ಹೊಳೆನರಸೀಪುರ:ಮಾಜಿ ಸಿಚವ ಎಚ್​.ಡಿ. ರೇವಣ್ಣ ಸೋಮವಾರ ಕುಟುಂಬ ಸಮೇತರಾಗಿ ನಾಮಪತ್ರ ಸಲ್ಲಿಸಿದ್ದು ಉಮೇದುವಾರಿಕೆ ಸಲ್ಲಿಕೆಗೂ ಮುನ್ನ ಮಾವಿನಕಾಯಿ ಬೆಟ್ಟದ ರಂಗನಾಥ ಸ್ವಾಮಿ ಹಾಗೂ ಲಕ್ಷ್ಮೀ ರಂಗನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ್ದರು.
ನಾಮಪತ್ರ ಸಲ್ಲಿಕೆಗೂ ಮುನ್ನ ಹೊಳೆನರಸೀಪುರದ್ಲಿ ಬೃಹತ್​ ಬೈಕ್​ ರ್‍ಯಾಲಿ ಹಾಗೂ ಸಾವಿರಾರು ಕಾರ್ಯಕರ್ತರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಪತ್ನಿ ಭವಾನಿ ರೇವಣ್ಣ, ಪುತ್ರರಾದ ಸೂರಜ್​ ಹಾಗೂ ಪ್ರಜ್ಷಲ್​ ತಮ್ಮ ತಂದೆಗೆ ಸಾಥ್​ ನೀಡಿದ್ದರು.
ಮಾಜಿ ಸಚಿವ ಎಚ್​.ಡಿ.ರೇವಣ್ಣ ಹೆಸರಿನಲ್ಲಿ 7.36 ಕೋಟಿ ರೂ ಚರಾಸ್ತಿ, 36.01 ಕೋಟಿ ರೂ ಸ್ಥಿರಾಸ್ತಿ ಹೊಂದಿದ್ದಾರೆ. ಪತ್ನಿ ಭವಾನಿ ರೇವಣ್ಣ ಹೆಸರಲ್ಲಿ 8.66 ಕೋಟಿ ರೂಪಾಯಿ ಚರಾಸ್ತಿ ಹಾಗೂ 29.58 ಕೋಟಿ ರೂ ಮೌಲ್ಯದ ಸ್ಥಿರಾಸ್ತಿ ಹೊಂದಿದ್ಧಾರೆ.

ಎಚ್​.ಡಿ.ರೇವಣ್ಣ ಬಳಿ 320 ಗ್ರಾಂ ಚಿ‌ನ್ನಾಭರಣ, 6.5ಕೆಜಿ ಬೆಳ್ಳಿ ಇದೆ. ಪತ್ನಿ ಭವಾನಿ ರೇವಣ್ಣ ಬಳಿ 45ಕೆಜಿ ಬೆಳ್ಳಿ, 3 ಕೆಜಿ ಚಿನ್ನ, 25 ಕ್ಯಾರೆಟ್ ವಜ್ರದ ಆಭರಣಇದೆ. ಇದರ ಒಟ್ಟು ಮೌಲ್ಯ 2.20 ಕೋಟಿ ರೂ ಎಂದು ತಮ್ಮ ನಾಮಪತ್ರದಲ್ಲಿ ತಿಳಿಸಲಾಗಿದೆ.
ಎಚ್​.ಡಿ.ರೇವಣ್ಣ ತಾಯಿ ಚೆನ್ನಮ್ಮ 60 ಲಕ್ಷ ರೂ, ತಂದೆ ದೇವೇಗೌಡರಿಂದ 31 ಲಕ್ಷ ರೂ ಸಾಲ ಪಡೆದಿದ್ದಾರೆ. ಸಹೋದರ್ ರಮೇಶ್​ ಬಳಿ 4 ಕೋಟಿ ಸಾಲ ಪಡೆದಿದ್ದು ಮನೆ ನಿರ್ಮಾಣಕ್ಕೆ 2 ಕೋಟಿ ರೂ ಸಾಲ ಪಡೆದಿರುವುದಾಗಿ ತಿಳಿಸಿದ್ದಾರೆ.
ಇನ್ನು ಪತ್ನಿ ಭವಾನಿ ರೇವಣ್ಣ ಕೂಡ 5.28 ಕೋಟಿ ರೂ ಸಾಲ ಮಾಡಿರುವುದಾಗಿ ಮಾಜಿ ಎಚ್​.ಡಿ.ರೇವಣ್ಣ ನಾಮಪತ್ರದ ಜೊತೆಗೆ ಸಲ್ಲಿಸಿರುವ ಅಫಿಡವಿಟ್​ನಲ್ಲಿ ತಿಳಿಸಿದ್ಧಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + three =
Remember me
