ಹುಬ್ಬಳ್ಳಿ:ಪ್ರೀತಿಪಾತ್ರರ ಅಗಲಿಕೆಯನ್ನು ತಾಳಲಾಗದೆ ಇನ್ನೊಬ್ಬರೂ ಸಾವಿಗೀಡಾದ ಪ್ರಕರಣಗಳು ಹಲವಾರು ನಡೆದಿವೆ. ಅಂಥ ದುರಂತ ಸಾವುಗಳ ಪಟ್ಟಿಗೆ ಇಂದು ಇನ್ನೊಂದು ಪ್ರಕರಣ ಸೇರಿದೆ. ಈ ಪ್ರಕರಣದಲ್ಲಿ ಒಂದೇ ದಿನ ಪತಿ-ಪತ್ನಿ ಇಬ್ಬರೂ ಸಾವಿಗೀಡಾಗಿದ್ದಾರೆ.
ಹುಬ್ಬಳ್ಳಿ ತಾಲೂಕಿನ ಶಿರಗುಪ್ಪ ಗ್ರಾಮದಲ್ಲಿ ಈ ಜೋಡಿ ಸಾವು ಸಂಭವಿಸಿದೆ. ಪ್ರಗತಿಪರ ರೈತ ಶಿವಪುತ್ರಪ್ಪ ನೆಲಗುಡ್ಡ (90) ಹಾಗೂ ಅವರ ಪತ್ನಿ ಬಸಮ್ಮ (86) ಒಬ್ಬರ ಹಿಂದೊಬ್ಬರಂತೆ ಮೃತಪಟ್ಟವರು. ಅನಾರೋಗ್ಯದಿಂದ ಬಳಲುತ್ತಿದ್ದ ಶಿವಪುತ್ರಪ್ಪ ಇಂದು ಬೆಳಗ್ಗೆ ಮೃತಪಟ್ಟಿದ್ದರು.
ನಂತರ ಅವರ ಅಂತ್ಯಕ್ರಿಯೆ ನಡೆಯುವ ಸಮಯದಲ್ಲಿ ಪತ್ನಿ ಬಸಮ್ಮ ಹೃದಯಾಘಾತಕ್ಕೆ ಒಳಗಾಗಿ ಸಾವಿಗೀಡಾದರು. ಆಮೇಲೆ ಪತಿಯ ಪಕ್ಕವೇ ಪತ್ನಿಯ ಅಂತ್ಯಕ್ರಿಯೆಯನ್ನು ನಡೆಸಲಾಯಿತು. ದಂಪತಿಯ ಈ ಥರದ ಸಾವಿಗೆ ಮರುಗಿದ ಗ್ರಾಮಸ್ಥರು ಸಂತಾಪ ಸೂಚಿಸಿದರು.
ಸಾವಿನಲ್ಲೂ ಒಂದಾದ ತಾಯಿ ಮತ್ತು ಮಗ: ಸವಣೂರು ತಾಲೂಕಿನ ಕಲಕೋಟಿ ಗ್ರಾಮದಲ್ಲಿ ನಡೆದ ಘಟನೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + three =
Remember me
