ಬೀದರ್ :ಜಿಲ್ಲೆಯಾದ್ಯಂತ ಸುರಿಯುತ್ತಿರುವ ಅಲ್ಲಿಕಲ್ಲು ಮಳೆಗೆ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ನಿನ್ನೆ ಸಂಜೆ ಹಾಗೂ ರಾತ್ರಿ ಸುರಿದ ಮಳೆಯ ಆರ್ಭಟಕ್ಕೆ ಜನ ಜೀವನ ಅಸ್ತವ್ಯಸ್ಥಗೊಂಡಿದ್ದು, ಓರ್ವ ರೈತ ಬಲಿಯಾಗಿದ್ದಾನೆ.
ಮಾಧರಾವ ಬೀರ್ಗೆ ( 37) ಮೃತ. ಈತ ಕಮಲನಗರ ತಾಲ್ಲೂಕಿನ ಸೋನಾಳ ಗ್ರಾಮದ ನಿವಾಸಿಯಾಗಿದ್ದಾನೆ. ಮಳೆಯ ಆರ್ಭಟದ ಮಧ್ಯ ರೈತನೋರ್ವ ಸಿಡಿಲಿಗೆ ಬಲಿಯಾಗಿದ್ದಾನೆ.
ಅಲಿಕಲ್ಲು ಸಹಿತ ಸುರಿದ ಭಾರಿ ಮಳೆಗೆ ಬೀದರ ಜಿಲ್ಲೆಯಾದ್ಯಂತ ಹಲವು ಅವಾಂತರ ಸೃಷ್ಟಿಯಾಗಿದೆ. ಭಾಲ್ಕಿಯ ಕೂಡಲಿಯಲ್ಲಿ ಗಾಳಿ-ಮಳೆಗೆ ಕೋಳಿ ಫಾರ್ಮ್ ತಗಡು ಹಾರಿಗೋಗಿದ್ದು, ಸಾವಿರಾರು ಕೋಳಿಗಳ ಮಾರಣಹೋಮ ನಡೆದಿದೆ.
ಇದನ್ನೂ ಓದಿ:ಪಿತ್ರಾರ್ಜಿತ ಆಸ್ತಿಯಲ್ಲಿ ಮುಸ್ಲಿಂ ಮಹಿಳೆಗೆ ಸಮಾನ ಪಾಲಿಲ್ಲ!; ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಮಹಿಳೆ!
ಕಳೆದ ರಾತ್ರಿ ಪೂರ್ತಿ ಸುರಿದ ಭಾರಿ ಮಳೆಯಿಂದ ಬೀದಿ ವ್ಯಾಪಾರಿಗಳ ಬದುಕು ಅಸ್ಥವ್ಯಸ್ಥಗೊಂಡಿದ್ದು, ಗಾಳಿ, ಮಳೆ ಜತೆಗೆ ಆಲಿಕಲ್ಲು ಬಿದ್ದಿರುವ ಹಿನ್ನೆಲೆ ರೈತರು ಬೆಳೆದಿರುವ ಜೋಳ, ಮಾವು ನೆಲಕಚ್ಚಿವೆ. ಹೀಗಾಗಿ ಅಪಾರ ಪ್ರಮಾಣದ ನಷ್ಟವಾಗಿದ್ದು, ರೈತರು ಕಣ್ಣೀರು ಹಾಕುವ ಪರಿಸ್ಥಿತಿ ಎದುರಾಗಿದೆ.
ಬೊಮ್ಮಾಯಿ, ಬಿಎಸ್​ವೈ ಹೇಳಿದರೆ ಚುನಾವಣೆಯಲ್ಲಿ ಸ್ಪರ್ಧೆ, ಇಲ್ಲವಾದರೆ ನಾನು ಸ್ಪರ್ಧೆ ಮಾಡಲ್ಲ: ಎಮ್​ಪಿ ರೇಣುಕಾಚಾರ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + 13 =
Remember me
