ತುಮಕೂರು:2008ರ ಉಪ ಚುನಾವಣೆಯಲ್ಲಿ ಅನಿತಾಳನ್ನು ಮಧುಗಿರಿಯಿಂದ ನಿಲ್ಲಿಸಿದ್ದೆ. ಅದಕ್ಕೂ ಮುಂಚೆ ಅನಿತಾಳ ಬಳಿ ಮನವಿ ಮಾಡಿಕೊಂಡಾಗ, ಮಗ ನಿಖಿಲ್ ಒಂದು ಮಾತು ಹೇಳಿದ್ದ. ನಮ್ಮಪ್ಪ ತೀಟೆ ತೀರಿಸಿಕೊಳ್ಳಲು ನಿನ್ನನ್ನು ಚುನಾವಣೆಗೆ ನಿಲ್ಲಿಸುತ್ತಿದ್ದಾನೆ. ನೀನು ಸ್ಪರ್ಧೆ ಮಾಡಬೇಡ ಎಂದಿದ್ದ. ಕೊನೆಗೂ‌ ಅನಿತಾ ಸ್ಪರ್ಧೆ ಮಾಡಿ ಗೆದ್ದು ಬಂದಳು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿಕೊಂಡಿದ್ದಾರೆ.
ಕುಮಾರಸ್ವಾಮಿ ಮಾತನಾಡುತ್ತಾ, ರಾಜಕೀಯಕ್ಕೆ ಹೋಗುವುದಿಲ್ಲ ಎಂದಾದರೆ ಮಾತ್ರ ಮದುವೆ ಆಗುತ್ತೇನೆ ಎಂದು ಅನಿತಾ ಮದುವೆಗೆ ಮುಂಚೆ ನನಗೆ ಷರತ್ತು ಹಾಕಿದ್ದಳು ಎಂದು ನೆನಪಿಸಿಕೊಂಡರು. ಅನಿತಾ ಮಧುಗಿರಿ ಕ್ಷೇತ್ರದಿಂದ ಚುನಾವಣೆಗೆ ನಿಂತಾಗ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗಿ ಬಂದಿತ್ತು. ಅಂತಿಮವಾಗಿ ದೇವರ ಇಚ್ಛೆಯಂತೆ ಅನಿತಾ ರಾಜಕೀಯಕ್ಕೆ ಬರುವಂತಾಯಿತು ಎಂದು ಹೇಳಿದರು.
ಇದನ್ನೂ ಓದಿ:ಪ್ರಭಾವಿ ರಾಜಕಾರಣಿಯೊಬ್ಬರಿಂದ ಚುನಾವಣಾ ಪ್ರಚಾರಕ್ಕೆ ಬರುವಂತೆ ಯಶ್​​ಗೆ ಆಹ್ವಾನ?
ಹಾಸನ ವಿಧಾನಸಭಾ ಕ್ಷೇತ್ರ ಈ ಬಾರಿಯ ಚುನಾವಣೆಯ ಸಂದರ್ಭದಲ್ಲಿ ರಾಜಕೀಯವಾಗಿ ಸಾಕಷ್ಟು ಕುತೂಹಲ ಕೆರಳಿಸಿದೆ. ಸಧ್ಯದಲ್ಲೇ ಇದಕ್ಕೆ ಅಂತಿಮ ತೆರೆ ಎಳೆಯುತ್ತೇನೆ ಎಂದರು.
ದೇವೇಗೌಡರ ಸಾವನ್ನು ಬಯಸಿದ್ದವರಿಗೆ ಪಾಠ ಕಲಿಸಿ, ಅವರ ಹೆಸರನ್ನು ಉಳಿಸಬೇಕಾಗಿದೆ. ದೇವೇಗೌಡರ ಆಶೀರ್ವಾದ ದಿಂದ ಗೆದ್ದ ರಾಜಣ್ಣ, ಇಂದು ಅವರ ಸಾವನ್ನೇ ಬಯಸಿದ್ದಾರೆ ಎಂದು ಹೇಳಿದರು. ಮಾತನಾಡುತ್ತಾ, ದೇವೇಗೌಡರನ್ನು ಕುತಂತ್ರದ ರಾಜಕಾರಣ ಮಾಡಿ ತುಮಕೂರಿನಲ್ಲಿ ಸೋಲಿಸಲಾಯಿತು. ಆ ನೋವಿನಿಂದ ಮಾನಸಿಕವಾಗಿ ಕುಗ್ಗಿ ಇವತ್ತು ಅನಾರೋಗ್ಯಕ್ಕೆ ಈಡಾಗಿದ್ದಾರೆ ಎನ್ನುತ್ತಾ ಕುಮಾರಸ್ವಾಮಿ ಭಾವನಾತ್ಮಕವಾಗಿ ಮಾತನಾಡಿದರು.
ಇದನ್ನೂ ಓದಿ:ಬ್ಯಾಂಕ್​ಗಳನ್ನು ತಿಂದು ಮುಕ್ಕಿದ್ದಾಯಿತು; ಈಗ KMF ಆಪೋಶನಕ್ಕೆ ಬಿಜೆಪಿ ಮುಂದಾಗಿದೆ; ಸಿದ್ದರಾಮಯ್ಯ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − seventeen =
Remember me
