ಬೆಂಗಳೂರು:ಡಿಸಿಎಂ ಡಿ.ಕೆ. ಶಿವಕುಮಾರ್​ಗೆ ಮಾಜಿ ಸಿಎಂ, ಜೆಡಿಎಸ್​ ರಾಜ್ಯಾಧ್ಯಕ್ಷ ಎಚ್​.ಡಿ. ಕುಮಾರಸ್ವಾಮಿ ಓಪನ್​ ಆಫರ್​ ಕೊಟ್ಟಿದ್ದು, ಡಿಕೆಶಿ ನಾಳೆ ಸಿಎಂ ಆಗೋದಾದ್ರೆ ಜೆಡಿಎಸ್​ನ 19 ಶಾಸಕರ ಬೆಂಬಲವಿದೆ ಎಂದು ಬಹಿರಂಗವಾಗಿ ಹೇಳಿದ್ದಾರೆ.
ಇದನ್ನೂ ಓದಿ:ಆಥಿರ್ಕ ದಿವಾಳಿಯತ್ತ ಗದಗ ನಗರಸಭೆ! ಗುತ್ತಿಗೆದಾರರಿಗೆ ಗೊಂದಲ, ತೆರಿಗೆದಾರರಿಗೆ ಸಂಕಟ
ಡಿಕೆಶಿ ನಾಳೆ ಸಿಎಂ ಆಗೋದಾದ್ರೆ ಜೆಡಿಎಸ್​ ಶಾಸಕರ ಬೆಂಬಲವಿದೆ ಎಂದ ಕುಮಾರಸ್ವಾಮಿ, “ಜೆಡಿಎಸ್​ನ 19 ಶಾಸಕರು ಬೆಂಬಲ ಕೊಡುತ್ತಾರೆ. ಈ ಸರ್ಕಾರಕ್ಕೆ ನಾನೊಂದು ಹೆಸರಿಡಬಹುದಾ ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್​ ಸರ್ಕಾರಕ್ಕೆ ಟಿಸಿಎಂ, ಡಿಸಿಎಂ ಎಂದು ಹೆಸರಿಟ್ಟ ಎಚ್​ಡಿಕೆ, ಟೆಂಪರೆರಿ ಚೀಫ್​ ಮಿನಿಸ್ಟರ್​, ಡುಪ್ಲಿಕೇಟ್​ ಚೀಫ್​​ ಮಿನಿಸ್ಟರ್​” ಎಂದು ಲೇವಡಿ ಮಾಡಿದರು.
“ಈಗ ಪರಿಹಾರ ವಿಷಯದಲ್ಲೂ ಕೇಂದ್ರ ಸರ್ಕಾರ ನಮಗೆ ಸಹಕಾರ ನೀಡುತ್ತಿಲ್ಲ ನಾವೇನು ಗುಲಾಮರಲ್ಲ ಎನ್ನುತಾರೆ. ಇಲ್ಲಿ ಯಾರು ಗುಲಾಮರಲ್ಲ. ಈ ರಾಜ್ಯ ಅಥವಾ ದೇಶ ಆಳುವಂತವರೇ ಆಗಲಿ, ಜನಪ್ರತಿನಿಧಿಗಳಾಗಲಿ ನಾವು ಈ ನಾಡಿನ ಜನತೆಯ ಗುಲಾಮರು ಇದು ನನ್ನ ಅಭಿಪ್ರಾಯದಲ್ಲಿ” ಎಂದರು.
ಇದನ್ನೂ ಓದಿ:ಸಿಂಧನೂರು ತಾಲೂಕು ಬರಪೀಡಿತ ಪಟ್ಟಿಗೆ ಸೇರ್ಪಡೆ- ಶಾಸಕ ಹಂಪನಗೌಡ ಬಾದರ್ಲಿ
“ಗದಗ, ಹೊಸಪೇಟೆ ಈ ಭಾಗಗಳಿಗೆ ತೆರಳಿದ ನಮ್ಮ ಮುಖ್ಯಮಂತ್ರಿಗಳು ಡ್ಯಾನ್ಸ್​ ಮಾಡಿದರು, ಸಂಭ್ರಮಾಚರಣೆ ಮಾಡಿಕೊಂಡು ಬಂದ್ರಲ್ಲಾ, ಗದಗ ಜಿಲ್ಲೆಯಲ್ಲಿ ಪರಿಸ್ಥಿತಿ ಏನಾಗಿದೆ ಎಂಬುದು ತಿಳಿದಿದೆಯಾ? ಆ ರೈತರ ಬದುಕಿಗೆ ಏನಾದರೂ ಸಂದೇಶ ಕೊಟ್ಟು ಬಂದಿದ್ದೀರಾ ಎಂಬುದನ್ನು ಕೇಳಲು ಬಯಸುತ್ತೇನೆ” ಎಂದು ಎಚ್​ಡಿಕೆ ಹೇಳಿದರು.
BBKS10: ಮಾತಿನ ಮೇಲೆ ನಿಗಾಯಿರಲಿ!; ‘ಕಿಚ್ಚ’ನ ಕ್ಲಾಸ್​ಗೆ ಮನೆಮಂದಿ ಗಪ್​ಚುಪ್​!

ಮಹೇಶ್​ ಬಾಬು ನಟನೆಯ ‘ಗುಂಟೂರು ಕಾರಂ’ ಬಗ್ಗೆ ಇಲ್ಲಿದೆ ಹೊಸ ಮಾಹಿತಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + five =
Remember me
