ಗದಗ:ರಾಜ್ಯದಲ್ಲಿ ಡೆಂಘೆ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ರೋಗ ನಿಯಂತ್ರಣ ಮಾಡೋದ್ರಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಗದಗದಲ್ಲಿ ಸಂಸದ ಬಸವರಾಜ್ ಬೊಮ್ಮಾಯಿ ಹೇಳಿದರು.
ಇದನ್ನೂ ಓದಿ:ಸಮಸ್ಯೆಗಳಿಗೆ ಸಮರೋಪಾದಿ ಪರಿಹಾರ: ಜನತಾ ದರ್ಶನದಲ್ಲಿ ಸಚಿವ ದಿನೇಶ್ ಗುಂಡೂರಾವ್ ಭರವಸೆ
ಡೆಂಘೀ ಒಂದೂವರೆ ತಿಂಗಳಿಂದ ಆರಂಭವಾಗಿದ್ದರೂ ಅಧಿಕಾರಿಗಳು ಕೇರ್ ಲೆಸ್ ಆಗಿದ್ದಾರೆ. ಡಿಹೆಚ್ ಓ, ವೈದ್ಯರು ಯಾವುದೇ ಮುಂಜಾಗ್ರತಾ ಕ್ರಮ ತೆಗೆದುಕೊಂಡಿಲ್ಲ. ಹೊಸ ಮಳೆ ನೀರಿನಿಂದ ಬರುವ ಜ್ವರವಿದು. ಆದರೆ, ಜಾಗೃತಿ ಮೂಡಿಸುವ, ಔಷಧಿ ಸಿಂಪಡಣೆ ಯಾವುದನ್ನೂ ಸಹ ಕೈಗೊಂಡಿಲ್ಲ. ಆರಂಭದಲ್ಲಿ ಸೋಂಕಿತರನ್ನು ಬೇರೆ ಕೆಟಗರಿಗೆ ಹಾಕಿ ಡೆಂಘೀ ಸಂಖ್ಯೆ ಕಡಿಮೆ ತೋರಿಸುವ ಪ್ರಯತ್ನ ಮಾಡಿದರು. ಪರೀಕ್ಷೆ ಕೂಡ ಬಹಳ ಕಡಿಮೆ ಮಾಡ್ತಿದ್ದಾರೆ ಎಂದು ಆರೋಪಿಸಿದರು.
ದೊಡ್ಡ ಮಟ್ಟದಲ್ಲಿ ವ್ಯಾಪಕವಾಗಿ ಡೆಂಘೀ ಹರಡುತ್ತಿದೆ. ಅವರ ಪ್ರಕಾರ 7000 ಡೆಂಗ್ಯೂ ಸೋಂಕಿತರ ಸಂಖ್ಯೆಯಿದೆ. ಸತ್ಯ ಹೇಳಬೇಕು ಅಂದ್ರೆ ಇದರ ಎರಡು ಪಟ್ಟು ಸೋಂಕಿತರ ಸಂಖ್ಯೆ ಇದೆ. ಜಿಲ್ಲಾ ಆಸ್ಪತ್ರೆಯಲ್ಲಿ ಯಾವುದೇ ವ್ಯವಸ್ಥೆ ಇಲ್ಲ. ಸರ್ಕಾರ ಡೆಂಘೀ ನಿಯಂತ್ರಣ ಮಾಡೋದ್ರಲ್ಲಿ ವಿಫಲವಾಗಿದೆ. ಉಚಿತವಾಗಿ ಡೆಂಘೀ ಟೆಸ್ಟ್ ಆಗಬೇಕು ಎಂದು ಬಸವರಾಜ್ ಬೊಮ್ಮಾಯಿ ಹೇಳಿದರು.
ಈಗಲಾದರೂ ನಿಮಗೆಲ್ಲಾ ಅರ್ಥವಾಯ್ತಾ? ಮಿ. 360 ಮಾತಿಗೆ ಕ್ರಿಕೆಟ್ ಫ್ಯಾನ್ಸ್ ಗಪ್​ ಚುಪ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × three =
Remember me
