ಕಲಬುರಗಿ:ಚಲಿಸುವ ವೇಳೆ ಟೈರ್​ ಸ್ಪೋಟಗೊಂಡು ಕಾರು ಪಲ್ಟಿಯಾದ ಪರಿಣಾಮ ಹೆಡ್​ಕಾನ್ಸ್​ಟೇಬಲ್ ಒಬ್ಬರು​ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕಲಬುರಗಿ ಜಿಲ್ಲೆ ಸೇಡಂ ತಾಲ್ಲೂಕಿನ ಮಳಖೇಡ ಬಳಿ ನಡೆದಿದೆ.
ಕಲಬುರಗಿಯ ಅಶೋಕ್​ ನಗರ ಪೊಲೀಸ್​ ಠಾಣೆಯಲ್ಲಿ ಹೆಡ್​ಕಾನ್ಸ್​ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿರುವ ಮೊಯಿಜುದ್ದೀನ್​(52) ಮೃತ ದುರ್ದೈವಿ ಎಂದು ತಿಳಿದು ಬಂದಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಇದನ್ನೂ ಓದಿ:ಸೇತುವೆಯಿಂದ ತಳ್ಳಲ್ಪಟ್ಟರೂ ಪೊಲೀಸರಿಗೆ ಕರೆಮಾಡಿ ಬದುಕುಳಿದ ಅಪ್ರಾಪ್ತ ವಯಸ್ಕಳು
ಕಲಬುರಗಿಯಿಂದ ಮಳಖೇಡದತ್ತ ಹೆಡ್​ಕಾನ್ಸ್​​ಟೇಬಲ್​ ಮೊಯಿಜುದ್ದೀನ್​ ತಮ್ಮ ಸಹೋದರ ನಜುಮೊದ್ದಿನ್ ಹಾಗೂ ಇನ್ನಿಬ್ಬರ​ ಜೊತೆ ಕಾರಿನಲ್ಲಿ ತೆರಳುತ್ತಿದ್ದರು. ಮಳಖೇಡ ಪೆಟ್ರೋಲ್​ ಬಂಕ್​ ಬಳಿ ಚಲಿಸುವ ವೇಳೆ ಟೈರ್​ ಸ್ಪೋಟಗೊಂಡ ಪರಿಣಾಮ ಕಾರು ಪಲ್ಟಿಯಾಗಿದ್ದು, ತೀವ್ರವಾಗಿ ಗಾಯಗೊಂಡಿದ್ದ ಮೊಯಿಜುದ್ದೀನ್​ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ನಜುಮೊದ್ದಿನ್​ ಸೇರಿದಂತೆ ಇನ್ನಿಬ್ಬರು ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಮಳಖೇಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 10 =
Remember me
