ಬೆಂಗಳೂರು: ಬ್ರಿಟನ್ ನಿಂದ ಕಳೆದ 2 ತಿಂಗಳಲ್ಲಿ ರಾಜ್ಯಕ್ಕೆ ಮರಳಿದವರಲ್ಲಿ ನಾಪತ್ತೆಯಾದ 199 ಜನರಲ್ಲಿ 80 ಮಂದಿ ವಿದೇಶಿ ಪ್ರಜೆಗಳಿದ್ದಾರೆ. ಬಾಕಿ ಸಂಪರ್ಕಕ್ಕೆ ಸಿಗದವರಲ್ಲಿ ದೇಶದ 119 ಜನರು ಸೇರಿದ್ದಾರೆ. ಈ ಪೈಕಿ 24 ಮಂದಿಯನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿ ದ್ದಾರೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, ಪತ್ತೆಯಾದವರನ್ನು ಪರೀಕ್ಷೆಗೆ ಒಳಪಡಿಸಲು ಕ್ರಮವಹಿಸಲಾಗಿದೆ. ನಾಪತ್ತೆಯಾದ 80 ವಿದೇಶಿ ಪ್ರಜೆಗಳ ಮೊಬೈಲ್ ನಂಬರ್ ಸಿಗದಿದ್ದರೂ ಶೋಧ ಕಾರ್ಯ ಮುಂದುವರಿದಿದ್ದು, ಆದಷ್ಟು ಬೇಗ ಪತ್ತೆ ಹಚ್ಚುವ ವಿಶ್ವಾಸವನ್ನು ಪೊಲೀಸ್ ಇಲಾಖೆ ವ್ಯಕ್ತಪಡಿಸಿದೆ ಎಂದರು.
ಹೊಸ ಪ್ರಕರಣಗಳಿಲ್ಲ :ಬ್ರಿಟನ್ ವೈರಸ್ ಸೋಂಕಿತ ಹೊಸ ಪ್ರಕರಣಗಳು ಇಂದು ವರದಿಯಾಗಿಲ್ಲ. ಬೆಂಗಳೂರಿನ ಮೂವರು, ಶಿವಮೊಗ್ಗದ ನಾಲ್ವರು ರೂಪಾಂತರಿ ಕರೊನಾ ಸೋಂಕಿತರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಇವರ ಸಂಪರ್ಕಕ್ಕೆ ಬಂದಿದ್ದ ನಾಲ್ವರಿಗೆ ಕರೊನಾ ಸೋಂಕು ದೃಢಪಟ್ಟಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಯು.ಕೆ.ಯಿಂದ ಹಿಂದಿರುಗಿದವರಲ್ಲಿ 30 ಹಾಗೂ ಸಂಪರ್ಕಿತ 4 ಮಂದಿ ಸೇರಿದಂತೆ ಒಟ್ಟು 34 ಜನರಿಗೆ ಸೋಂಕು ದೃಢಪಟ್ಟಿದೆ. ಈ ಪೈಕಿ7 ಜನರಿಗೆ ಮಾತ್ರ ಈವರೆಗೆ ಹೊಸ ಮಾದರಿ ಸೋಂಕು ತಗುಲಿರುವುದು ಖಚಿತಪಟ್ಟಿದೆ ಎಂದು ಡಾ.ಸುಧಾಕರ್ ವಿವರಿಸಿದರು.
ಇದನ್ನೂ ಓದಿ:ರಾಜ್ಯದ ಪಶುಸಂಗೋಪನಾ ಸಚಿವರ ತವರು ಜಿಲ್ಲೆಯಲ್ಲಿ ಪಶುಗಳ ಮಾರಣಹೋಮ?!
ದ್ವಂದ್ವವಿಲ್ಲ :ನೈಟ್ ಕರ್ಫ್ಯೂ ವಿಚಾರದಲ್ಲಿ ಸಚಿವ ಸಂಪುಟ ಸಹೋದ್ಯೋಗಿಗಳ ಮಧ್ಯೆ ಯಾವುದೇ ದ್ವಂದ್ವವಿಲ್ಲ. ನೈಟ್ ಕರ್ಫ್ಯೂ ಅಪ್ರಸ್ತುತ, ಈ ವಿಷಯದಲ್ಲಿ ಮುಖ್ಯಮಂತ್ರಿ ನಿರ್ಧಾರವೇ ಅಂತಿಮವೆಂದು ಸ್ಪಷ್ಟಪಡಿಸಿದರು. ತಾಂತ್ರಿಕ ಸಮಿತಿ ಸಲಹೆ ಮೇರೆಗೆ ಈ ಹಿಂದೆ ನೈಟ್ ಕರ್ಫ್ಯೂ ನಿರ್ಧಾರವನ್ನು ಸರ್ಕಾರ ಕೈಗೊಂಡಿತ್ತು. ಆದರೆ, ಪ್ರತಿಪಕ್ಷಗಳ ವಿರೋಧ, ವಿವಿಧ ವರ್ಗಗಳು ವ್ಯತಿರಿಕ್ತ ಪರಿಣಾಮ, ಆರ್ಥಿಕ ಚಟುವಟಿಕೆಗಳಿಗೆ ಹೊಡೆತ ಬೀಳುತ್ತದೆ ಎಂಬ ಕಳವಳಕ್ಕೆ ಸ್ಪಂದಿಸಿದ ಸಿಎಂ ಬಿಎಸ್ ವೈ ನೈಟ್ ಕರ್ಫ್ಯೂ ನಿರ್ಧಾರ ವಾಪಸ್ ಪಡೆದರು ಎಂದು ಸುಧಾಕರ್ ಸಮರ್ಥಿಸಿಕೊಂಡರು.
ಇದನ್ನೂ ಓದಿ:ಗ್ರಾ.ಪಂ​. ಚುನಾವಣೇಲೂ ನೋಟಾ ಜಾರಿಗೆ ತನ್ನಿ- ಮತಪತ್ರದ ಬದಲೊಂದು ಮನವಿಪತ್ರ!
ರೂಪಾಂತರಿ ಕರೊನಾ ವೈರಾಣು ಸೋಂಕು ಪ್ರಕರಣಗಳು ವರದಿಯಾಗಿವೆ. ಆದರೆ, ಪ್ರದೇಶ ಅಥವಾ ಬಡಾವಣೆ ಸೀಲ್ ಡೌನ್, ನಿಯಂತ್ರಿತರ ವಲಯಗಳನ್ನು ಗುರುತಿಸಿ ಘೋಷಿಸುವ ಅಗತ್ಯವಿಲ್ಲವೆಂದು ಪುನರುಚ್ಚರಿಸಿದರು. ಬೆಂಗಳೂರಿನಲ್ಲಿ ಇಂದು ಸಂಜೆ ಬದಲಿಗೆ ಮಧ್ಯಾಹ್ನದಿಂದಲೇ ನಿಷೇಧಾಜ್ಞೆ ಜಾರಿಗೊಳಿಸಲಾಗುತ್ತಿದೆ. ಜನರಿಗೆ ಪೂರಕವಾಗಿ ನಿರ್ಧಾರಗಳನ್ನು ಬದಲಾಯಿಸಿದರೆ ಗೊಂದಲವಿದೆ ಎಂದು ಅರ್ಥೈಸಿಕೊಳ್ಳಬೇಕಾಗಿಲ್ಲ ಎಂದರು.
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮಫೇಸ್​ಬುಕ್​ ಪುಟಲೈಕ್ ಮಾಡಿ ಮತ್ತು ಫಾಲೋ ಮಾಡಿ..
ಬೆಂಗಳೂರು ವಿಮಾನ ಇಂದೋರ್​ನಲ್ಲಿ ಎಮರ್ಜೆನ್ಸಿ ಲ್ಯಾಂಡ್​​ ಆಯ್ತು: ಪ್ರಾಣ ಉಳಿಸೋ ಪ್ರಯತ್ನಕ್ಕೆ ದೇವರ​ ಸಾಥ್ ಸಿಕ್ಕಿಲ್ಲ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 + three =
Remember me
