವನ್ನು ತಾತ್ಕಾಲಿಕವಾಗಿ ಸಿಡಿಸಿ ಸಮಿತಿ ಅಥವಾ ಸ್ವಂತ ಖರ್ಚಿನಲ್ಲಿ ಭರಿಸುವುದಾಗಿ ಸಿಎಂಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. ಈ ಎರಡೂ ಹೊಸ ಕೋರ್ಸ್​ಗೆ ತಲಾ 20 ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಬಡ ಮಕ್ಕಳು ಓದುವ ಕಾಲೇಜು ಏಕೆ ನಿಲ್ಲಿಸಬೇಕು? ಸರ್ಕಾರ ಮೂಲಭೂತ ಸೌಕರ್ಯ ಕೊಡದೇ ಹೋದರೂ ನಾವು ಕಾಲೇಜುಗಳ ಅಭಿವೃದ್ಧಿ ಮಾಡಿದ್ದೇವೆ. ಬಡವರ ಮಕ್ಕಳು ಓದುವ ಕಾಲೇಜಿಗೆ ಏಕೆ ರಾಜಕೀಯ ಮಾಡಬೇಕು. ಉದ್ದೇಶ ಪೂರ್ವಕವಾಗಿ ಸಚಿವರು ಕೋರ್ಸ್​ಗಳನ್ನು ತಿರಸ್ಕಾರ ಮಾಡಿದ್ದಾರೆ. ಸರ್ಕಾರ ಪಾಪರ್ ಬಿದ್ದದ್ದರೆ ನಾನೇ ಟೀಚರ್​ಗೆ ಸಂಬಳ ಕೊಡುತ್ತೇನೆ. ವಿ.ವಿ. ಮತ್ತು ಪ್ರಧಾನ ಕಾರ್ಯದರ್ಶಿ ಒಪ್ಪಿಗೆ ಕೊಟ್ಟು ಸಚಿವರು ಯಾಕೆ ಅನುಮತಿ ಕೊಟ್ಟಿಲ್ಲ?
|ಎಚ್.ಡಿ.ರೇವಣ್ಣಮಾಜಿ ಸಚಿವ
ಪರಿಹಾರ ಒದಗಿಸುವ ಭರವಸೆ:ಸಿಎಂ ಗೃಹ ಕಚೇರಿ ಕೃಷ್ಣಾದ ಬಳಿ ಧರಣಿ ಹೂಡಲೆಂದು ಧಾವಿಸಿದ್ದ ಎಚ್.ಡಿ.ರೇವಣ್ಣ ಅವರನ್ನು ಕಚೇರಿ ಸಿಬ್ಬಂದಿ ಕರೆದೊಯ್ದು ಗೃಹ ಕಚೇರಿಯ ಪ್ರತ್ಯೇಕ ಕೊಠಡಿಯಲ್ಲಿ ಕೂಡಿಸಿದರು. ನಂತರ ಮೊಬೈಲ್ ಮುಖೇನ ರೇವಣ್ಣ ಅವರನ್ನು ಸಿಎಂ ಬಸವರಾಜ ಬೊಮ್ಮಾಯಿ ಸಂರ್ಪಸಿ ಮಾತನಾಡಿ ಮನವೊಲಿಸಿದರು. ಕ್ಷೇತ್ರದ ಸಮಸ್ಯೆಗೆ ಕಾರಣವೇನೆಂದು ತಿಳಿಯಲು ಶುಕ್ರವಾರ ಅಧಿಕಾರಿಗಳ ಸಭೆ ಕರೆದು ರ್ಚಚಿಸಿ, ಪರಿಹಾರ ಒದಗಿಸುವ ಭರವಸೆ ನೀಡಿದರು. ಬೊಮ್ಮಾಯಿ ಸಕಾರಾತ್ಮಕವಾಗಿ ಸ್ಪಂದಿಸಿದ್ದರಿಂದ ರೇವಣ್ಣ ಧರಣಿ ಕೈಬಿಟ್ಟು ಹಿಂತಿರುಗಿದರು ಎಂದು ಮೂಲಗಳು ತಿಳಿಸಿವೆ.
ರಾಜಕೀಯ ಬೆರೆಸಬೇಕಾದ ಅಗತ್ಯವಿರಲಿಲ್ಲ:ಹೊಳೆನರಸೀಪುರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಎಂಎಸ್ಸಿ, ಮನೋ ವಿಜ್ಞಾನ ಹಾಗೂ ಆಹಾರ ಮತ್ತು ಪೌಷ್ಟಿಕ ವಿಷಯಗಳ ವ್ಯಾಸಂಗ ಆರಂಭಿಸಲು ಅಡ್ಡಿ ಮಾಡಿಲ್ಲ, ಇದರಲ್ಲಿ ರಾಜಕೀಯ ಬೆರೆಸಬೇಕಾದ ಅಗತ್ಯವೂ ಇಲ್ಲವೆಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಹೇಳಿದರು. ಇದೇ ವಿಷಯ ಮುಂದಿಟ್ಟುಕೊಂಡು ಎಚ್.ಡಿ.ರೇವಣ್ಣ ಧರಣಿಗೆ ಮುಂದಾಗಿದ್ದು ಸರಿಯಲ್ಲ. ಸರ್ಕಾರ ಪಾಪರ್ ಆಗಿದ್ದರೆ ಬೋಧಕರ ಸಂಬಳ ಸ್ವಂತ ವೆಚ್ಚದಲ್ಲಿ ಭರಿಸುವುದಾಗಿ ಹೇಳಿರುವುದು ಅವರಿಗೆ ಶೋಭೆಯಲ್ಲ. ಪ್ರತಿನಿಧಿಸುತ್ತಿರುವ ಕ್ಷೇತ್ರದ ಬಗ್ಗೆ ಕಾಳಜಿ ಪ್ರಶಂಸನೀಯ. 100 ಸರ್ಕಾರಿ ಪದವಿ ಕಾಲೇಜುಗಳಿಗೆ ಸ್ವಂತ ಕಟ್ಟಡವಿಲ್ಲ. ಅವರು ಸಚಿವರಾಗಿದ್ದ ಅವಧಿಯಲ್ಲಿ ಈ ಕೆಲಸ ಮಾಡಲಿಲ್ಲವೇಕೆ? ಸರ್ಕಾರದ ಬೊಕ್ಕಸ ಪಾಪರ್ ಆಗಿತ್ತೆ? ಎಂದು ಕುಟುಕಿದರು.
ಎರಡೂ ಡೋಸ್ ಲಸಿಕೆ ಪಡೆದಿದ್ರೂ ಇಲ್ಲಿದೆ ಒಂದು ಆತಂಕಕಾರಿ ವಿಷಯ!
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:7 − two =
Remember me
