ಬೆಂಗಳೂರು:ಹದಿನಾಲ್ಕು ವರ್ಷದ ಬಾಲಕನೊಬ್ಬ ತಾಯಿಯ ಶವದೊಂದಿಗೆ ಎರಡು ದಿನ ಕಳೆದ ಹೃದಯ ವಿದ್ರಾವಕ ಘಟನೆ ಸಿಲಿಕಾನ್​ ಸಿಟಿಯ ಆರ್.ಟಿ.ನಗರ ಠಾಣಾ ವ್ಯಾಪ್ತಿಯ ರೇಣುಕಾ ಯಲ್ಲಮ್ಮ ಗಂಗಮ್ಮ ದೇವಸ್ಥಾನದ ಬಳಿ ನಡೆದಿದೆ.
ಅಣ್ಣಮ್ಮ (44) ಮೃತ ಮಹಿಳೆ. ಲೋ ಬಿಪಿ ಮತ್ತು ಶುಗರ್​ನಿಂದಾಗಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಫೆಬ್ರವರಿ 26 ರಂದೇ ಮನೆಯಲ್ಲಿ ಮಲಗಿದ್ದಾಗಲೇ ಅಣ್ಣಮ್ಮ ಅಸುನೀಗಿದ್ದಾರೆ. ಫೆಬ್ರವರಿ 28ರ ವರೆಗೆ ಬಾಲಕ ತಾಯಿಯ ಶವ ಶವದ ಜೊತೆಗೆ ಇದ್ದ. ಹೊರಗೆ ಬಂದು ಊಟ, ತಿಂಡಿ‌ ತೆಗೆದುಕೊಂಡು‌ ಮನೆ ಸೇರಿಕೊಳ್ತಿದ್ದ‌‌.
ಇದನ್ನೂ ಓದಿ:ಚುನಾವಣೆ ಹಿನ್ನೆಲೆಯಲ್ಲಿ ಜ್ಯೋತಿಷಿಗಳಿಗೆ ಭಾರಿ ಡಿಮಾಂಡ್: ಮಂಗಳಮುಖಿಯರಿಗೆ ಮೊರೆ!
ರಾತ್ರಿಯೆಲ್ಲ ತಾಯಿಯ ಜೊತೆಯಲ್ಲೇ ಮಲಗಿ ಕಾಲ‌ ಕಳೆಯುತ್ತಿದ್ದ. ಆದರೆ ಏರಿಯಾದ ಜನರಿಗೆ ತಾಯಿ ಸಾವಿನ ಬಗ್ಗೆ ಆತ ಹೇಳಲೇ ಇಲ್ಲ. ನಂತರ ತಂದೆ ಸ್ನೇಹಿತರಿಗೆ ತಾಯಿ ಮಾತನಾಡ್ತಿಲ್ಲ ಎಂದು ಹೇಳಿದ್ದ. ಬಂದು‌ ನೋಡಿದಾಗ ಮೃತಪಟ್ಟಿರುವ ವಿಚಾರ ಗೊತ್ತಾಗಿದೆ. ಒಂದು ವರ್ಷದ ಹಿಂದೆಯಷ್ಟೇ ಕಿಡ್ನಿ ವೈಫಲ್ಯದಿಂದ ಅಣ್ಣಮ್ಮ ಪತಿ ಮೃತಪಟ್ಟಿದ್ದ. ತಾಯಿ ಮತ್ತು ಮಗ ಇಬ್ಬರೇ ಮನೆಯಲ್ಲಿ ವಾಸವಿದ್ದರು.(ದಿಗ್ವಿಜಯ ನ್ಯೂಸ್​)
3 ರಾಜ್ಯಗಳ ಚುನಾವಣಾ ಫಲಿತಾಂಶ: ನಾಗಾಲ್ಯಾಂಡ್​, ತ್ರಿಪುರಾದಲ್ಲಿ BJPಗೆ ಭರ್ಜರಿ ಮುನ್ನಡೆ, ಮೇಘಾಲಯದಲ್ಲಿ 2ನೇ ಸ್ಥಾನ

ಭಾರತದ ವಿರುದ್ಧ ಚೀನಾ ಹೊಸ ತಂತ್ರ; ಹಿಂದಿ ಭಾಷೆಯನ್ನು ಡಿಕೋಡ್ ಮಾಡಲು 19 ಭಾಷಾಂತರಕಾರರ ನೇಮಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − 2 =
Remember me
