ಬೆಂಗಳೂರು: ಕರೊನಾ COVID19 ವೈರಸ್ ಸೋಂಕು ನಿನ್ನೆ ಸಂಜೆ 5 ಗಂಟೆಯಿಂದ ಇಂದು ಮಧ್ಯಾಹ್ನ 12 ಗಂಟೆ ಅವಧಿಯಲ್ಲಿ ಹೊಸದಾಗಿ 23 ಜನರಲ್ಲಿ ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕುಪೀಡಿತರ ಸಂಖ್ಯೆ 1079ಕ್ಕೆ ಏರಿಕೆಯಾಗಿದೆ. ಸದ್ಯ ಸೋಂಕು ಸಕ್ರಿಯವಾಗಿರುವವರ ಸಂಖ್ಯೆ 548 ಆದರೆ, ಆಸ್ಪತ್ರೆಯಿಂದ ಬಿಡುಗಡೆ ಹೊಂದಿದವರ ಸಂಖ್ಯೆ 494.
ಇದನ್ನೂ ಓದಿ:ಒಂದು ಹಾವು ಕಚ್ಚಿದ್ರೂ ಬಚಾವ್​, ಆದ್ರೆ ಮತ್ತೊಂದು ಬೆಡ್​ರೂಮ್​ಗೇ ನುಗ್ಗಿತ್ತು..
ಇನ್ನು ಸೋಂಕಿನಿಂದಾಗಿ ಮೃತಪಟ್ಟವರ ಸಂಖ್ಯೆ 36 ಆಗಿದ್ದು, ಇದಲ್ಲದೆ ಒಬ್ಬ ಸೋಂಕುಪೀಡಿತ ವ್ಯಕ್ತಿ ಕೋವಿಡ್ 19 ಅಲ್ಲದ ಕಾರಣದಿಂದಾಗಿ ಮೃತಪಟ್ಟಿರುತ್ತಾರೆ. ರಾಜ್ಯದಲ್ಲಿ ಇಂದು ಖಚಿತವಾಗಿರುವ ಹೊಸ 23 ಪ್ರಕರಣಗಳ ಪೈಕಿ ಗರಿಷ್ಠ 15 ಪ್ರಕರಣ ಬೆಂಗಳೂರಿನಲ್ಲೇ ಇದೆ. ಉಳಿದಂತೆ ಹಾಸನದಲ್ಲಿ ಮೂರು, ಹುಬ್ಬಳ್ಳಿ, ಉಡುಪಿ, ಬಳ್ಳಾರಿ, ದಾವಣಗೆರೆ, ಬಾಗಲಕೋಟೆಗಳಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಸೆಕೆಂಡ್​ ಪಿಯು ವಿದ್ಯಾರ್ಥಿಗಳ ಗಮನಕ್ಕೆ- ಇಂಗ್ಲಿಷ್ ಪರೀಕ್ಷೆ ನೀವಿರುವ ಜಿಲ್ಲೆಯಿಂದಲೇ ಬರೀತೀರಾ? – ಈ ಸುದ್ದಿ ಓದಿ..
ಈ ಪೈಕಿ 9 ಪ್ರಕರಣಗಳಲ್ಲಿ ಸೋಂಕಿನ ಮೂಲ ಪತ್ತೆಯಾಗಿಲ್ಲ. ಅಂತಾರಾಜ್ಯ, ಅಂತರ್​ಜಿಲ್ಲೆ, ಅಂತಾರಾಷ್ಟ್ರೀಯ ಪ್ರಯಾಣದ ವಿವರ ನೀಡಿದ್ದಾರೆ. ಇನ್ನುಳಿದಂತೆ ವಿವರಗಳಿಗೆ ಕೆಳಗೆ ಇರುವ ಬುಲೆಟಿನ್ ಪ್ರತಿಯನ್ನು ವೀಕ್ಷಿಸಬಹುದು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 11 =
Remember me
