|ವಿಲಾಸ ಮೇಲಗಿರಿ ಬೆಂಗಳೂರು
ಕರೊನೋತ್ತರ ಸಮಸ್ಯೆಗಳು ಒಂದರ ಮೇಲೊಂದು ಕಾಡತೊಡಗಿವೆ. ಕಪ್ಪು ಶಿಲೀಂಧ್ರ ತರುವಾಯ ರೋಗಿಗಳಲ್ಲಿ ರಕ್ತದ ಹೆಪ್ಪುಗಟ್ಟುವ ಪ್ರಕರಣ ಹೆಚ್ಚಾಗಿವೆ. ಕರೊನಾಪೀಡಿತರು, ರೋಗ ಗೆದ್ದವರಲ್ಲಿ ಅನೇಕರು ಹಠಾತ್ ಸಾವಿಗೀಡಾಗುತ್ತಿದ್ದಾರೆ.
ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆದವರಲ್ಲಿ ಶೇ.40 ಮಂದಿ ರಕ್ತ ಹೆಪ್ಪುಗಟ್ಟಿ ಸಾವನ್ನಪ್ಪಿರುವುದು ಸಾಬೀತಾಗಿದೆ. ಇನ್ನು ಕೆಲವರು ಗುಣಮುಖರಾದ ತರುವಾಯವೂ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ. ಇದು ವೈದ್ಯಕೀಯ ವಲಯಕ್ಕೆ ದೊಡ್ಡ ಸವಾಲಾಗಿದೆ.
ಮೊದಲ ಅಲೆಯಲ್ಲಿ ಸಾಮಾನ್ಯವಾಗಿ 60 ವರ್ಷ ಮೇಲ್ಪಟ್ಟವರು ಸಾವಿಗೀಡಾಗುತ್ತಿದ್ದರು. 2ನೇ ಅಲೆಯಲ್ಲಿ 30-50 ವರ್ಷದೊಳಗಿನವರು ಹೈ ರಿಸ್ಕ್​ಗೆ ಒಳಗಾಗಿದ್ದಾರೆ. ಈ ವಯೋಮಾನದವರಲ್ಲೇ ರಕ್ತ ಹೆಪ್ಪುಗಟ್ಟುವಿಕೆ ಪ್ರಮಾಣ ಹೆಚ್ಚಾಗಿ ಕಂಡುಬಂದಿದೆ. ಪ್ರತಿ ಹತ್ತು ರೋಗಿಗಳಲ್ಲಿ ನಾಲ್ವರಿಗೆ ರಕ್ತ ಹೆಪ್ಪುಗಟ್ಟುವ ಸಾಧ್ಯತೆಯಿದೆ ಎಂದು ವೈದ್ಯರು ಹೇಳುತ್ತಾರೆ. ಈ ಸಮಸ್ಯೆ ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಇನ್ನೂ ಹೆಚ್ವಿನ ಸಂಖ್ಯೆಯಲ್ಲಿ ಸಾವು ಸಂಭವಿಸಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಶಿಷ್ಟಾಚಾರದ ಭಾಗವಾಗಲಿ: ಮೊದಲ ಅಲೆಯಲ್ಲಿ ರಕ್ತ ತೆಳುವಾಗುವ ಮಾತ್ರೆಗಳನ್ನು 60 ವರ್ಷಕ್ಕಿಂತ ಮೇಲ್ಪಟ್ಟ ರೋಗಿಗಳಿಗೆ ಮಾತ್ರ ಶಿಫಾರಸು ಮಾಡಲಾಗುತ್ತಿತ್ತು. ಈಗ 30-50 ವರ್ಷ ವಯಸ್ಸಿನ ವರ್ಗದಲ್ಲಿ ಇದರ ಪರಿಣಾಮ ಕಾಣುತ್ತಿದ್ದು, ಹಲವರು ಈಗಾಗಲೇ ರಕ್ತ ತೆಳುವಾಗುವ ಔಷಧ ತೆಗೆದುಕೊಳ್ಳುತ್ತಿದ್ದಾರೆ. ಇವರಲ್ಲಿ ಸಮಸ್ಯೆಗಳು ಕಂಡುಬಂದಿಲ್ಲ. ಹಾಗಾಗಿ ಸೋಂಕಿಗೆ ತುತ್ತಾದರಿಗೆ ನೀಡುವ ಚಿಕಿತ್ಸಾ ಶಿಷ್ಟಾಚಾರದಲ್ಲಿಯೇ (ಟ್ರೀಟ್​ವೆುಂಟ್ ಪ್ರೊಟೋಕಾಲ್) ರಕ್ತ ತೆಳು ಮಾಡುವ ಔಷಧವನ್ನೂ ಸೇರ್ಪಡೆ ಮಾಡುವುದು ಸೂಕ್ತ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಈ ಔಷಧವನ್ನು ತಾತ್ಕಾಲಿಕವಾಗಿ ತೆಗೆದುಕೊಳ್ಳಬೇಕೆ, ದೀರ್ಘಕಾಲ ತೆಗೆದುಕೊಳ್ಳಬೇಕೆ ಎಂಬುದನ್ನು ರೋಗಿಯ ಅಪಾಯಕಾರಿ ಅಂಶಗಳನ್ನು ಆಧರಿಸಿ ವೈದ್ಯರು ನಿರ್ಣಯಿಸಬೇಕಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.
ರಕ್ತ ತೆಳುವಾಗುವಂತೆ ನೋಡಿಕೊಳ್ಳಿ
ಸೋಂಕಿತರಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ಕಾರಣ ಸಾಮಾನ್ಯ ಪ್ರಕರಣಕ್ಕಿಂತ ಸಂಪೂರ್ಣ ಭಿನ್ನವಾಗಿದೆ. ಕರೊನಾ ವೈರಸ್ ಸ್ವತಃ ರಕ್ತ ಹೆಪ್ಪುಗಟ್ಟಲು ಕಾರಣ ವಾಗುತ್ತದೆ. ವಿಶೇಷವಾಗಿ ಶ್ವಾಸಕೋಶದ ರಕ್ತನಾಳಗಳಲ್ಲಿ ಹೆಚ್ಚಿನ ಹೆಪ್ಪುಗಟ್ಟುವಿಕೆ ಕಂಡುಬರುತ್ತಿವೆ. ಇದು ಶ್ವಾಸಕೋಶದ ಅಪಧಮನಿಗಳಲ್ಲಿ ರಕ್ತ ಪರಿಚಲನೆಯನ್ನು ತಡೆಯುತ್ತದೆ. ಇದರಿಂದ ಹಠಾತ್ ಸಾವು ಕಂಡುಬರುತ್ತಿವೆ. ಮತ್ತೆ ಕೆಲವರಲ್ಲಿ ಪಾರ್ಶ್ವವಾಯುಗಳಿಗೆ ಕಾರಣವಾಗುತ್ತದೆ ಎಂದು ವೈದ್ಯಕೀಯ ಸಂಶೋಧಕರು ಹೇಳಿದ್ದಾರೆ. ಈಗಾಗಲೇ ಕೆಲವು ವೈದ್ಯರು ಕೋವಿಡ್​ನಿಂದ ಗುಣಮುಖರಾದವರಿಗೂ ದೀರ್ಘಕಾಲ ರಕ್ತ ತೆಳುವಾಗುವ ಮಾತ್ರೆ ಶಿಫಾರಸು ಮಾಡಿದ್ದಾರೆ. ಕೋವಿಡ್ ರೋಗಿಗಳ ಸಾವು ತಡೆಯಲು ರಕ್ತ ತೆಳುವಾಗುವಂತೆ ನೋಡಿಕೊಳ್ಳುವುದು ಮುಖ್ಯವಾಗಿರುತ್ತದೆ.
ಔಷಧ ಬಳಕೆ ಸೂಕ್ತ
ಯುರೋಪಿನಲ್ಲಿ ಹಲವಾರು ಅಧ್ಯಯನಗಳು ಕೋವಿಡ್​ನಿಂದಾಗಿ ರಕ್ತ ಹೆಪ್ಪುಗಟ್ಟುವುದನ್ನು ಸಾಬೀತುಪಡಿಸಿವೆ. ಹೀಗಾಗಿ, ಕರೊನಾ ರೋಗಿಗಳು ಹಾಗೂ ಸೋಂಕು ಗೆದ್ದವರೂ ರಕ್ತ ತೆಳುವಾಗುವ ಔಷದ ಬಳಕೆ ಮಾಡುವ ಅವಶ್ಯಕತೆಯಿದೆ. ಚಿಕಿತ್ಸೆಯ ಒಂದು ಭಾಗವಾಗಿ ಈ ಔಷಧವನ್ನೂ ಸೇರಿಸಬೇಕು ಎಂದು ತುಮಕೂರು ಜಿಲ್ಲಾ ಕ್ಷಯರೋಗ ನಿಮೂಲನಾಧಿಕಾರಿ ಡಾ. ಜಿ.ಕೆ. ಸನತ್​ಕುಮಾರ್ ಅಭಿಪ್ರಾಯಪಡುತ್ತಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + eight =
Remember me
