ಬೆಂಗಳೂರು:ದಾಖಲೆಯ 14ನೇ ಬಾರಿ ಬಜೆಟ್​ ಮಂಡಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನಾವು ನುಡಿದಂತೆ ನಡೆದಿದ್ದೇವೆ. ಮುಂದೆಯೂ ಈಗೆ ಇರುತ್ತೇವೆ ಎಂದು ನಾಡಿನ ಜನತೆಗೆ ಭರವಸೆಯನ್ನು ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ 2023-24ನೇ ಸಾಲಿನ ಆಯವ್ಯಯದ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಸರ್ವರಿಗೂ ಸಮಪಾಲು, ಸಮಬಾಳಿನ ಬಜೆಟ್ ಮಂಡಿಸಿದ್ದಾರೆ ಎಂದು ಬಣ್ಣಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಎಚ್​ಡಿಕೆ ಬೊಮ್ಮಾಯಿಯವರು ಲೇಖಾನುದಾನ ಪಡೆದಿದ್ದಾರೆ. ಅದರ ಮುಂದುವರೆದ ಬಜೆಟ್ ಇದು. ನಮ್ಮ ಹಣಕಾಸು ಸಚಿವರ ದಾಖಲೆಯ ಬಜೆಟ್ ಇದು. ರಾಮಕೃಷ್ಣ ಹೆಗಡೆಯವರ ನಂತರ ಅತ್ಯಂತ ಹಿರಿಯ ರಾಜಕಾರಣಿ ಸಿದ್ದರಾಮಯ್ಯನವರು. ಜನತಾ ದಳದ ಆರ್ಥಿಕ ಸಚಿವರಾಗಿ 5 ಬಜೆಟ್, ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ ಸರ್ಕಾರದಲ್ಲಿ 2 ಬಜೆಟ್. ಅವರೇ ಸಿಎಂ ಆಗಿ 6 ಬಜೆಟ್ ಮಂಡಿಸಿದ್ದಾರೆ.
ರಾಜ್ಯದ ಅನುಭವಿ ಆರ್ಥಿಕ ಸಚಿವರು ರಾಜ್ಯದ ಜನರಿಗೆ ಸರ್ವರಿಗೂ ಸಮಪಾಲು, ಸಮಬಾಳಿನ ಬಜೆಟ್ ಮಂಡಿಸಿದ್ದಾರೆ. ಇದು ರಾಜ್ಯದ ಬಜೆಟ್ ಪುಸ್ತಕ ಅನ್ನುವುದಕ್ಕಿಂತ ಕೇಂದ್ರ ಸರ್ಕಾರ ಮತ್ತು ಹಿಂದಿನ ಸರ್ಕಾರ ಬಿಜೆಪಿಯ ಆಡಳಿತ ಬಂದ ನಂತರ ಆರ್ಥಿಕ ಶಿಸ್ತನ್ನು ಉಲ್ಲಂಘಿಸಿದ್ದಾರೆ. ಕೇಂದ್ರ ಸರ್ಕಾರ ನಮಗೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದ್ದಾರೆ.
ಬಸವರಾಜ ಬೊಮ್ಮಾಯಿಯವರ ಕಾಲದಲ್ಲಿ ನೀರಾವರಿ ಇಲಾಖೆಗೆ 1 ಲಕ್ಷ ಕೋಟಿ ಯೋಜನೆಗೆ ಅನುಮತಿ ಕೊಟ್ಟಿದ್ದಾರೆ. ಅದಕ್ಕೆ ಈಗ 40 ಸಾವಿರ ಕೋಟಿ ಅಡಿಷನ್ ಆಗುತ್ತೆ. 1 ಲಕ್ಷ 75 ಸಾವಿರ ಕೋಟಿ ಸ್ಕೀಂ ಗಳಿಗೆ ಹಣ ಇಡದೆ ಘೋಷಿಸಿದ್ದಾರೆ. 2013 -18 ರಿಂದ 15 ಲಕ್ಷ ಮನೆ ಕಟ್ಟಿದ್ದೀವಿ ಎಂದು ಹೇಳಿದ್ದಾರೆ. ಎಲ್ಲಿ ಕಟ್ಟಿದ್ದಾರೆ, ಇನ್ನು 12 ಲಕ್ಷ ಮನೆ ಕಟ್ಟಲು 17,815 ಕೋಟಿ ಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ:NSUI ಉಸ್ತುವಾರಿಯಾಗಿ ಕನ್ಹಯ್ಯಾ ಕುಮಾರ್ ನೇಮಕ ಮಾಡಿದ ಎಐಸಿಸಿ
ಈಗ ಆರ್ಥಿಕ ಶಿಸ್ತನ್ನ ಹಾಳುಮಾಡಿದ್ದಾರೆ. ಈ ಬಾರಿ 3 ಲಕ್ಷ 28 ಸಾವಿರ ಕೋಟಿ ಬಜೆಟ್​ನಲ್ಲಿ ಎರಡುವರೆ ಲಕ್ಷ ಕೋಟಿ ರೆವೆನ್ಯೂ ಎಕ್ಸ್​ಪೆಂಡಿಚರ್​, 27 ಸಾವಿರ ಕೋಟಿ ಸಾಲ ಮರುಪಾವತಿಗೆ ಇಟ್ಟುಕೊಂಡಿದ್ದಾರೆ. 85 ಸಾವಿರ ಕೋಟಿ ಸಾಲ ಎತ್ತುತ್ತಾರೆ. ಹಿಂದಿನ ಸರ್ಕಾರ ಆರ್ಥಿಕ ಶಿಸ್ತನ್ನ ಹಾಳುಮಾಡಿದ್ದಾರೆ ಎಂದು ಹೇಳಿದ್ದಾರೆ. ಯಾವುದೇ ಎಫರ್ಟ್ ಇಲ್ಲದೆ ರಾಜ್ಯದ ಜನತೆ ಖಜಾನೆ ತುಂಬಿದ್ದಾರೆ.
ಕೆಟ್ಟ ಆಡಳಿತದಲ್ಲೂ ಈ ಜನತೆಯನ್ನ ಅಭಿನಂಧಿಸುತ್ತೇನೆ. ಕೋವಿಡ್ ಸಮಸ್ಯೆಯಲ್ಲೂ, ಜನ ಹಣ ತುಂಬಿಸಿಕೊಟ್ಟಿದ್ದಾರೆ. ಆದಾಯ ಹೆಚ್ಚಿಸಲು ಅಬಕಾರಿ ಒಂದನ್ನ ಹಿಡಿದುಕೊಂಡಿದ್ದಾರೆ. ಅಬಕಾರಿ ಸುಂಕ ಹೆಚ್ಚಿಸಿದ್ದಾರೆ, ಅನ್ನಭಾಗ್ಯ ಅಕ್ಕಿಗೆ ಹಣಕೊಡಲು ಹೊರಟ್ಟಿದ್ದಿರಲ್ಲ, ಆ ದುಡ್ಡು ಇದಕ್ಕೆ ಹೋಗುತ್ತೆ. ಹಣವನ್ನ ಮನೆಗೆ ತೆಗೆದುಕೊಂಡು ಹೋಗ್ತಾನೊ ಇನ್ನೆಲ್ಲಿ ತಗೊಂಡುಹೋಗ್ತಾನೊ ಗೊತ್ತಿಲ್ಲ.
ಆನ್​ಲೈನ್​ ಗೇಮಿಂಗ್​ನಲ್ಲಿ 65 ಲಕ್ಷ ಕಳೆದುಕೊಂಡಿದ್ದಾರಲ್ಲ ಅನ್ನಭಾಗ್ಯದ ದುಡ್ಡು ಅದಕ್ಕೆ ಹೋಗುತ್ತೋ ಏನೋ ನಾ ಕಾಣೆ. ಇವರು 1995ರಿಂದ ಮಂಡಿಸಿರುವ 13 ಬಜೆಟ್ ಅನ್ನು ಅಧ್ಯಯನ ಮಾಡ್ತಿದ್ದೇನೆ. ದುಡಿಯುವ ಕೈಗೆ ಸ್ವಾವಲಂಬಿಯಾಗಲು ಬದಕಲಿಕ್ಕೆ, ಲಾಂಗ್ ಟರ್ಮ್ ಯೋಜನೆ ಏನು ಕೊಟ್ಟಿದ್ದೀರ. ನಿಮ್ಮ ಯಾವ ಗ್ಯಾರಂಟಿಗೂ ನನ್ನ ತಕರಾರಿಲ್ಲ, ಇನ್ನು ಎರಡು ಜ್ಯೋತಿ ಕೊಡಿ ನಮದ್ದೇನು ತಕರಾರಿಲ್ಲ.
ವರ್ಷಕ್ಕೆ 50 ರಿಂದ 60 ಸಾವಿರ ಕೋಟಿ ವೆಚ್ಚಾಗಲಿದೆ. ಯಾವುದಕ್ಕು ಈ ಬಜೆಟ್​ನಲ್ಲಿ ಹಣ ಇಟ್ಟಿಲ್ಲ. ಇದು ಕೇವಲ ಕೇಂದ್ರ ಸರ್ಕಾರ- ಹಿಂದಿನ ಸರ್ಕಾರವನ್ನ ದೂಷಣೆ ಮಾಡುವ ಬಜೆಟ್ ಅಷ್ಟೇ. ಇದರಲ್ಲಿ ಏನು ಇಲ್ಲ. ಒಂದೇ ವರ್ಷಕ್ಕೆ ಜನರ ಮೇಲೆ 85 ಸಾವಿರ ಕೋಟಿ ಸಾಲ ಇಡ್ತಿದೀರಲ್ಲ. ನೀರಾವರಿ, ಕೃಷಿಗೆ, ಜನರ ಬದುಕು ಕಟ್ಟಲು, ಜನರನ್ನ ಸ್ವಾಭಿಮಾನಿಯನ್ನಾಗಿ ಮಾಡಲು ಈ ಬಜೆಟ್ ಎಷ್ಟು ಸಹಕಾರಿಯಾಗುತ್ತೆ ಎಂದು ಪ್ರಶ್ನಿಸಿದ್ದಾರೆ.
ಕೇಂದ್ರ ಸರ್ಕಾರ- ರಾಜ್ಯ ಸರ್ಕಾರ ಸುಂದರ ಬಾಂಧವ್ಯ ಇಟ್ಟುಕೊಳ್ಳಬೇಕು. ಪ್ರತಿಬಾರಿ ಅವರನ್ನ ದೂಷಿಸಿದ್ರೆ, ಅವರು ಏಕೆ ನೆರವು ನೀಡ್ತಾರೆ. ಕೇಂದ್ರವನ್ನ ಇವರು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಕರ್ನಾಟಕದ ಬಜೆಟ್ ಇಡೀ ದೇಶಕ್ಕೆ ಸಂದೇಶ ಕೊಡುವ ಬಜೆಟ್ ಅಂತೆ ಬಹಳ ಆಕರ್ಷಕ ಎಂದು ಹೇಳಿಕೊಳ್ಳುತ್ತಾರೆ. ಈ ಬಜೆಟ್ ನಲ್ಲಿ ಇನ್ನೇನಿದೆ 5 ವರ್ಷದ ಅವರ ಆಡಳಿತದಲ್ಲಿ ಜನರಿಗೆ ಒಳ್ಳೆಯ ಕೆಲಸ ಮಾಡಿದ್ರೆ ಇವರು 78 ಕ್ಕೆ ಏಕೆ ಬಂದ್ರು.
ಹಿಂದೆ ಬಸವರಾಜ್​ ಬೊಮ್ಮಾಯಿ ಅವರು ಬಜೆಟ್​ ಮಂಡಿಸಿದಾಗ ಇವರು ಕಿವಿ ಮೇಲೆ ಹೂ ಇಟ್ಟುಕೊಂಡು ಬಂದಿದ್ದರು. ಆದರೆ, ಈಗ ರಾಜ್ಯದ ಜನತೆಯ ಕಿವಿ ಮೇಲೆ ಹೂ ಇಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ 14ನೇ ಬಜೇಟ್​ ಕುರಿತು ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಪ್ರತಿಕ್ಕಿಯಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + 3 =
Remember me
