ರಾಮನಗರ:ಚನ್ನಪಟ್ಟಣಕ್ಕೆ ನಾನೇ ಮಂತ್ರಿ, ನಾನೇ ಸರ್ಕಾರ ಎಂದು ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಹೇಳಿದರು.
ಎಂಥೆಂತವರನ್ನ ನಾವು ನೋಡಿಲ್ಲ, ಇಲ್ಯಾರೋ ಮಂತ್ರಿಯಾದ್ರೆ ಹೆದರಿಕೊಂಡು ಹೋಗ್ತೀವಾ? ಯಡಿಯೂರಪ್ಪ ನಮ್ಮ ಜಿಲ್ಲೆಯವರನ್ನೇ ನಾಲ್ಕು ಜನರನ್ನ ಮಂತ್ರಿ ಮಾಡಲಿ. ನನ್ನ ಕ್ಷೇತ್ರಕ್ಕೆ ನಾನೇ ಸರ್ಕಾರ, ನಾನೇ ಮಂತ್ರಿ. ನನ್ನ ಕ್ಷೇತ್ರದ ಅಭಿವೃದ್ಧಿಯಷ್ಟೇ ನನಗೆ ಮುಖ್ಯ. ಇನ್ಯಾರೋ ಮಂತ್ರಿ ಆಗುವುದನ್ನ ತಡೆಯೋದು ನನಗೆ ಬೇಡದ ವಿಷಯ ಎಂದು ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ವಿರುದ್ಧ ಎಚ್​ಡಿಕೆ ಗರಂ ಆದರು.
ಯೋಗೇಶ್ವರ್​ರನ್ನು ಬಿಜೆಪಿಯಲ್ಲಿ ಮಂತ್ರಿ ಮಾಡಬೇಡಿ ಎಂದು ನಾನು ಹೇಳಿದ್ದೀನಂತೆ. ಅವರನ್ನು ಮಂತ್ರಿ ಮಾಡಬೇಡಿ ಎಂದು ಹೇಳುವಷ್ಟು ಕೀಳುಮಟ್ಟಕ್ಕೆ ನಾನು ಇಳಿಯಲ್ಲ. ಯಾರನ್ನೋ ಮಂತ್ರಿ ಮಾಡಿದ್ರೆ ನನಗೇಕೆ ಭಯ? ನಾನು ಹೆದರಿಕೊಳ್ಳುವ ವ್ಯಕ್ತಿಯಲ್ಲ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಕ್ಷೇತ್ರ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡುವಂತೆ ಮಖ್ಯಮಂತ್ರಿಗಳನ್ನ ಭೇಟಿ ಮಾಡಿದ್ದೆ. ಅದರ ಹೊರತು ರಾಜಕೀಯವಾಗಿ ಯಾವುದೇ ವಿಚಾರ ಚರ್ಚೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಅವರು 20 ಕೆರೆ ತುಂಬಿಸಿರೋದಕ್ಕೆ ಭಗೀರಥ ಆಗಿಬಿಟ್ರು, ನಾನು 128 ಕೆರೆ ತುಂಬಿಸಿದ್ದೇನೆ. ನಾನು ಪ್ರಮಾಣಿಕವಾಗಿ ಕೆಲಸ ಮಾಡಿರುವ ವ್ಯಕ್ತಿ. ಜಿಲ್ಲೆಯಲ್ಲಿ ಬಡವರಿಗೆ ಅನ್ಯಾಯ ಹಾಗೂ ಅಕ್ರಮ ಚಟುವಟಿಕೆ ನಡೆಯಲು ಅವಕಾಶ ಮಾಡಿಕೊಡಲ್ಲ ಎಂದ ಎಚ್​ಡಿಕೆ, ಯೋಗೇಶ್ವರ್​ ಹೆಸರನ್ನೇಳದೆ ಕಿಡಿಕಾರಿದರು.(ದಿಗ್ವಿಜಯ ನ್ಯೂಸ್)
‘ರೋಹಿಣಿ ಸಿಂಧೂರಿ ಐಎಎಸ್‌ ಪಾಸ್​ ಮಾಡಿರೋದೇ ಅನುಮಾನ…’

ಸಿಎಂ ವಿರುದ್ಧ ಎಂಟಿಬಿ ನಾಗರಾಜ್​ ಅಸಮಾಧಾನ ಸ್ಫೋಟ!

ರಾತ್ರೋರಾತ್ರಿ ಮನೆಗೆ ಬಂದ ಪರ ಪುರುಷನೊಂದಿಗೆ ಸೊಸೆ ಲವ್ವಿ-ಡವ್ವಿ! ಎಚ್ಚರಗೊಂಡ ಅತ್ತೆಗೆ ಕಾದಿತ್ತು ಗಂಡಾಂತರ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:fifteen − 14 =
Remember me
