ಬೆಂಗಳೂರು:ರಾಜ್ಯದಲ್ಲಿ 14ರಿಂದ 20ರವರೆಗೆ ಭಾರಿ ಮಳೆಯಾಗುವ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಕಠಿಣ ಮುನ್ನೆಚ್ಚರಿಕೆ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸರ್ಕಾರ ಸೂಚಿಸಿದೆ. ಗುಡ್ಡದ ಅಂಚಿನ, ಶಿಥಿಲಾವಸ್ಥೆಯ ಮನೆಗಳನ್ನು ಗುರುತಿಸಿ ವಾಸಕ್ಕೆ ತಾತ್ಕಾಲಿಕ ನಿರ್ಬಂಧ ಹೇರಬೇಕು. ಶಾಲೆ ಕೊಠಡಿಗಳು ದುಸ್ಥಿತಿಯಲ್ಲಿದ್ದರೆ ಬಳಸದಂತೆ ಎಚ್ಚರಿಕೆ ವಹಿಸಬೇಕು. ಅಣೆಕಟ್ಟೆಗಳಿಗೆ ಒಳಹರಿವು ಹೆಚ್ಚಾದ ಮೇಲೆ ಹೊರಹರಿವು ಹೆಚ್ಚಿಸುವ ಬದಲು, ಜಲಾನಯನ ಪ್ರದೇಶದಲ್ಲಿ ಮಳೆ ಪ್ರಮಾಣದ ಹೊರಹರಿವು ಕ್ರಮೇಣ ಹೆಚ್ಚಿಸಬೇಕು. ಇದರಿಂದ ಜಲಾಶಯಗಳ ಕೆಳಗಿನ ನದಿ ದಂಡೆ ಸಮೀಪದ ಪ್ರದೇಶಗಳಿಗೆ ತೊಂದರೆ ತಪ್ಪಲಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಇದನ್ನೂ ಓದಿ:ಒಲಿಂಪಿಕ್ಸ್ ಪದಕ ವಿಜೇತರ ಮನದಲ್ಲಿ ಪ್ರೀತಿ! ಮದುವೆಗೆ ರೆಡಿಯಾದ್ರಾ ಮನು ಭಾಕರ್- ನೀರಜ್ ಚೋಪ್ರಾ?
ಈ ವಿಷಯ ತಿಳಿಸಿದರು. ನದಿ ದಂಡೆ ಸಮೀಪ, ತಗ್ಗುಪ್ರದೇಶದ ಜನ ವಸತಿ ಬಡಾವಣೆಗಳಿಗೆ ಸೂಕ್ತ ಮುನ್ನೆಚ್ಚರಿಕೆ ವಹಿಸಲು ಜಾಗೃತಿ ಮೂಡಿಸುವಂತೆಯೂ ತಿಳಿಹೇಳಲಾಗಿದೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಬುಧವಾರ ವಿಪತ್ತು ನಿರ್ವಹಣಾ ಸಭೆ ನಡೆಯಲಿದೆ ಎಂದರು. ಪಹಣಿಗೆ ಆಧಾರ್ ಜೋಡಣೆ: ಪಹಣಿಗೆ ಆಧಾರ್ ಸಂಖ್ಯೆ ಜೋಡಣೆ ಅಭಿಯಾನದಡಿ 4.08 ಭೂ ಮಾಲೀಕತ್ವದ ಪೈಕಿ ಈವರೆಗೆ 2.68 ಕೋಟಿ ಆಧಾರ್ ಸಂಖ್ಯೆ ಪರಿಶೀಲನೆ, 1.84 ಕೋಟಿ ಭೂಮಾಲೀಕತ್ವದ ಆಧಾರ್ ಸಂಖ್ಯೆ ಜೋಡಣೆಯಾಗಿದೆ.
ಇದರಿಂದಾಗಿ 2.20 ಲಕ್ಷ ಎಕರೆ ಸರ್ಕಾರಿ ಜಮೀನು ಪತ್ತೆಯಾಗಿದೆ. ಬಾಕಿ ಭೂ ಮಾಲೀಕತ್ವದ ಆರ್​ಟಿಸಿಗೆ ಆಧಾರ್ ಸಂಖ್ಯೆ ಜೋಡಣೆ ಗಡುವು ಆಗಸ್ಟ್ ವರೆಗೆ ವಿಸ್ತರಣೆ ಮಾಡಲಾಗಿದೆ. ನೈಜ ಕಾರಣಗಳಿರುವ ಜಿಲ್ಲೆಗಳಿಗೆ ಒಂದಿಷ್ಟು ವಿನಾಯಿತಿ ನೀಡುವ ಬಗ್ಗೆ ಯೋಚನೆ ಮಾಡಲಾಗುವುದು. ಲ್ಯಾಂಡ್ ಬೀಟ್ ಆಪ್​ನಡಿ ಕಂದಾಯ, ಅರಣ್ಯ, ಶಿಕ್ಷಣ ಸೇರಿ 15 ಇಲಾಖೆಗಳಿಗೆ ಸೇರಿದ 14.14 ಲಕ್ಷ ಸರ್ವೆ ನಂಬರ್​ಗಳ 1.40 ಕೋಟಿ ಎಕರೆ ಸರ್ಕಾರಿ ಜಮೀನು ಗುರುತಿಸಲಾಗಿದೆ. 13.04 ಲಕ್ಷ ನಂಬರ್​ಗಳಿಗೆ ಸ್ಥಳಕ್ಕೆ ಭೇಟಿ ಕಾರ್ಯ ಮುಗಿದಿದ್ದು, ಒತ್ತುವರಿ ಪತ್ತೆ, ಸೆಪ್ಟೆಂಬರ್ ನಂತರ ತೆರವಿಗೂ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ
ಪ್ರತ್ಯೇಕ ಆಪ್​ನಿಂದ ತಾಲೂಕುವಾರು ಡಿಜಿಟಿಲೀಕರಣ
ಬಗರ್​ಹುಕುಂ ದರಕಾಸ್ತ್​ನಡಿ ಮಂಜೂರು ಜಮೀನಿಗೆ ಹಕ್ಕುಪತ್ರ ಕೋರಿದ ಲಕ್ಷಾಂತರ ಅರ್ಜಿಗಳು ಬಾಕಿಯಿವೆ. ಸೂಕ್ತ ದಾಖಲೆಗಳ ಅಲಭ್ಯತೆ, ವಿಸ್ತೀರ್ಣಕ್ಕಿಂತ ಹೆಚ್ಚು ಜಮೀನು ಮಂಜೂರು ಮತ್ತಿತರ ಸಮಸ್ಯೆಗಳಿಗೆ ಪರಿಹಾರ ಕಾಣದಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವೇ ಪೋಡಿ ದುರಸ್ತಿ ಮಾಡಿಕೊಡುವ ಜವಾಬ್ದಾರಿ ಹೊತ್ತಿದೆ. ಇದಕ್ಕಾಗಿ ಪ್ರತ್ಯೇಕ ಆಪ್ ಅಭಿವೃದ್ಧಿಪಡಿಸಿ ತಾಲೂಕುವಾರು ಡಿಜಿಟಿಲೀಕರಣ ಮಾಡಬೇಕೆಂದಿದೆ. ಸದ್ಯಕ್ಕೆ ಹಾಸನ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಿದ್ದು, ನಿರೀಕ್ಷಿತ ಫಲಿತಾಂಶ ಬಂದಿರುವ ಕಾರಣ ಸೆಪ್ಟೆಂಬರ್​ನಲ್ಲಿ ರಾಜ್ಯಾದ್ಯಂತ ವಿಸ್ತರಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ ನಮೂನೆ ಒಂದರಿಂದ 5ನ್ನು ಮಾಡುತ್ತೇವೆ. ದಾಖಲೆಗಳು ಸರಿಯಿರುವುದಕ್ಕೆ ಸಮೀಕ್ಷೆ ಮಾಡಿಸಿ ಜಮೀನಿನ ಹಕ್ಕುಪತ್ರ ನೀಡಲಾಗುತ್ತದೆ. ಉಳಿದವಕ್ಕೆ ಕಾಯ್ದೆ ರೀತ್ಯ ಕ್ರಮವಾಗಲಿದೆ ಎಂದು ಕಂದಾಯ ಸಚಿವರು ಹೇಳಿದರು.
ನಷ್ಟ, ಪರಿಹಾರ ಕ್ರಮ
ಶೇಕಡಾ 26ಕ್ಕೂ ಹೆಚ್ಚು ಮಳೆ
ರಾಜ್ಯದಲ್ಲಿ ವಾಡಿಕೆ ಪ್ರಕಾರ ಈವರೆಗೆ 553 ಮಿಲಿ ಮೀಟರ್ ಮಳೆಯಾಗಬೇಕಿದ್ದರಲ್ಲಿ ಸರಾಸರಿ 699 ಮಿ.ಮೀ. ಮಳೆಯಾಗಿದ್ದು, ಶೇಕಡ 26ರಷ್ಟು ಹೆಚ್ಚಿದೆ. ದಕ್ಷಿಣ ಒಳನಾಡು ವಾಡಿಕೆ 171, ವಾಸ್ತವಿಕ- 246, ಉತ್ತರ ಒಳನಾಡು ವಾಡಿಕೆ- 260 ವಾಸ್ತವಿಕ- 322, ಮಲೆನಾಡು- ವಾಡಿಕೆ- 1127, ವಾಸ್ತವಿಕ- 1361, ಕರಾವಳಿ ವಾಡಿಕೆ- 2299, ವಾಸ್ತವಿಕ 2947 ಮಿ.ಮೀ. ಮಳೆಯಾಗಿದೆ. ಯಾದಗಿರಿ ಜಿಲ್ಲೆಯಲ್ಲಿ ಮಾತ್ರ ವಾಡಿಕೆಗಿಂತ ಶೇ.5 ಮಳೆ ಕಡಿಮೆಯಾಗಿದೆ. ಉಳಿದ ಎಲ್ಲ ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚಾಗಿದೆ. ಕೋಲಾರ, ಚಿಕ್ಕಬಳ್ಳಾಪುರ, ಕೊಪ್ಪಳ, ರಾಯಚೂರು, ಯಾದಗಿರಿ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆಯಾಗಿತ್ತು. ಆದರೆ ಕಳೆದ 10 ದಿನಗಳಲ್ಲಿ ಸುಧಾರಿಸಿದ ಮಳೆಯು ಕೊರತೆ ಸರಿದೂಗಿಸಿದೆ. ಕುಡಿಯುವ ನೀರಿನ ಸಮಸ್ಯೆ ನಿವಾರಿಸಿ ಕೃಷಿ ಚಟುವಟಿಕೆಗಳಿಗೆ ಅನುಕೂಲಕರವಾಗಿದೆ ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದರು.
ನಮ್ಮಿಬ್ಬರದ್ದು ಸಖತ್ ಜೋಡಿ… ಸ್ಟಾರ್​ ನಟನ ಬಗ್ಗೆ ನಟಿ ಕೀರ್ತಿ ಸುರೇಶ್​ ಬಿಚ್ಚುಮಾತು!
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:four × 2 =
Remember me
