ಕಲಬುರಗಿ:ರಾಜ್ಯದಲ್ಲಿ ಆಗಾಗ ನೈತಿಕ ಪೊಲೀಸ್​ಗಿರಿ, ಧಾರ್ಮಿಕ ಸಂಘರ್ಷದಂಥ ಪ್ರಕರಣಗಳು ನಡೆಯುತ್ತಿರುತ್ತವೆ. ಇದೀಗ ಅಂಥ ಇನ್ನೊಂದು ನೈತಿಕ ಪೊಲೀಸ್​ಗಿರಿ ಎನ್ನುವಂಥ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಮುಸ್ಲಿಂ ಮಹಿಳೆಗೆ ಡ್ರಾಪ್ ಕೊಡಲು ಮುಂದಾಗಿದ್ದಕ್ಕೆ ಹಿಂದೂ ವ್ಯಕ್ತಿಯೊಬ್ಬರಿಗೆ ಮಾರಣಾಂತಿಕ ಹಲ್ಲೆ ನಡೆಸಿರುವ ಪ್ರಕರಣವೊಂದು ನಡೆದಿದೆ. ಕಲಬುರಗಿಯ ಜೇವರ್ಗಿ ತಾಲೂಕಿನ ಚಿಗರಳ್ಳಿ ಬಳಿ ಜು. 15ರಂದು ಈ ಪ್ರಕರಣ ನಡೆದಿತ್ತು.
ಇದನ್ನೂ ಓದಿ:ಯಾವುದೇ ಕಾರಣಕ್ಕೂ ಹನುಮ ಜಯಂತಿ ನಿಲ್ಲಬಾರದು; ಮುಂದಿನ ಸಲ ಇನ್ನೂ ಅದ್ಧೂರಿ ಆಗಿರಬೇಕು: ಚಕ್ರವರ್ತಿ ಸೂಲಿಬೆಲೆ
ಜೇವರ್ಗಿ ತಾಲೂಕಿನ ವರಧಿ ಗ್ರಾಮದ ನಿವಾಸಿ ಶ್ಯಾಮರಾಯ್ ಮೇಲೆ ಹಲ್ಲೆ ನಡೆದಿದೆ. ಇವರು ತಮ್ಮದೇ ಗ್ರಾಮದ ಮುಸ್ಲಿಂ ಮಹಿಳೆಯೊಬ್ಬರನ್ನು ಬೈಕ್​ನಲ್ಲಿ ಕೂರಿಸಿಕೊಂಡು ಡ್ರಾಪ್ ಕೊಡಲು ಹೊರಟಿದ್ದಾಗ ಅಡ್ಡಗಟ್ಟಿ ಹಲ್ಲೆ ಮಾಡಲಾಗಿದೆ.
ಇದನ್ನೂ ಓದಿ:INDIAಗೆ ಯಾರ ನೇತೃತ್ವ?: ಮಲ್ಲಿಕಾರ್ಜುನ ಖರ್ಗೆ ಉತ್ತರ ಇದು..
ಜೇವರ್ಗಿಯ ಡಿಕೆ ಗ್ಯಾಂಗ್​ ಎಂಬ ಗುಂಪಿನ ಮೂರ್ನಾಲ್ಕು ಯುವಕರು ಒಂದಾಗಿ ಈ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಹಲ್ಲೆಗೊಳಗಾದ ಶ್ಯಾಮರಾಯ್ ಮಹಾರಾಷ್ಟ್ರದ ಸೊಲ್ಲಾಪುರ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಕುಟುಂಬಸ್ಥರು ಜೇವರ್ಗಿ ಠಾಣೆಗೆ ದೂರು ನೀಡಿದ್ದಾರೆ.
ಮಕ್ಕಳನ್ನು ಡೌನ್​ಲೋಡ್ ಮಾಡಿಕೊಳ್ಳುವ ಕಾಲ ಬರಬಹುದಾ?; ಇದೇನಿದು ಅಪ್ಪ-ಅಮ್ಮ ಇಲ್ಲದೆ ಮಗು ಹುಟ್ಟಿಸೋ ಪ್ರಯತ್ನ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 5 =
Remember me
