ಬೆಂಗಳೂರು:ಚಿತ್ರನಟಿಯೊಬ್ಬಳಿಗೆ ರೌಡಿಯೊಬ್ಬನ ಅಣ್ಣ ಮನೆಯಲ್ಲೇ ತಾಳಿ ಕಟ್ಟಿ ಗಂಡನಂತೆ ನಟಿಸಿದ್ದಲ್ಲದೆ, ಬಳಿಕ ಚಿನ್ನಾಭರಣ ಹಾಗೂ ಹಣದೊಂದಿಗೆ ಪರಾರಿಯಾಗಿ, ನಾನು ರೌಡಿಯ ಅಣ್ಣ ಎಂದು ಧಮಕಿ ಹಾಕಿ ಬೆದರಿಸಿದ ಪ್ರಕರಣವೊಂದು ನಡೆದಿದೆ.
ರೌಡಿಶೀಟರ್ ಆಗಿರುವ ಕುಣಿಗಲ್ ಗಿರಿ ಎಂಬಾತನ ಅಣ್ಣ ಹರೀಶ್​ ಎಂಬವನೇ ಆರೋಪಿ. ಈತ ಸ್ಯಾಂಡಲ್​ವುಡ್​ನಲ್ಲಿ ಸಹಕಲಾವಿದೆ ಆಗಿರುವ, ರಾಜಗೋಪಾಲನಗರದ ನಿವಾಸಿ ಯುವತಿಯ ಹಿಂದೆ ಬಿದ್ದಿದ್ದು, ಪ್ರೀತಿಸುವಂತೆ ದುಂಬಾಲು ಬಿದ್ದಿದ್ದ. ಆಕೆಯನ್ನು ಮದುವೆಯಾಗಿ ಬಲೆಗೆ ಬೀಳಿಸಿಕೊಂಡಿದ್ದ ಈತ ಮನೆಯಲ್ಲೇ ತಾಳಿಯನ್ನೂ ಕಟ್ಟಿದ್ದ.
ತಾಳಿ ಕಟ್ಟಿ ಗಂಡನಂತೆ ನಟಿಸಿದ್ದ ಹರೀಶ್ 180 ಗ್ರಾಮ್ ಚಿನ್ನಾಭರಣ ಹಾಗೂ 2.5 ಲಕ್ಷ ರೂ. ನಗದಿನೊಂದಿಗೆ ಪರಾರಿಯಾಗಿದ್ದಾನೆ. ಈ ಬಗ್ಗೆ ಯುವತಿ ರಾಜಗೋಪಾಲನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾಳೆ. ಆಗ ಆತ ಕರೆ ಮಾಡಿ, ನನ್ನ ತಮ್ಮ ಕುಣಿಗಲ್ ಗಿರಿ ರೌಡಿ, ದೂರು ವಾಪಸ್ ಪಡೆದರೆ ಸರಿ, ಇಲ್ಲದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.
ರೌಡಿಶೀಟರ್ ಕುಣಿಗಲ್ ಗಿರಿ ಕೂಡ ಜೈಲಿನಿಂದಲೇ ಕರೆ ಮಾಡಿ ಕೇಸು ವಾಪಸ್ ಪಡೆಯುವಂತೆ ಬೆದರಿಕೆ ಹಾಕಿದ್ದಾನೆ. ಹೀಗಾಗಿ ಯುವತಿ ಹರೀಶ್​ ಮಾತ್ರವಲ್ಲದೆ ಗಿರಿ ವಿರುದ್ಧವೂ ದೂರು ನೀಡಿದ್ದು, ಕ್ರಮಕೈಗೊಳ್ಳುವಂತೆ ಕೋರಿಕೊಂಡಿದ್ದಾಳೆ. ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
ಈತ ಡೇಟಿಂಗ್ ಕಿಂಗ್: ಇದುವರೆಗೆ 335 ಮಹಿಳೆಯರ ಜತೆ ಡೇಟ್ ಮಾಡಿರುವ ಇವನ ಟಾರ್ಗೆಟ್ ಎಷ್ಟು ಗೊತ್ತೇ?

ನರ್ಸ್​-ಡ್ರೈವರ್​ ಲವ್​ ಟ್ರ್ಯಾಜೆಡಿ; ಕಾರೊಳಗೇ ಬೆಂಕಿ ಹಚ್ಚಿಕೊಂಡು ಪ್ರೇಮಿಗಳ ಆತ್ಮಹತ್ಯೆ!

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:five + 6 =
Remember me
