ಹಾಸನ:“ಕಚೇರಿಯಲ್ಲಿ ಇನ್ಮುಂದೆ ಏಜೆಂಟರು ಕಾಣಿಸಿಕೊಂಡರೆ ಜನರಿಗೆ ಹೇಳಿ ಓಡಾಡಿಸಿಕೊಂಡು ಹೊಡೆಸುತ್ತೇನೆ, ನನ್ನ ಮೇಲೆ ಯಾರು ಎಫ್​ಐಆರ್​ ಹಾಕಿಸುತ್ತಾರೋ ಹಾಕಲಿ, ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ…’ ಹೀಗೆಂದು ಎಚ್ಚರಿಕೆ ನೀಡಿದ್ದು ಮಾಜಿ ಸಚಿವ ಎಚ್​.ಡಿ. ರೇವಣ್ಣ.
ನಗರದ ಉಪ ನೋಂದಣಾಧಿಕಾರಿ ಕಚೇರಿಗೆ ಸೋಮವಾರ ಭೇಟಿ ನೀಡಿದ್ದ ರೇವಣ್ಣ, ಒಂದು ವರ್ಷದಿಂದ ಇಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ನೋಂದಣಿಗೆ ಇಂತಿಷ್ಟು ಅಂಥ ಲಂಚದ ಬೇಡಿಕೆ ಇಡುತ್ತಿದ್ದಾರೆ. 10 ಲಕ್ಷ ರೂ. ಆಸ್ತಿ ನೋಂದಣಿಗೆ 10 ಸಾವಿರ ರೂ., 20 ಲಕ್ಷಕ್ಕೆ 20 ಸಾವಿರ ರೂ. ನೀಡಲೇಬೇಕಿದೆ. ತಿಂಗಳಿಗೆ ಮೂರರಿಂದ ನಾಲ್ಕು ಲಕ್ಷ ರೂ. ಕೊಡಲೇಬೇಕೆಂದು ಹೇಳುತ್ತೀರಿ. ಹಾಗಾದರೆ, ಯಾರಿಗೆ ಕೊಡುತ್ತೀರಿ? ಅಷ್ಟೊಂದು ದುಡ್ಡನ್ನು, ಸರ್ಕಾರಕ್ಕೆ ಪಾವತಿಸುತ್ತಿದ್ದೀರಾ? ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಇದನ್ನೂ ಓದಿರಿಕೆಜಿಎಫ್​-2 ಸಿನಿಮಾ ಚಿತ್ರೀಕರಣಕ್ಕೆ ಅನುಮತಿ ರದ್ದುಪಡಿಸುವ ಬಗ್ಗೆ ಹೈಕೋರ್ಟ್​ ಹೇಳಿದ್ದೇನು?
ಕಳೆದ ಏಪ್ರಿಲ್​ನಿಂದ ಹಿರಿತನ ಆಧರಿಸಿ ಆನ್​ಲೈನ್​ ಮೂಲಕ ನೋಂದಣಿ ಮಾಡಲಾಗುತ್ತಿದೆ. ನಿತ್ಯ 70 ಕಡತಗಳು ವಿಲೇವಾರಿಯಾಗುತ್ತಿವೆ. ಆದರೆ,ಅಧಿಕಾರಿಗಳು ನಿಯಮ ಪಾಲಿಸುತ್ತಿಲ್ಲ. ಆ.19ಕ್ಕೆ ನಿಗದಿಯಾಗಿದ್ದ ನೋಂದಣಿ ಇಂದೇ ಆಗಿದೆ. ಶಾಂತಿಗ್ರಾಮ ಹಾಗೂ ದುದ್ದ ಹೋಬಳಿ ಕೆಲಸಗಳನ್ನು ಉದ್ದೇಶಪೂರ್ವಕವಾಗಿ ತಡೆಹಿಡಿಯಲಾಗಿದೆ. ಇಂತಹ ಕೆಲಸ ನನ್ನ ಮುಂದೆ ನಡೆಯುವುದಿಲ್ಲ ಎಂದರು.
ಏಜೆಂಟ್​ ಇಟ್ಟುಕೊಂಡು ಕೆಲಸ ಮಾಡಲು ಅಧಿಕಾರಿಗಳನ್ನು ನೇಮಕ ಮಾಡಲಾಗಿದೆಯೇ? ಯಾವನು ಇಲ್ಲಿ ಕೂತುಕೊಳ್ಳುವವನು? ಇಲ್ಲಿ ತಿಂಗಳ ಕಲೆಕ್ಷನ್​ ಅಂತೆ ಅವನದ್ದು. ಬಡ ಬಗ್ಗರು ಏನಾಗಬೇಕು? ಈ ದಿನದ ಫೈಲ್​ಗಳನ್ನು ತೋರಿಸಿ, ನಿಮ್ಮ ಡ್ರಾವರ್​ ಎಲ್ಲ ತೆಗೆಯಿರಿ, ಎಷ್ಟು ಹಣ ಇದೆ ನೋಡೋಣ ಎಂದು ಗುಡುಗಿದರು.
ಅಲ್ಲದೆ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಕಚೇರಿಯ ಭ್ರಷ್ಟಾಚಾರದ ಬಗ್ಗೆ ಮಾಹಿತಿ ನೀಡಿದರು. ಉಪ ನೋಂದಣಾಧಿಕಾರಿ ಮಧು ಮತ್ತು ಇತರ ಅಧಿಕಾರಿಗಳು ಸ್ಥಳದಲ್ಲಿದ್ದರು.
ಕಾಂಗ್ರೆಸ್​ ವಿರುದ್ಧ ಅಖಂಡ ಶ್ರೀನಿವಾಸ್​ ಮೂರ್ತಿ ಆಕ್ರೋಶ… ಸುಟ್ಟಿರೋದು ನನ್ನ ಮನೆ, ಡಿಕೆಶಿಯದ್ದಲ್ಲ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:17 − twelve =
Remember me
