ಬೆಂಗಳೂರು:ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವುದನ್ನು ನಿಯಂತ್ರಿಸಲು ಹೊಸ ಉಪಾಯ ಮಾಡಿರುವ ಆರೋಗ್ಯ ಇಲಾಖೆ ‘ಸ್ಟಾಪ್ ಟೊಬ್ಯಾಕೋ’ ಆಪ್ ಸಿದ್ಧಪಡಿಸಿದೆ. ಸಾರ್ವಜನಿಕವಾಗಿ ಬೀಡಿ, ಸಿಗರೇಟ್ ಸೇದುತ್ತಿರುವುದನ್ನು ಕಂಡರೆ ಜನರೇ ಫೋಟೋ ತೆಗೆದು ಆಪ್​ಗೆ ಅಪ್​ಲೋಡ್ ಮಾಡಬಹುದು. ಅದನ್ನು ಗಮನಿಸಿ ಅಧಿಕಾರಿಗಳು ಸ್ಥಳಕ್ಕೇ ಬಂದು ದಂಡ ವಿಧಿಸಲಿದ್ದಾರೆ. ಈ ವ್ಯವಸ್ಥೆ ರಾಜ್ಯಾದ್ಯಂತ ಶೀಘ್ರದಲ್ಲೇ ಜಾರಿಯಾಗುತ್ತಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವ ಮುನ್ನ ಎಚ್ಚರ ವಹಿಸುವುದು ಒಳಿತು…!
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರಿಂದ ಇತರರಿಗೆ ಕಿರಿಕಿರಿ ಆಗುವುದರ ಜತೆಗೆ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ. ಹೀಗಾಗಿ ಅದನ್ನು ನಿಯಂತ್ರಿಸಲು ಆರೋಗ್ಯ ಇಲಾಖೆ ವರ್ಷಾಂತ್ಯದ ವೇಳೆಗೆ ಜಿಪಿಎಸ್ ಆಧಾರಿತ ಆಪ್ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ.
ಆಪ್ ಬಳಕೆ ಹೇಗೆ?
ಆಂಡ್ರಾಯ್ಡ್ ಮೊಬೈಲ್ ಹೊಂದಿರುವವರು ಪ್ಲೇಸ್ಟೋರ್​ಗೆ ಹೋಗಿ ‘ಸ್ಟಾಪ್ ಟೊಬ್ಯಾಕೋ’ (ಠಠಿಟಟಠಿಟಚಿಚ್ಚ್ಚ) ಆಪ್ ಡೌನ್​ಲೋಡ್ ಮಾಡಿಕೊಳ್ಳಬೇಕು. ಅಂಗಡಿ, ಬೇಕರಿ, ಹೋಟೆಲ್, ಶಾಲೆ ಮತ್ತು ಕಾಲೇಜು ಸ್ಥಳ, ಬಸ್ ನಿಲ್ದಾಣ, ರೈಲು ನಿಲ್ದಾಣ, ಆಟದ ಮೈದಾನ ಇತ್ಯಾದಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುತ್ತಿದ್ದರೆ ಆ ಸ್ಥಳದ ಚಿತ್ರ ತೆಗೆದು (ವ್ಯಕ್ತಿಯ ಫೋಟೋ ಅಗತ್ಯವಿಲ್ಲ) ಆಪ್​ನಲ್ಲಿ ಅಪ್​ಲೋಡ್ ಮಾಡಬೇಕು. ನಂತರ ಕೇಳಲಾಗುವ ಜಿಲ್ಲೆ, ತಾಲೂಕು, ಮೊಬೈಲ್ ಸಂಖ್ಯೆ ಇತ್ಯಾದಿ ವಿವರಗಳಿಗೆ ಲಿಂಕ್ ಒತ್ತುವ ಮೂಲಕ ಉತ್ತರಿಸಿದರೆ ಸಾಕು.
ತಂಬಾಕು ನಿಷೇಧ ಜಾಗೃತಿ
ಆಪ್​ನಲ್ಲಿ ಅಪ್​ಲೋಡ್ ಆಗುವ ಫೋಟೋ ಮತ್ತು ಸಂದೇಶ ಸಂಬಂಧಪಟ್ಟ ಜಿಲ್ಲೆಯ ತಂಬಾಕು ನಿಯಂತ್ರಣಾ ಘಟಕಕ್ಕೆ ರವಾನೆಯಾಗಲಿದೆ. ಅಲ್ಲಿಂದ ಅದನ್ನು ತಾಲೂಕು ನಿಯಂತ್ರಣಾ ಘಟಕಕ್ಕೆ ಕಳುಹಿಸಲಾಗುವುದು. ಆಪ್ ಜಿಪಿಎಸ್ ತಂತ್ರಜ್ಞಾನ ಹೊಂದಿರುವುದರಿಂದ ದೂರು ಬಂದಿರುವ ನಿರ್ದಿಷ್ಟ ಸ್ಥಳವನ್ನು ಮ್ಯಾಪ್ ಮೂಲಕ ತೋರಿಸಲಿದೆ. ಈ ಆಪ್ ದೂರು ಸಲ್ಲಿಸಲು ಮಾತ್ರವಲ್ಲದೆ, ತಂಬಾಕು ಬಳಕೆಯ ದುಷ್ಪರಿಣಾಮಗಳ ಕುರಿತ ಮಾಹಿತಿ ಮತ್ತು ಜಾಗೃತಿ ಸಂದೇಶಗಳನ್ನೂ ತೋರಿಸಲಿದೆ. ತಂಬಾಕು ನಿಷೇಧದ ಪೋಸ್ಟರ್​ಗಳನ್ನು ಸಹ ಪ್ರದರ್ಶಿಸಲಿದೆ. ಅದನ್ನು ಡೌನ್​ಲೋಡ್ ಮಾಡಿ ಪ್ರಿಂಟ್ ತೆಗೆದು ಅಂಗಡಿಗಳ ಮುಂದೆ ಹಾಕಬಹುದಾಗಿದೆ.
ಕೋಟ್ಪಾ ಉಲ್ಲಂಘನೆ ಕಂಡುಬಂದಲ್ಲಿ ಸಾರ್ವಜನಿಕರು ಅಂತಹ ಸ್ಥಳದ ಛಾಯಾಚಿತ್ರ ತೆಗೆದು ‘ಸ್ಟಾಪ್ ಟೊಬ್ಯಾಕೋ’ ಆಪ್​ಗೆ ರವಾನಿಸಿದರೆ, ತಂಬಾಕು ನಿಯಂತ್ರಣಾ ಸ್ಕಾ್ವಡ್ ನಿರ್ದಿಷ್ಟ ಸ್ಥಳಕ್ಕೆ ತೆರಳಿ, ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಲಿದೆ. ಅಗತ್ಯಬಿದ್ದರೆ ಶಿಸ್ತು ಕ್ರಮವನ್ನೂ ಕೈಗೊಳ್ಳಲಿದೆ. 2019ರಲ್ಲಿ ಹತ್ತು ಜಿಲ್ಲೆಗಳಲ್ಲಿ ಇದನ್ನು ಪ್ರಯೋಗಿಕವಾಗಿ ಜಾರಿಗೆ ತರಲಾಗಿತ್ತು. ಆದರೆ, ಕೋವಿಡ್​ನಿಂದಾಗಿ ಅದಕ್ಕೆ ಹಿನ್ನಡೆಯಾಯಿತು. ಆಗ ಇ-ಮೇಲ್ ಮೂಲಕ ಸಂದೇಶ ಕಳುಹಿಸಬೇಕಿತ್ತು.
ಈಗ ಜಿಪಿಎಸ್ ಅಳವಡಿಕೆ ಮಾಡಲಾಗಿದ್ದು, ರಾಜ್ಯದ ಎಲ್ಲ 30 ಜಿಲ್ಲೆಗಳಲ್ಲೂ ಜಾರಿಗೆ ತರ ಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸ್ಕ್ವಾಡ್ ರಚನೆ:ಪ್ರತಿ ತಾಲೂಕಿನಲ್ಲಿ ತಾಲೂಕು ವೈದ್ಯಾಧಿಕಾರಿ, ತಹಶೀಲ್ದಾರ್, ಸರ್ಕಲ್ ಇನ್​ಸ್ಪೆಕ್ಟರ್, ಹೆಲ್ತ್ ಇನ್​ಸ್ಪೆಕ್ಟರ್, ಪಿಡಿಒ ಹಾಗೂ ಇಬ್ಬರು ಪೊಲೀಸರನ್ನು ಒಳಗೊಂಡ ಸ್ಕಾ್ವಡ್ ರಚಿಸಲಾಗಿದೆ. ಆಪ್ ಮೂಲಕ ಬರುವ ಸಂದೇಶ ಆಧರಿಸಿ ನಿರ್ದಿಷ್ಟ ಸ್ಥಳಕ್ಕೆ ತೆರಳಿ ಕ್ರಮ ಕೈಗೊಳ್ಳಲಿದೆ.
ದಂಡ ವಸೂಲಿ ಹೇಗೆ?:ಆಪ್​ನಲ್ಲಿ ಬಂದ ದೂರು ಆಧರಿಸಿ ತಂಬಾಕು ನಿಯಂತ್ರಣಾ ಸ್ಕಾ್ವಡ್ ತೆರಳಿದ ಸಂದರ್ಭದಲ್ಲಿ ಆ ಸ್ಥಳದಲ್ಲಿ ಅಂದರೆ ಸಾರ್ವಜನಿಕವಾಗಿ ಧೂಮಪಾನ ಮಾಡುತ್ತಿದ್ದರೆ ಅಂತಹ ಪ್ರತಿ ವ್ಯಕ್ತಿಗೆ 200 ರೂ. ದಂಡ ವಿಧಿಸಲಾಗುವುದು. ಅವರಿಗೆ ಅಂಗಡಿಯ ಎದುರು ಧೂಮಪಾನ ಮಾಡಲು ಅವಕಾಶ ನೀಡಿದ ಅಂಗಡಿ ಮಾಲೀಕನಿಗೂ ದಂಡ ವಿಧಿಸಲಾಗುವುದು. ದಂಡದ ರಶೀದಿ ನೀಡಲು ಎಲೆಕ್ಟ್ರಾನಿಕ್ ಬಿಲ್ಲಿಂಗ್ ಯಂತ್ರ ನೀಡಲು ನಿರ್ಧರಿಸಿದ್ದು, ಇದನ್ನು ಪ್ರಾಯೋಗಿಕವಾಗಿ ಚಿಕ್ಕಬಳ್ಳಾಪುರದಲ್ಲಿ ಬಳಕೆ ಮಾಡಲಾಗುತ್ತಿದೆ. ಇದರಿಂದ ಆಯಾ ದಿನದ ದಂಡ ವಸೂಲಿಯ ವಿವರ ಅಂದೇ ಲಭ್ಯವಾಗಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − two =
Remember me
