ಬೆಂಗಳೂರು:ರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆ ಮುಂದಿನ 5 ದಿನ ಮುಂದುವರಿಯಲಿದ್ದು, ಮಲೆನಾಡು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ.
ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನದಲ್ಲಿ ಆ.1 ಮತ್ತು 2ರಂದು ಜೋರು ಮಳೆ ಬೀಳುವ ಸಾಧ್ಯತೆ ಇರುವುದರಿಂದ ಇಲಾಖೆ, ಆರೆಂಜ್ ಅಲರ್ಟ್ ಕೊಟ್ಟಿದೆ. ಅಲ್ಲದೆ, ಈ ಜಿಲ್ಲೆಗಳಲ್ಲಿ ಜು.30ರಂದು ಹಾಗೂ ದಾವಣಗೆರೆ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರದಲ್ಲಿ ಮುಂದಿನ 24 ಗಂಟೆ ಯೆಲ್ಲೋ ಅಲರ್ಟ್ ಇರಲಿದೆ. ಕರಾವಳಿ, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಕೆಲ ಭಾಗಗಳಲ್ಲಿ ಸಾಧಾರಣ ಮಳೆ ಸುರಿಯಲಿದೆ.
ವಾಡಿಕೆಗಿಂತ ತುಸು ಹೆಚ್ಚಳ:ದೇಶದಲ್ಲಿ ಜೂ 1ರಿಂದ ಜು.27ವರೆಗೆ 408 ಮಿಮೀ ಮಳೆಯಾಗಬೇಕಿತ್ತು. ಆದರೆ. 451 ಮಿಮೀ ಮಳೆಯಾಗಿದ್ದು, ಶೇ.10 ವಾಡಿಕೆಗಿಂತ ಹೆಚ್ಚು ಸುರಿದಿದೆ. ದಕ್ಷಿಣ ಭಾರತದಲ್ಲಿ 339 ಮಿಮೀ ಮಳೆ ಬದಲಾಗಿ 440 ಮಿಮೀ ಮಳೆಯಾಗಿದ್ದು, ಶೇ.30 ಹಾಗೂ ಮಧ್ಯ ಭಾರತದಲ್ಲಿ 448 ಮಿಮೀ ಮಳೆ ಆಗಬೇಕಿತ್ತು, ಆದರೆ, 562 ಮಿಮೀ ಮಳೆಯಾಗಿದ್ದು, ಶೇ.25 ಹೆಚ್ಚು ಮಳೆ ಬಿದ್ದಿದೆ. ವಾಯುವ್ಯ ಭಾರತದಲ್ಲಿ 257 ಮಿಮೀ ಮಳೆ ಬದಲಾಗಿ 261 ಮಳೆಯಾಗಿದ್ದು, ವಾಡಿಕೆಯಷ್ಟೇ ಹಾಗೂ ಈಶಾನ್ಯ ರಾಜ್ಯಗಳಲ್ಲಿ 703 ಮಳೆ ಬದಲಾಗಿ 597 ಮಿಮೀ ಮಳೆಯಾಗಿದ್ದು, ಶೇ.15 ವಾಡಿಕೆಗಿಂತ ಕಡಿಮೆ ಮಳೆ ಸುರಿದಿದೆ. ಅದೇ ರೀತಿ, ಜೂ.1ರಿಂದ ಜು.29ರವರೆಗೆ ಕರ್ನಾಟಕದಲ್ಲಿ 454 ಮಿಮೀ ಮಳೆಯಾಗಬೇಕಿತ್ತು. ಆದರೆ, 512 ಮಿಮೀ ಮಳೆಯಾಗಿದ್ದು, ಶೇ.13 ಹೆಚ್ಚು ಮಳೆಯಾಗಿದೆ.
ಆಭರಣದ ಅಂಗಡಿ ಮಾಲೀಕನ ಪತ್ನಿಯ ಕೊಲೆ; ಮನೆಯಲ್ಲಿ ಒಂಟಿಯಾಗಿದ್ದಾಗ ನಡೆಯಿತು ಹತ್ಯೆ..
Fact Check | ಸಾವಿರಾರು ಫಾಲೋವರ್ಸ್ ಇರುವ ರಾಷ್ಟ್ರಪತಿ ಹೆಸರಿನ ಟ್ವಿಟರ್ ಖಾತೆಯೇ ಫೇಕ್; ಅಧಿಕೃತ ಯಾವುದು?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 2 =
Remember me
