ಶಿವಮೊಗ್ಗ :ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ‌ ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ಅವರ ವರ್ತನೆ‌ ಹೀಗೇ ಮುಂದುವರಿದರೆ, ರಾಜ್ಯದ‌ ಜನರು ಅವರಿಗೆ ಛೀಮಾರಿ ಹಾಕುವ ದಿನ ಬರಲಿದೆ ಎಂದು‌ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಇಂದು ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಈಶ್ವರಪ್ಪ, ಸಿಎಂ ಬಿಎಸ್​​ವೈ ಅವರು ದೆಹಲಿಗೆ‌ ಕೊಂಡೊಯ್ದ ಐದಾರು ಬ್ಯಾಗ್​​ನಲ್ಲಿ ಏನಿತ್ತು ಎಂದು ಪ್ರಶ್ನಿಸಿರುವುದು ಕುಮಾರಸ್ವಾಮಿ ಅವರ‌ ಕೀಳು ರಾಜಕೀಯಕ್ಕೆ ನಿದರ್ಶನವಾಗಿದೆ ಎಂದು ಕಿಡಿಕಾರಿದರು.
ಇದನ್ನೂ ಓದಿ:ಹೈಕಮಾಂಡ್​ಗೆ ಕೊಡಲೆಂದು ಸಿಎಂ ಯಡಿಯೂರಪ್ಪ 6 ಸೂಟ್​ ಕೇಸ್​ನಲ್ಲಿ ದೆಹಲಿಗೆ ಕೊಂಡೊಯ್ದದ್ದೇನು?: ಎಚ್​ಡಿಕೆ
ರಾಜ್ಯದ ನಾಲ್ವರು ನೂತನವಾಗಿ ಕೇಂದ್ರದಲ್ಲಿ ಸಚಿವರಾಗಿದ್ದಾರೆ. ಅವರನ್ನು ಅಭಿನಂದಿಸಲು ಹಾರ, ಸ್ಮರಣಿಕೆಯನ್ನು ಐದಾರು ಬ್ಯಾಗ್​​ಗಳಲ್ಲಿ ಕೊಂಡೊಯ್ದರೆ, ಅದಕ್ಕೆ ಎಚ್​​ಡಿಕೆ ಕೊಂಕು ಮಾತನಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಈಶ್ವರಪ್ಪ, “ಯಾರಿಂದಲೂ ಏನನ್ನಾದರೂ ಪಡೆಯುವ ವ್ಯಕ್ತಿತ್ವ ಪ್ರಧಾನಿ ನರೇಂದ್ರ ಮೋದಿ ಅವರದ್ದಲ್ಲ‌. ಯಾರಿಗಾದರೂ ಏನನ್ನಾದರೂ ಕೊಟ್ಟು ತೃಪ್ತಿಪಡಿಸುವ ಅನಿವಾರ್ಯತೆ ಸಿಎಂ ಯಡಿಯೂರಪ್ಪ ಅವರಿಗಿಲ್ಲ” ಎಂದರು.
ಸಚಿವ ಸ್ಥಾನ ಹೋದರೆ ಗೂಟ ಹೋದಂತೆ: ವೈರಲ್​ ಆಡಿಯೋಗೆ ಈಶ್ವರಪ್ಪ ಪ್ರತಿಕ್ರಿಯೆ

ಮುಂಗಾರು ಅಧಿವೇಶನ: ಸದನದ ಆರಂಭದಲ್ಲೇ ವಿಪಕ್ಷಗಳ ಗದ್ದಲ! ಮುಂದೂಡಲ್ಪಟ್ಟಿತು ಕಲಾಪ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + eight =
Remember me
