ಹಾಸನ:ನನ್ನ ರಾಜಕೀಯ ಕೊನೆಯಾಗ್ತಿದೆ. ನನಗೀಗ 88 ವರ್ಷ. ಮೇ 18ಕ್ಕೆ 88 ವರ್ಷ ಮುಗಿಯುತ್ತೆ. 2023ಕ್ಕೆ 90 ವರ್ಷ ಮುಗಿಯುತ್ತೆ. ಆಮೇಲೆ ನನಗೆ ನಡೆಯೋಕೆ ಆಗುತ್ತೋ, ಇಲ್ಲವೋ ಗೊತ್ತಿಲ್ಲ… 2023ರ ವರೆಗೂ ಯಡಿಯೂರಪ್ಪರೇ ಸಿಎಂ ಆಗಿರ್ತಾರೆ… ಹೀಗಂತ ಹೇಳಿದ್ದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ.
ಭಾನುವಾರ ಭಾವನಾತ್ಮಕ ಹೇಳಿಕೆ ನೀಡುವ ಮೂಲಕ ಗಮನ ಸೆಳೆದ ದೇವೇಗೌಡ, 2023ರ ವರೆಗೂ ಯಡಿಯೂರಪ್ಪರೇ ಸಿಎಂ ಆಗಿರಲಿ. ಅವರು ಮುಂದೆ ಮುಖ್ಯಮಂತ್ರಿ ಆಗ್ತಾರೋ ಇಲ್ಲವೋ, ಅದು ಅವರ ಪಾರ್ಟಿ ವಿಷಯ, ವಯಸ್ಸಿನ ವಿಷಯ ಅಂತಾರೆ. ಹಣೆಬರಹ ಇದ್ರೆ ಯಡಿಯೂರಪ್ಪ ಇನ್ನೊಮ್ಮೆ ಸಿಎಂ ಆಗಲಿ. ನಾನೇನೂ ಹೊಟ್ಟೆಕಿಚ್ಚು ಪಡೋನಲ್ಲ ಎಂದರು. ಬಿಜೆಪಿ ಪಕ್ಷದ ಸಿದ್ಧಾಂತದಂತೆ 75 ವರ್ಷ ವಯಸ್ಸು ದಾಟಿದ ಮೇಲೆ ಅಧಿಕಾರ ಸಿಗಲ್ಲ ಎಂಬುದನ್ನ ಸೂಚ್ಯವಾಗಿ ಹೇಳಿದರು.ಇದನ್ನೂ ಓದಿರಿಮುಂಬರುವ ವಿಧಾನಸಭೆ ಚುನಾವಣೆಗೆ ಜೆಡಿಎಸ್​ ಅಭ್ಯರ್ಥಿಗಳ ಹೆಸರು ಪ್ರಕಟಿಸಿದ ಕುಮಾರಸ್ವಾಮಿ!
ಹಾಸನ ಏರ್ಪೋಟ್, ಚನ್ನಪಟ್ಟಣಕೆರೆ ವಿಹಾರಧಾಮ ಕಾಮಗಾರಿ ಕುರಿತು ಮಾತನಾಡಿದ ದೇವೇಗೌಡರು, ನಾನು ಬದುಕಿದ್ದಾಗಲೇ ಯಡಿಯೂರಪ್ಪನವರು ನಮ್ಮ ಜಿಲ್ಲೆಯ ಕಾಮಗಾರಿ ಆರಂಭಿಸಲಿ. ನಾನು ಸುಮ್ಮನೆ ಅವರ ಜೊತೆ ಕುಳಿತುಕೊಳ್ಳುತ್ತೇನೆ. ಅಧಿಕಾರದಲ್ಲಿದ್ದವರ ಬಳಿ ಹೋಗಿ ಕೇಳೋದು ನನ್ನ ಧರ್ಮ, ನಾಳೆಯೇ ಸಿಎಂ ಗೃಹಕಚೇರಿ ಕೃಷ್ಣಾಗೆ ಹೋಗುತ್ತೇನೆ. ನಾಲ್ಕು ಬಾರಿ ಸಿಎಂ ಆಗಿದ್ದರೂ ನನ್ನ ಜಿಲ್ಲೆಗೆ ನೀವು ಏನು ಮಾಡಿದ್ದೀರಿ? ನೀವೇ ಯೋಚಿಸಬೇಕು ಎಂದು ಕೇಳುತ್ತೇನೆ ಎಂದರು.
ಶಿವಮೊಗ್ಗದ ಅಭಿವೃದ್ಧಿಯಂತೆ ಹಾಸನಕ್ಕೂ ಯಡಿಯೂರಪ್ಪ ಗಮನ ಕೊಡಬೇಕು ಎಂದು ನಯವಾಗಿಯೇ ತರಾಟೆಗೆ ತೆಗೆದುಕೊಂಡಿದ್ದರು.
ಸಾರಿಗೆ ಬಸ್​-ಕಾರಿನ ನಡುವೆ ಭೀಕರ ಅಫಾಘಾತ, ಸ್ಥಳದಲ್ಲೇ ನಾಲ್ವರ ದುರ್ಮರಣ

ಕಾಲೇಜು ಯುವತಿಯ ಬೆತ್ತಲೆ ಫೋಟೋ ಸ್ನೇಹಿತರ ಕೈಯಲ್ಲಿ! ಮುಂದೆ ನಡೆದೇ ಹೋಯ್ತು ಅವಾಂತರ…

ಧಾರವಾಡದಲ್ಲಿ ಅಪಘಾತ: ಸಾವಲ್ಲೂ ಒಂದಾದ ಬಾಲ್ಯ ಸ್ನೇಹಿತೆಯರು, ಅವರ ಮಕ್ಕಳೇ ಹೊರತಂದ ಈ ವಿಡಿಯೋ ಮನಕಲಕುತ್ತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × one =
Remember me
