ಬೆಂಗಳೂರು:ಕಟ್ಟಡ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಪ್ರತಿವಾದಿಗಳು ಅಡ್ಡಿಪಡಿಸದಂತೆ ನ್ಯಾಯಾಲಯ ನೀಡಿದ್ದ, ಆದೇಶವನ್ನು ಅನುಷ್ಠಾನಕ್ಕೆ ತರಲು 1.5 ಲಕ್ಷ ರೂಪಾಯಿ ಲಂಚವನ್ನು ಸ್ವೀಕರಿಸುತ್ತಿದ್ದ ಪೀಣ್ಯ ಪೊಲೀಸ್​ ಠಾಣೆಯ ಹೆಡ್​ಕಾನ್ಸ್​ಟೇಬಲ್​ ಮಾರೇಗೌಡ ಎಂಬುವವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ನಾಗಸಂದ್ರ ಬಳಿ ಇರುವ ನೆಲಗೆದರನಹಳ್ಳಿಯ ನಿವಾಸಿ ಗವಿರಾಜ್​ ಗೌಡ ಎಂಬುವವರು ಬಿಬಿಎಂಪಿ ವಾರ್ಡ್​ ನಂ 40ರ ವ್ಯಾಪ್ತಿಯಲ್ಲಿ ಬರುವ ಕರಿವೋಬನಹಳ್ಳಿಯಲ್ಲಿದ್ದ 20*40 ಚದರ ಅಡಿ ನಿವೇಶನವನ್ನು ಟಿ.ದಾಸರಹಳ್ಳಿಯ ವಿದ್ಯಾನಗರದ ನಿವಾಸಿ ದಿನೇಶ್​ ಎಂಬುವವರಿಗೆ ಮಾರಾಟ ಮಾಡಿದ್ದರು.
ಮಾರಾಟ ಮಾಡಿರುವ ಸದರಿ ನಿವೇಶನ ತಮ್ಮದೆಂದು ಕೋಕಿಲಾ ಮತ್ತು ಲಕ್ಷ್ಮಣ್​ ರೆಡ್ಡಿ ಎಂಬುವವರು ತಗಾದೆ ತೆಗೆದಿದ್ದರು. ಕಟ್ಟಡ ನಿರ್ಮಾಣ ಕಾಮಗಾರಿಯನ್ನು ನಿಲ್ಲಿಸುವಂತೆ ದಿನೇಶ ಮೇಲೆ ಒತ್ತಡ ಹೇರುತ್ತಿದ್ದರು. ಈ ಸಂಬಂಧ ದಿನೇಶ್​ ನ್ಯಾಯಾಲಯದಲ್ಲಿ ದಾವೆ ಹೂಡಿ ಕೋಕಿಲಾ ಮತ್ತು ಲಕ್ಷ್ಮಣ್​ ರೆಡ್ಡಿ ನಿವೇಶನದೊಳಗೆ ಪ್ರವೇಶಿಸದಂತೆ ಪ್ರತಿಬಂಧಕಾಜ್ಞೆ ತಂದಿದ್ದರು.
ಇದನ್ನೂ ಓದಿ:VIDEO| ಸಿಂಹದ ಜತೆ ಹೋರಾಡಿ ಹಸುವನ್ನು ರಕ್ಷಿಸಿದ ರೈತ
ಬಳಿಕ ನ್ಯಾಯಾಲಯ ನೀಡಿ್ದ, ಪ್ರತಿಬಂಧಕಾಜ್ಞೆ ಪ್ರತಿಯೊಂದಿಗೆ ಪೀಣ್ಯ ಠಾಣೆಗೆ ತೆರಳಿ ಗವಿರಾಜ್​ ದೂರು ನೀಡಿದ್ದರು. ಅರ್ಜಿದಾರ ದಿನೇಶ್​ ಅವರಿಗೆ ಸೂಕ್ತ ರಕ್ಷಣೆ ನೀಡುವಂತೆ ವಿನಂತಿಸಿದ್ದರು. ಕಟ್ಟಡ ಕಾಮಗಾರಿ ಮುಂದುವರೆಸಲು, ರಕ್ಷಣೆ ನೀಡಲು ಠಾಣೆಯ ಹೆಡ್​ ಕಾನ್ಸ್​ಟೇಬಲ್​ ಮಾರೇಗೌಡ 3 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ.
ಅರ್ಜಿದಾರರು ಆರೋಪಿಯೊಂದಿಗೆ ಚೌಕಾಸಿ ನಡೆಸಿದ್ದು, ಬಳಿಕ 1.5 ಲಕ್ಷ ರೂಪಾಯಿಗೆ ಒಪ್ಪಿಕೊಂಡಿದ್ದಾನೆ. ಈ ಕುರಿತು ಗವಿರಾಜ್​ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದು, ಮಾರೇಗೌಡ ಪೊಲೀಸ್​ ಠಾಣೆ ಬಳಿ ಇರುವ ಕೆಫೆ ಒಂದರಲ್ಲಿ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದು, ಇನ್ಸ್​ಪೆಕ್ಟರ್​ ಬಾಲಾಜಿ ಬಾಬು ಹಾಗೂ ತಂಡದವರು ದಾಳಿ ಮಾಡಿ ಆತನನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
