ನವದೆಹಲಿ:ರಾಜ್ಯ ಸರ್ಕಾರದ ಅವಧಿಯಲ್ಲಿ ಮುಡಾ ನಿವೇಶನ ಹಗರಣ ನಡೆದಿದೆ ಎನ್ನಲಾದ ವಿಷಯಕ್ಕೆ ಸಂಬಂಧಿಸಿದಂತೆ ಇದೀಗ ಬಿಜೆಪಿ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಕೈಗೊಳ್ಳುವ ಮೂಲಕ ಕಾಂಗ್ರೆಸ್​ ವಿರುದ್ಧ ಪ್ರತಿಭಟನೆ ನಡೆಸಲು ಸನ್ನದ್ಧಗೊಂಡಿದೆ. ಈ ಕುರಿತು ಇಂದು ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್​ ನಾಯಕ, ಕೇಂದ್ರ ಸಚಿವ ಎಚ್​.ಡಿ. ಕುಮಾರಸ್ವಾಮಿ, ಬಿಜೆಪಿಯ ಪಾದಯಾತ್ರೆಗೆ ನಮ್ಮ ಬೆಂಬಲವಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.
ಇದನ್ನೂ ಓದಿ:ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯೆನ್ ಹತ್ಯೆ; ಈ ಹಿಂದಿನ ದಾಳಿಗೆ ಸೇಡು ತೀರಿಸಿಕೊಂಡ ಇಸ್ರೇಲ್
ಬಿಜೆಪಿಯವರು ತಮ್ಮ ಪಕ್ಷದ ನಿಲುವಿನಲ್ಲಿ ನಿರ್ಧಾರ ಮಾಡಿಕೊಂಡು ಪಾದಯಾತ್ರೆ ಕೈಗೊಂಡಿದ್ದಾರೆ. ನಾವು ಇವತ್ತು ಜನರ ಸಮಸ್ಯೆಗಳು ಏನಿದೆಯೋ ಅದರ ಹಿನ್ನಲೆಯಲ್ಲಿ ನಮ್ಮ ಪಕ್ಷದ ಮುಖಂಡರು ತೆಗೆದುಕೊಂಡ ಸಂಪೂರ್ಣವಾದ ನಿಲುವನ್ನು ಪರಿಗಣಿಸಿ ಈ ಸಮಯದಲ್ಲಿ ಇದು ಸೂಕ್ತವಲ್ಲ ಎಂದು ಯೋಚಿಸಿ, ಹಿಂದೆ ಸರಿದಿದ್ದೇವೆ. ನಾಡಿನ ಜನತೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅದನ್ನು ನಾವು ನೋಡಬೇಕಿದೆ ಎಂದರು.
ಪಾದಯಾತ್ರೆಯ ಬಗ್ಗೆ ನಮ್ಮನ್ನು ಸಭೆಗೆ ಕರೆಯುವ ಮುನ್ನವೇ ಬಿಜೆಪಿ ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಂಡಿದೆ. ಹಾಗಾಗಿ ಇದಕ್ಕೆ ನಮ್ಮ ಪಕ್ಷದಿಂದ ನೈತಿಕ ಬೆಂಬಲವಿಲ್ಲ. ಪ್ರೀತಮ್​ ಗೌಡ ಯಾರು? ರಸ್ತೆ ರಸ್ತೆಗಳಲ್ಲಿ ಪೆನ್​ಡ್ರೈವ್ ಲಭ್ಯವಾಗುವಂತೆ ಮಾಡಿದ ವ್ಯಕ್ತಿ. ಆತನೊಂದಿಗೆ ನಾನು ವೇದಿಕೆ ಹಂಚಿಕೊಳ್ಳಲು ಸಾಧ್ಯವೇ? ನನ್ನ ಕುಟುಂಬಕ್ಕೆ ವಿಷಯಿಟ್ಟವರ ಜತೆ ಪಾದಯಾತ್ರೆಯಲ್ಲಿ ನಾನು ಭಾಗಿಯಾಗಲು ಸಾಧ್ಯವೇ? ಎಂದು ನೇರವಾಗಿ ಹಾಸನದ ಶಾಸಕ ಪ್ರೀತಂ ಗೌಡ ವಿರುದ್ಧವೂ ಗುಡುಗಿದ್ದಾರೆ.
ಎಂದೂ ಬೌಲ್​ ಮಾಡದ ರಿಂಕುಗೆ 19ನೇ ಓವರ್​ ಕೊಟ್ಟಿದ್ಯಾಕೆ? ಪ್ಲಾನ್ ಬಹಿರಂಗಪಡಿಸಿದ ಕ್ಯಾಪ್ಟನ್ ಸೂರ್ಯ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two × 3 =
Remember me
