ಕಾರವಾರ:ಕರೊನಾ ರೋಗಿಗಳ ಮೊಬೈಲ್ ಸಂಖ್ಯೆ ಪಡೆದು ಅವರಿಗೆ ವಿಶ್ವ ಆರೋಗ್ಯ ಸಂಸ್ಥೆ ಹೆಸರಿನಲ್ಲಿ ವಂಚನೆಗೆ ಯತ್ನಿಸುತ್ತಿರುವ ಅಂಶ ಬೆಳಕಿಗೆ ಬಂದಿದೆ. ಸೋಂಕಿತರ ಹೆಸರು, ಮೊಬೈಲ್ ಸಂಖ್ಯೆ, ಇ-ಮೇಲ್ ಐಡಿ ಮುಂತಾದ ವಿವರಗಳಿರುವ ಅಪ್ಪಟ ಸರ್ಕಾರಿ ದಾಖಲೆ ಜಿಲ್ಲಾಡಳಿತಕ್ಕೆ ಸಿಗುವುದಕ್ಕೂ ಮೊದಲೇ ನೆಟ್ಟಿಗರಿಗೆ ಲಭ್ಯವಾಗುತ್ತಿದೆ. ಹಲವರು ಇದನ್ನು ವಾಟ್ಸ್​ಆಪ್, ಫೇಸ್​ಬುಕ್ ಸ್ಟೇಟಸ್ ಇಟ್ಟುಕೊಳ್ಳುವುದು ಹಾಗೂ ಗ್ರ್ರೂಪ್​ಗಳಲ್ಲಿ ಹರಿಬಿಡುತ್ತಿದ್ದಾರೆ. ಇದರಿಂದ ಸೋಂಕಿತರಿಗೆ ಸಾಮಾಜಿಕವಾಗಿ ತೊಂದರೆ ಉಂಟಾಗುವ ಜತೆಗೆ, ವಂಚಕರಿಗೂ ಅನುಕೂಲ ಮಾಡಿಕೊಡಲಾಗುತ್ತಿದೆ.
‘ಕೋವಿಡ್-19 ಪರಿಹಾರ ನಿಧಿಗೆ ನೀವು ಆಯ್ಕೆಯಾಗಿದ್ದೀರಿ. ನಿಮ್ಮ ಖಾತೆಗೆ 1,80,000 ಪೌಂಡ್ ಪರಿಹಾರ ನೀಡಲಿದ್ದೇವೆ’ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೆಸರಿನಲ್ಲಿ ಇ-ಮೇಲ್ ಕಳಿಸಲಾಗುತ್ತಿದೆ. ಐವಿಆರ್ ಸಂಖ್ಯೆಯಿಂದ ಎಸ್​ಎಂಎಸ್ ಮಾಡಲಾಗುತ್ತಿದೆ. ಪೊಲೀಸ್ ಇಂಟಲಿಜೆನ್ಸಿ ಹೆಸರಿನಲ್ಲೂ ಕರೆ ಬರುತ್ತದೆ. ಇದಕ್ಕೆ ಸ್ಪಂದಿಸಿದರೆ ಟ್ಯಾಕ್ಸ್ ಹೆಸರಿನಲ್ಲಿ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ಹಾಕುವಂತೆ ನಂಬಿಸಿ ವಂಚಿಸಲಾಗುತ್ತದೆ.
ಇದನ್ನೂ ಓದಿ:ಸಪ್ತಪದಿ ತುಳಿದ ಐದೇ ದಿನಕ್ಕೆ ಮದುಮಗ ಸಾವು, 20 ಜನರಿಗೆ ಕೋವಿಡ್​ ಸೋಂಕು!
ಸಿಬ್ಬಂದಿ ಕೈವಾಡ:ಸೋಂಕಿತರ ಹೆಸರು, ಮೊಬೈಲ್ ಸಂಖ್ಯೆ ಮುಂತಾದ ದಾಖಲೆಗಳು ಸಾರ್ವಜನಿಕರಿಗೆ ಹರಿದಾಡುತ್ತಿರುವುದರ ಹಿಂದೆ ಇಲ್ಲಿನ ಸರ್ಕಾರಿ ಪ್ರಯೋಗಾಲಯದ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿ, ಅಧಿಕಾರಿಗಳ ಕೈವಾಡ ಇರುವ ಅನುಮಾನವಿದೆ. ಈ ಕುರಿತು ಕ್ರಮ ವಹಿಸುವಂತೆ ಅಚ್ಯುತಕುಮಾರ ಎಂಬುವವರು ಎಸ್​ಪಿ ಕಚೇರಿಗೆ ದೂರು ನೀಡಿದ್ದಾರೆ.
ಮಿಲನಕ್ಕೆ ಇಲ್ಲ ಅಡ್ಡಿ, ಚುಂಬನಕ್ಕೆ ಇದೆ ಕೆಂಪುದೀಪ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
