ಬೆಂಗಳೂರು:ರಾಜ್ಯದಲ್ಲಿ ಸ್ಯಾಂಟ್ರೋ ರವಿ ಹೆಸರು ಭಾರಿ ಸದ್ದು ಮಾಡುತ್ತಿದೆ. ಮಹಿಳೆ ಮೇಲೆ ಅತ್ಯಾಚಾರ ಪ್ರಕರಣದ ಆರೋಪಿ, ಪೊಲೀಸ್​​ ಅಧಿಕಾರಿಗಳ ವರ್ಗಾವಣೆ ದಂಧೆ ಕಿಂಗ್​ಪಿನ್​ ಮಂಜುನಾಥ್​ ಅಲಿಯಾಸ್​ ಸ್ಯಾಂಟ್ರೋ ರವಿ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಬಗೆದಷ್ಟೂ ಆಳ ಎಂಬಂತೆ ಈತನ ಕುಖ್ಯಾತ ಕೃತ್ಯಗಳು ಒಂದೊಂದೇ ಬಯಲಾಗುತ್ತಿವೆ. ಪಿಂಪ್​ ಮಾತ್ರವಲ್ಲ ಕಾರು ಕಳ್ಳ ಕೂಡ ಆಗಿದ್ದ.
ಹುಟ್ಟೂರು ಮಂಡ್ಯ ಬಿಟ್ಟು ಮೈಸೂರು ಸೇರಿದವ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದು ಮಾತ್ರವಲ್ಲ ಹಲವು ರಾಜಕಾರಣಿಗಳು-ಅಧಿಕಾರಿಗಳಿಗೆ ಹುಡುಗಿಯರನ್ನ ಸಪ್ಲೈ ಮಾಡುತ್ತಿದ್ದ… ಎನ್ನಲಾಗಿದೆ. ಇದಕ್ಕೆ ಪುಷ್ಟೀಕರಿಸುವಂತೆ ಕಂತೆಕಂತೆ ನೋಟುಗಳನ್ನು ಸ್ಯಾಂಟ್ರೋ ರವಿ ಎಣಿಸುತ್ತಿರುವ, ರಾಜಕಾರಣಿಗಳ ಜತೆ ಆಪ್ತವಾಗಿ ಗುರುತಿಸಿಕೊಂಡಿರುವ ಫೋಟೋಗಳು ವೈರಲ್​ ಆಗಿವೆ.
ಸಮ್ಮಿಶ್ರ ಸರ್ಕಾರ ಕೆಡವಲು ಬಾಂಬೆಗೆ ಹೋದ 12 ಶಾಸಕರ ಜತೆ ಯುವತಿಯರನ್ನ ಕಳಿಸಿದ್ದು ಈ ಸ್ಯಾಂಟ್ರೋ ರವಿಯೇ ಎಂದು ಗಂಭೀರ ಆರೋಪ ಮಾಡಿದ್ದ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ, ಸ್ಯಾಂಟ್ರೋ ರವಿ ಹಣ ಎಣಿಸಿದ್ದು ಗೃಹಸಚಿವರ ಮನೆಯಲ್ಲೇ ಎಂದು ಮತ್ತೊಂದು ಬಾಂಬ್​ ಸಿಡಿಸಿದ್ದರು. ಈ ಆರೋಪವನ್ನ ಅಲ್ಲಗೆಳೆದಿರುರ ಅರಗ ಜ್ಞಾನೇಂದ್ರ, ಕುಮಾರಸ್ವಾಮಿ ಅವರು ನನ್ನ ಮೇಲೆ ಮಾಡಿದ ಆಪಾದನೆಯನ್ನು ಸಾಬೀತು ಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ನನ್ನ ಮನೆಯಲ್ಲಿ ಆತ ಹಣದ ಗಂಟನ್ನು ಬಿಚ್ಚಿದ್ದಾನೆ ಎಂದು ಕುಮಾರಸ್ವಾಮಿ ಅವರು ಸತ್ಯಕ್ಕೆ ಅಪಚಾರವಾಗುವಂತಹ ಆಪಾದನೆ ಮಾಡಿದ್ದಾರೆ. ನನ್ನನ್ನು ಯಾವ ಕಾರಣದಿಂದ ತೇಜೋವಧೆ ಮಾಡುತ್ತಿದ್ದಾರೆ ಎಂದು ತಿಳಿದಿಲ್ಲ. ಇದರಿಂದ ಅವರಿಗೆ ಯಾವ ರೀತಿ ಲಾಭ ವಾಗುತ್ತದೆ ಎಂಬುದೂ ನನಗೆ ಗೊತ್ತಿಲ್ಲ. ಸಾಂಟ್ರೋ ರವಿಯ ಹಿನ್ನೆಲೆ ಬಗ್ಗೆ ತನಿಖೆ ನಡೆಸಿ ವಿಚಾರಣೆ ಮಾಡುವಂತೆ ಪೊಲೀಸರಿಗೆ ತಿಳಿಸಿದ್ದೇನೆ. ಆದರೆ, ಕುಮಾರಸ್ವಾಮಿ ಅವರು ನನ್ನ ಮೇಲೆ ಮಾಡಿದ ಆಪಾದನೆಯನ್ನು ಸಾಬೀತು ಪಡಿಸಬೇಕು ಎಂದಿದ್ದಾರೆ.
ರಾಜ್ಯದ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು ಅತ್ಯಂತ ಬೇಜವಾಬ್ದಾರಿಯಿಂದ ಸ್ಯಾಂಟ್ರೊ ರವಿ ನನ್ನ ನಿವಾಸದಲ್ಲಿ ಹಣ ಎಣಿಸಿದ್ದ ಎಂಬ ಹಸಿ ಸುಳ್ಳನ್ನು ಹೇಳುವ ಮೂಲಕ ಎಷ್ಟರ ಮಟ್ಟಿಗೆ ರಾಜಕೀಯವಾಗಿ ಹತಾಶ ಸ್ಥಿತಿಗೆ ತಲುಪಿದ್ದಾರೆ ಎಂಬುದು ಇದರಿಂದಲೇ ವೇದ್ಯವಾಗುತ್ತದೆ. ಗೃಹ ಸಚಿವನಾದ ನನ್ನನ್ನು, ಸಮಾಜದ ಕಟ್ಟಕಡೆಯ ಜನರೂ ಒಳಗೊಂಡಂತೆ ದಿನನಿತ್ಯ ನೂರಾರು ಮಂದಿ ಭೇಟಿ ಮಾಡುತ್ತಾರೆ. ಪ್ರತಿಯೊಬ್ಬರ ಹಿನ್ನೆಲೆಯನ್ನೂ ಸೋಸಿ ನೋಡಲಾಗುವುದಿಲ್ಲ ಎಂದು ಗೃಹಸಚಿವರು ಸ್ಪಷ್ಟಪಡಿಸಿದ್ದಾರೆ.
ಸ್ಯಾಂಟ್ರೋ ರವಿ ‘ಪಿಂಪ್’ ಮಾತ್ರವಲ್ಲ… ಬಗೆದಷ್ಟೂ ಬಯಲಾಗ್ತಿದೆ ಈತನ ಕರಾಳ ಮುಖ…

ಬೀಡಿ ಕಟ್ಟುತ್ತಿದ್ದ ಕೇರಳ ಬಾಲಕ ಅಮೆರಿಕದ ಜಡ್ಜ್​! ಕಷ್ಟದ ದಿನಗಳನ್ನ ನೆನಪಿಸಿಕೊಳ್ಳುತ್ತಲೇ ಜೀವನ ಸಂದೇಶ ಸಾರಿದ ಸುರೇಂದ್ರನ್​ ಪಟ್ಟೇಲ್​

ರಾಜ್ಯದಲ್ಲಿ ಅತಿ ಹೆಚ್ಚು ಮಹಿಳಾ ಮತದಾರರು ಇರುವ ಜಿಲ್ಲೆ ಯಾವುದು? ಸೇರಿದಂತೆ ಉಪಯುಕ್ತ ಮಾಹಿತಿ ಇಲ್ಲಿದೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × one =
Remember me
