-ವೆಸ್ಟೆಂಡ್ ಹೋಟೆಲ್​​​ನಲ್ಲಿ ನಾನು ಪರ್ಮನೆಂಟ್ ಆಗಿ ಇದ್ದವ್ನಾ?
ಬಾಗಲಕೋಟೆ:ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವು ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ಒಬ್ಬರ ಮೇಲೊಬ್ಬರು ಕೆಸರು ಎರಚಾಟ ಮಾಡುತ್ತಿದ್ದಾರೆ. ವೆಸ್ಟೆಂಡ್ ಹೋಟೆಲ್ ನಲ್ಲಿ ಕಾಲ ಕಳೆದು, ಅಧಿಕಾರ ಕಳಕೊಂಡ ಎಂಬ ಸಿದ್ದರಾಮಯ್ಯ ಟೀಕೆಗೆ ಎಚ್‌ಡಿಕೆ ಖಾರವಾಗಿ ಪ್ರತಿಕ್ರಿಯೆ ನೀಡುವ ಮೂಲಕವಾಗಿ ತಿರುಗೇಟು ನೀಡಿದ್ದಾರೆ.
ಬಾಗಲಕೋಟೆಯಲ್ಲಿ ಮಾಜಿ ಸಿಎಂ ಎಚ್.ಡಿಕೆ ಮಾತನಾಡಿ, ಈ ಬಗ್ಗೆ ಸಾವಿರಬಾರಿ ಹೇಳಿದ್ದೇನೆ, ಮೊದಲನೇ ಅಪರಾಧ (ಸಿದ್ದರಾಮಯ್ಯ) ಅವರದ್ದೇ ಆಗಿದೆ. ಜಾರ್ಜ್ ಹೆಸರಲ್ಲಿ ಮನೆ ತಗೊಂಡು ಅದರಲ್ಲಿ ಮುಂದುವರೆದರು. ನನಗೆ ಸರ್ಕಾರಿ ಕ್ವಾಟರ್ಸ್ ಮನೆ ಬಿಟ್ಟುಕೊಡಲಿಲ್ಲ. ಈಗ ಕೇಂದ್ರ ನಾಯಕರೆಲ್ಲ ಬರ್ತಿದ್ದಾರಲ್ಲ, ಅವರು ಎಲ್ಲಿ ವಾಸ್ತವ್ಯ ಮಾಡ್ತಾರೆ ? ವೆಸ್ಟೆಂಡ್ ಹೋಟೆಲ್​​​ನಲ್ಲಿ ನಾನು ಪರ್ಮನೆಂಟ್ ಆಗಿ ಇದ್ದವ್ನಾ? ಎಂದು ಪ್ರಶ್ನೆ ಮಾಡಿದ್ದಾರೆ.
ನಾನು ಹೋಟೆಲ್​​ನಲ್ಲಿ ಇದ್ಕೊಂಡು ಬೆಳಗ್ಗೆ 9 ರಿಂದ ರಾತ್ರಿ 1 ಗಂಟೆವರೆಗೂ ಕೆಲಸ ಮಾಡ್ತಿದ್ದೆ. ಇವರು (ಸಿದ್ದರಾಮಯ್ಯ) ಯಾವ ರೀತಿ ಕೆಲಸ ಮಾಡುತ್ತಿದ್ದರು ಎಂಬುದು ಎಲ್ಲಿರಿಗೂ ಗೊತ್ತಿರುವ ವಿಚಾರವಾಗಿದೆ. ಮಧ್ಯಾಹ್ನ ೧ ಗಂಟೆಗೆ ವಿಧಾನಸೌಧ ಖಾಲಿ ಮಾಡಿಕೊಂಡ ಹೋದ್ರೆ…ಎಲ್ಲಿಗೆ ಹೋಗ್ತಿದ್ರು, ಆರು ಗಂಟೆ ಮೇಲೆ ಯಾರಿಗೆ ಸಿಗ್ತಾಯಿದ್ರು ಎಂದು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ:ವಯಾಗ್ರ ತೆಗೆದುಕೊಂಡ ಆತ ಅವಳ ಮಾತು ಕೇಳದೆ ಕೊನೆಗೆ ಸಾವಿಗೀಡಾದ!
ನಾನು ರಾತ್ರಿ ೧೨ ಗಂಟೆವೆರೆಗೆ ಕೆಲಸ ಮಾಡ್ತಿದ್ದೆ. ಕಾಂಗ್ರೆಸ್​​ನ 78 ಶಾಸಕರಿಗೆ ನನ್ನ 14 ತಿಂಗಳ ಆಡಳಿತ ಅವಧಿಯಲ್ಲಿ 19 ಸಾವಿರ ಕೋಟಿ ರೂ. ಅನುದಾನ ಕೊಟ್ಟಿದ್ದೀನಿ. ಇವತ್ತು ಬಿಜೆಪಿ ಸರ್ಕಾರದಲ್ಲಿ ಕೆಲಸ ನಡೆದಿರೋದು, ನಾನು ಸಿಎಂ ಆಗಿದ್ದಾಗ ಕೊಟ್ಟ ದುಡ್ಡಿನಿಂದ ಆಗಿದೆ. ಬಾದಾಮಿಗೆ ಅಭಿವೃದ್ದಿ ಕೆಲಸ ಆಗಿದ್ದು, ನಾನು ಕೊಟ್ಟ ದುಡ್ಡಿನಲ್ಲಿ‌ಯೇ ಎಂದು ತಮ್ಮ ಆಢಳಿತಧಿಯಲ್ಲಿ ಕುರಿತಾಗಿ ಮಾತನಾಡಿದ್ದಾರೆ.
ಇದನ್ನೂ ಓದಿ:ಪ್ರಣಾಳಿಕೆಯಲ್ಲಿ ಬಜರಂಗದಳ ಬ್ಯಾನ್ ಪ್ರಸ್ತಾಪ | ‘ಕೈ’ ನಾಯಕರಲ್ಲೇ ಗೊಂದಲ; ನಿಷೇಧ ಕೈಬಿಡುವಂತೆ ಹಲವರಿಂದ ಒತ್ತಾಯ
ಸಿದ್ದರಾಮಯ್ಯಗೆ ಬಿಜೆಪಿಯವರಿಂದ ದುಡ್ಡು ತೊಗೊಳ್ಳಾಕೆ ಆಯ್ತಾ? ಜನರ ಬಳಿಗೆ ಹೋಗಿ ಕೆಲಸ ಹೆಂಗೆ ಮಾಡಬೇಕು ಎಂಬುದನ್ನ ಸಿದ್ದರಾಮಯ್ಯ ಅವರಿಂದ ಕಲಿಯಬೇಕಿಲ್ಲ. ಬಾದಾಮಿಗೆ ತಂದಿದ್ದು ನಾಲ್ಕು ಸಾವಿರ ಕೋಟಿ ಎಲ್ಲಿದೆ ದುಡ್ಡು? ಮಳೆಗಾಲದಲ್ಲಿ ಜಲಾವೃತವಾಗುವ ಯಾವುದಾದ್ರೂ ಒಂದು ಹಳ್ಳಿಗೆ ಪುನರ್ ವಸತಿ ಕಲ್ಪಿಸಿದ್ದಾರಾ? 5 ವರ್ಷದಲ್ಲಿ ಬಾದಾಮಿಗೆ ಮೂಲಭೂತ ಸೌಲಭ್ಯವನ್ನಾದ್ರೂ ಕಲ್ಪಿಸಿದ್ದಾರಾ ಎಂದು ಎಚ್.ಡಿಕೆ ಪ್ರಶ್ನೆಗಳ ಸುರಿಮಳೆ ಗೈದಿದ್ದಾರೆ.
ಚಾಕಲೇಟ್‌ ರ್‍ಯಾಪರ್​​​ನಲ್ಲಿ ಬಚ್ಚಿಟ್ಟು ಸಾಗಿಸುತ್ತಿದ್ದ 16.5 ಲಕ್ಷ ರೂ. ಮೌಲ್ಯದ ಚಿನ್ನ ವಶಕ್ಕೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + nine =
Remember me
