ಚಿತ್ರದುರ್ಗ:ಜಮೀನು ಒಂದರಲ್ಲಿ ಕಂತೆ ಕಂತೆ ಹಣ ನೋಡಿದ ಗ್ರಾಮಸ್ಥರು ಅಚ್ಚರಿಗೀಡಾದ ಘಟನೆ ಚಳ್ಳಕೆರೆ ತಾಲೂಕಿನ ಬುಕ್ಲೂರಹಳ್ಳಿಯಲ್ಲಿ ಗುರುವಾರ ನಡೆದಿದೆ.
ದಿಕ್ಕು ದೆಸೆ ಇಲ್ಲದೆ ಅನಾಥವಾಗಿ ಬಿದ್ದಿದ್ದ ರಾಶಿ ಹಣವನ್ನು ನೋಡಿದರೆ ಯಾರಿಗೇ ತಾನೇ ಆಶ್ಚರ್ಯವಾಗುವುದಿಲ್ಲ ಹೇಳಿ. ಅಲ್ಲದೆ, ಕರೊನಾ ವೈರಸ್​ ಕಾಲದಲ್ಲಿ ಜನರು ರಸ್ತೆಯಲ್ಲಿ ಬಿದ್ದಿದ್ದ ಹಣವನ್ನು ಮುಟ್ಟಲು ಹೆದರಿದಂತ ಅನೇಕ ಘಟನೆಗಳು ಸಹ ಈ ಹಿಂದೆ ವರದಿಯಾಗಿವೆ. ಒಮ್ಮೆಲೆ ಭಾರಿ ಹಣ ನೋಡಿದ ಜನರಿಗೆ ಮುಂದೇ ಏನಾದರೂ ಸಮಸ್ಯೆ ಆಗುವ ಮೊದಲು ಪೊಲೀಸರಿಗೆ ಮಾಹಿತಿ ತಿಳಿಸಿಬಿಡೋಣ ಎಂದು ಚಿತ್ರದುರ್ಗದ ತಳಕು ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಪ್ರಾಣಕ್ಕಿಂತ ಕೊಟ್ಟ ಮಾತು ದೊಡ್ಡದು … ಕಂಗನಾ ಹೀಗೆ ಹೇಳಿದ್ದು ಯಾಕೆ?
ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಣದ ಪರಿಶೀಲನೆ ನಡೆಸಿ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.
ಇನ್ನು ಬುಕ್ಲೂರಹಳ್ಳಿ ಬಳಿ 3 ದಿನದ ಹಿಂದೆ ದಿಲೀಪ್ ಬ್ಯುಲ್ಡ್ ಕಾನ್ ಕಂಪನಿಯಲ್ಲಿ 36ಲಕ್ಷ ರೂ. ಕಳುವಾಗಿತ್ತು. ಅದೇ ಹಣವನ್ನು ಮತ್ತೆ ವಾಪಾಸ್ ತಂದು ಇಟ್ಟಿ ಹೋಗಿದ್ದಾರೆನ್ನಲಾಗಿದೆ. ದಿಲೀಪ್ ಕಾನ್ ಕಚೇರಿ‌ ಹಿಂಭಾಗದ ಜಮೀನಿನಲ್ಲೇ ಹಣ ಪತ್ತೆಯಾಗಿದೆ.(ದಿಗ್ವಿಜಯ ನ್ಯೂಸ್​)
https://www.facebook.com/DighvijayNews/videos/352418292668712
14ರ ಬಾಲೆಗೆ ಮಗು ಕರುಣಿಸಿದ್ದ 11ರ ಪೋರ? ಕಠೋರ ಸತ್ಯ ತಿಳಿದ ಬೆನ್ನಲ್ಲೇ ಗರ್ಲ್​ಫ್ರೆಂಡ್​ಗೆ ಗುಡ್​ಬೈ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − sixteen =
Remember me
