ಬೆಂಗಳೂರು:ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ 17 ವರ್ಷದ ಯುವಕನಿಗೆ ಜಯದೇವ ಹೃದ್ರೋಗ ಆಸ್ಪತ್ರೆ ತಜ್ಞರು ತೆರೆದ ಶಸ್ತ್ರಚಿಕಿತ್ಸೆ ನಡೆಸದೆಯೇ ಹೃದಯ ಕವಾಟ ಬದಲಿಸುವ ಮೂಲಕ ಹೊಸ ದಾಖಲೆ ನಿರ್ವಿುಸಿದ್ದಾರೆ.
ಯುವಕನಿಗೆ ಈ ಮೊದಲೇ ಎರಡು ಬಾರಿ ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಮೂರನೇ ಬಾರಿ ನಡೆಸುವುದು ಅಪಾಯವಾಗಿತ್ತು. ಹಾಗಾಗಿ ಶಸ್ತ್ರಚಿಕಿತ್ಸೆ ನಡೆಸದೆಯೇ 19 ಮಿ.ಮೀ. ಗಾತ್ರದ (Mಢ್ಖಚ್ಝ) ಅಂಗಾಂಶದ ಕವಾಟ ಬಳಸಿ ಬದಲಾವಣೆ ಮಾಡಲಾಯಿತು. ಇಷ್ಟು ಕಿರಿಯ ವಯಸ್ಸಿನಲ್ಲಿ ಇಂತಹ ಕಾರ್ಯವಿಧಾನ ಮೂಲಕ ಹೃದಯ ಚಿಕಿತ್ಸೆ ನಡೆಸಿರುವುದು ರಾಜ್ಯದಲ್ಲಿ ಇದೇ ಮೊದಲು ಎಂದು ಸಂಸ್ಥೆ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ತಿಳಿಸಿದ್ದಾರೆ. ಮಕ್ಕಳ ಹೃದ್ರೋಗ ತಜ್ಞ ಡಾ. ಜಯರಂಗನಾಥ್ ಮತ್ತು ಡಾ. ಜಾನ್ ಜೋಸೆಫ್ ನೇತೃತ್ವದ ವೈದ್ಯರ ತಂಡ ಈ ಕಾರ್ಯವಿಧಾನವನ್ನು ಯಶಸ್ವಿಯಗಿ ನಿರ್ವಹಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಚಿಕಿತ್ಸೆಯ ವಿವರ:ಕೆಲ ವರ್ಷಗಳಿಂದ ಹೃದಯ ಸಮಸ್ಯೆ ಹೊಂದಿದ್ದ ಯುವಕ 2012ರಲ್ಲಿ ಮೊದಲ ಬಾರಿಗೆ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಬಂದಿದ್ದರು. ಆತನ ಹೃದಯದ ಬಲಭಾಗದಲ್ಲಿ ಸೋಂಕು ಇರುವುದು ಪರೀಕ್ಷೆಯಿಂದ ಕಂಡು ಬಂದಿತ್ತು. ಹೃದಯ ಕವಾಟ ಸಂಪೂರ್ಣ ನಾಶವಾಗಿತ್ತು. ಆಗ ಸೋಂಕಿಗೆ ಚಿಕಿತ್ಸೆ ನೀಡಿ ಬಳಿಕ ತೆರೆದ ಹೃದಯ ಶಸ್ತ್ರಚಕಿತ್ಸೆಗೆ ಒಳಪಡಿಸಿ ಕವಾಟ ಸರಿಪಡಿಸಲಾಗಿತ್ತು. ಒಂದು ವರ್ಷದ ನಂತರ ಅದೇ ಕವಾಟದ ಸೋರಿಕೆಯಿಂದ ಮತ್ತೆ ಆಸ್ಪತ್ರೆಗೆ ಆಗಮಿಸಿದ್ದ ಯುವಕನಿಗೆ, 2017ರಲ್ಲಿ ಮೃತ ದೇಹದ ಹೃದಯದಿಂದ ತೆರೆಯಲಾಗಿದ್ದ ಗ್ರಾಪ್ಟ್ ಅನ್ನು ಬಳಸಿ 2ನೇ ಬಾರಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಎರಡು ವರ್ಷಗಳ ನಂತರ ಹೃದಯ ಬಡಿತದ ಸಮಸ್ಯೆಯಿಂದಾಗಿ ಮತ್ತೆ ಆಸ್ಪತ್ರೆಗೆ ಆತ ದಾಖಲಾಗಿದ್ದ. 2020ರಲ್ಲಿ ರೇಡಿಯೋ ಫ್ರೀಕ್ವೆನ್ಸಿ ಅಬ್ಲೇಷನ್ ಮೂಲಕ ಹೃದಯ ಬಡಿತ ಸಮಸ್ಯೆಗೆ ಚಿಕಿತ್ಸೆ ನೀಡಲಾಗಿತ್ತು. ಇಷ್ಟಾದರೂ ಸರಿಪಡಿಸಲಾದ ಕವಾಟದಿಂದ ಮತ್ತೆ ಸೋರಿಕೆ ಕಂಡುಬಂದಿತ್ತು.
ಖಾಸಗಿಯಲ್ಲಿ ಹೃದಯ ಕವಾಟ ಬದಲಿ ಶಸ್ತ್ರಚಿಕಿತ್ಸೆಗೆ 15 ಲಕ್ಷ ರೂ. ವೆಚ್ಚವಾಗಲಿದೆ. ಆದರೆ ಜಯದೇವ ಆಸ್ಪತ್ರೆಯಲ್ಲಿ ರೋಗಿಗೆ ದಾನಿಗಳ ನೆರವು ಪಡೆದು ಸಂಪೂರ್ಣ ಉಚಿತವಾಗಿ ಚಿಕಿತ್ಸೆ ನೀಡಲಾಗಿದೆ. ಚಿಕಿತ್ಸೆಗಾಗಿ ದಾನಿಗಳಿಂದ 6.5 ಲಕ್ಷ ರೂ. ಸಂಗ್ರಹವಾಗಿದ್ದು, ಬಾಕಿ ಮೊತ್ತವನ್ನು ಆಸ್ಪತ್ರೆ ಹಾಗೂ ಕವಾಟ ಕಂಪನಿಯಿಂದ ಭರಿಸಲಾಗಿದೆ.
|ಡಾ. ಸಿ.ಎನ್. ಮಂಜುನಾಥ್ನಿರ್ದೇಶಕ, ಜಯದೇವ ಹೃದ್ರೋಗ ಸಂಸ್ಥೆ
ತಂದೆಯ ಅಂತ್ಯಸಂಸ್ಕಾರಕ್ಕೆಂದು ಬಂದ ಪುತ್ರನೂ ಇನ್ನಿಲ್ಲ; ಇಬ್ಬರ ಸಾವಿನಾಘಾತದ ಮಧ್ಯೆಯೂ ಅಂಗಾಂಗಗಳ ದಾನ..

ಇದ್ದಕ್ಕಿದ್ದಂತೆ ಹೆಚ್ಚಾಯ್ತು ಕೋವಿಡ್​ ಕೇಸ್​; ಚೀನಾದಲ್ಲಿಂದು 2 ವರ್ಷದಲ್ಲೇ ಅತ್ಯಧಿಕ ದೈನಂದಿನ ಪ್ರಕರಣ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + sixteen =
Remember me
