ಬೆಂಗಳೂರು:ನಗರದಲ್ಲಿ ಇಂದು ಸುರಿದ ಮಳೆ ಅವಾಂತರವನ್ನೇ ಸೃಷ್ಟಿಸಿದೆ. ಮಲ್ಲೇಶ್ವರಂನಲ್ಲಿ ಕಾಂಪೌಂಡ್​ ಗೋಡೆ ಕುಸಿದ ಪರಿಣಾಮ ಒಂದು ಕಾರು, ನಾಲ್ಕು ಬೈಕ್​ಗಳು ಜಖಂಗೊಂಡಿವೆ.
ಇನ್ನು ವಿಪರೀತ ಮಳೆಯಿಂದಾಗಿ ಒಂದೆಡೆ ಟ್ರಾಫಿಕ್ ಜಾಮ್​ ಉಂಟಾಗಿದ್ದರೆ, ಇನ್ನೊಂದೆಡೆ ಬಿಎಂಟಿಸಿ ಬಸ್​​ಗಳಿಲ್ಲದೆ ಪ್ರಯಾಣಿಕರು ಪರದಾಡಿದ್ದಾರೆ. ಸಂಜೆ 8ಗಂಟೆಯಿಂದಲೂ ರಾಜಾಜಿ ನಗರ, ನವರಂಗ್, ಮಹಾಲಕ್ಷ್ಮಿ ಲೇಔಟ್, ಪೀಣ್ಯ ಕಡೆ ಯಾವುದೇ ಬಸ್​ ಹೋಗದ ಕಾರಣ 200ಕ್ಕೂ ಹೆಚ್ಚು ಪ್ರಯಾಣಿಕರು ಕಷ್ಟಪಡುವಂತಾಯಿತು.
ಸತತ ಮೂರು ಗಂಟೆ ಕಳೆದರೂ ಬಸ್​ಗಳೂ ಇಲ್ಲ, ಬಿಎಂಟಿಸಿ ಸಿಬ್ಬಂದಿಯೂ ಇಲ್ಲ. ಇದರಿಂದ ತೀವ್ರ ಆಕ್ರೋಶಗೊಂಡ ಪ್ರಯಾಣಿಕರು ಏರ್​ಪೋರ್ಟ್​ ಕಡೆಗೆ ಹೋಗುವ ಬಸ್​ ತಡೆದು, ಗಲಾಟೆ ಮಾಡಿದ್ದಾರೆ.  ಸಿಲಿಕಾನ್​ ಸಿಟಿಯಲ್ಲೂ ಭರ್ಜರಿ ಮಳೆಯಾಗಿದ್ದು, ಶಿವಾನಂದ ಸರ್ಕಲ್​ ಬ್ರಿಜ್​ ಸಂಪೂರ್ಣ ಭರ್ತಿಯಾಗಿದೆ. ಇದರಿಂದ ವಾಹನ ಸವಾರರು ಸಿಕ್ಕಾಪಟೆ ಪರದಾಡುವಂತಾಯಿತು.
ರವಿಕುಮಾರ್‌ಗೆ ಕರೊನಾ ಸೋಂಕು; ಶಿರಾ ಬಿಜೆಪಿ ಪ್ರಚಾರಕ್ಕೆ ಹಿನ್ನಡೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + six =
Remember me
