ಬೆಂಗಳೂರು:ರಾಜ್ಯದ ವಿವಿಧೆಡೆ ವರುಣನ ಆರ್ಭಟ ಜೋರಾಗಿದ್ದು, ಸಾಲುಸಾಲು ಅವಾಂತರ ಸೃಷ್ಟಿಯಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಮಳೆಗೆ 6 ವರ್ಷದ ಬಾಲಕಿ ಬಲಿಯಾಗಿದ್ದು, ಬೆಂಗಳೂರು, ಗದಗ, ದಾವಣಗೆರೆ ಸೇರಿದಂತೆ ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ.
ಮಂಗಳವಾರ ರಾತ್ರಿ ಸುರಿದ ಮಳೆಗೆ ಚಿತ್ರದುರ್ಗ ಜಿಲ್ಲೆಯ ಜಾಜೂರು ಗ್ರಾಮದ ಚೆಲ್ಮೇಶ್ ಎಂಬುವರ ಮನೆಗೋಡೆ ಕುಸಿದಿದ್ದು, ಸ್ಥಳದಲ್ಲೇ ಮಗಳು ಶೃಜನ್ಯಾ(6) ಮೃತಪಟ್ಟಿದ್ದಾಳೆ. ರತ್ನಮ್ಮ, ಚೆಲ್ಮೇಶ್ ಸೇರಿ ಮೂವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಮದಲ್ಲಿ ಸಿಡಿಲು ಬಡಿದು ಕುರಿ ಮತ್ತು ಎತ್ತು ಮೃತಪಟ್ಟಿವೆ.
ಇದನ್ನೂ ಓದಿರಿಸಿನಿಪ್ರಿಯರಿಗೆ ಗುಡ್ ನ್ಯೂಸ್, ಚಿತ್ರಮಂದಿರ ಓಪನ್​ಗೆ ಡೇಟ್​ ಫಿಕ್ಸ್
ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ತಡರಾತ್ರಿ ಭಾರೀ ಮಳೆಯಾಗಿದ್ದು, ಹೊರಮಾವು, ಕೆ.ಆರ್​.ಪುರಂ, ಹೆಣ್ಣೂರು, ಭಟ್ಟರಪಾಳ್ಯ ಸೇರಿದಂತೆ ಹಲವು ಏರಿಯಾಗಳು ಜಲಾವೃತವಾಗಿ ಮನೆಗಳಿಗೆ ನೀರು ನುಗ್ಗಿದೆ. ಕುರುಬರಹಳ್ಳಿಯ ಜೆಸಿನಗರದಲ್ಲಿ ಮಳೆಯಿಂದಾಗಿ ಕಟ್ಟಡವೊಂದು ಕುಸಿದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ರಾಮಮೂರ್ತಿ ನಗರದ ಚರ್ಚ್ ಬಳಿ ಮಳಿಗೆಗಳಿಗೆ ಮಳೆ ನುಗ್ಗಿದ್ದು, ಲಕ್ಷಾಂತರ ಮೌಲ್ಯದ ವಸ್ತುಗಳು ಹಾನಿಯಾಗಿವೆ. ಬುಧವಾರ ಬೆಳಗ್ಗೆ ಯಂತ್ರಗಳ ಮೂಲಕ ಅಗ್ನಿಶಾಮಕ ಸಿಬ್ಬಂದಿ ನೀರನ್ನು ಹೊರಹಾಕಿದರು.
ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನಲ್ಲಿ ಇಡೀ ಜಲ್ಲಿಗೇರಿ ತಾಂಡಾ ಪ್ರದೇಶ ಕೆರೆಯಂತಾಗಿದೆ. ತಾಂಡಾದ ನೂರಾರು ಮನೆಗಳಿಗೆ ಮಳೆ ನೀರು ನುಗ್ಗಿದ್ದರಿಂದ ನಿವಾಸಿಗಳು ರಾತ್ರಿಯಿಡೀ ಪರದಾಡಿದರು. ಅಕ್ಕಪಕ್ಕದ ಜಮೀನುಗಳು ಕರೆಯಂತಾಗಿದ್ದು, ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಮಕ್ಕಳು, ವೃದ್ಧರು, ಮಹಿಳೆಯರು ನೀರಲ್ಲೇ ರಾತ್ರಿಯಿಡೀ ಕಳೆದರು.
ದಾವಣಗೆರೆ ತಾಲೂಕಿನ ಕಬ್ಬೂರು ಗ್ರಾಮದಲ್ಲಿ 3 ಕಚ್ಚಾ ಮನೆಗೆ ಹಾನಿಯಾಗಿದ್ದು, ನೂರಾರು ಎಕರೆ ಹೊಲ-ಗದ್ದೆಗಳು ಜಲಾವೃತಗೊಂಡಿವೆ. ಹರಿಹರ, ಹೊನ್ನಾಳಿ, ಚನ್ನಗಿರಿಯಲ್ಲೂ ಉತ್ತಮ ಮಳೆಯಾಗಿದೆ. ಶ್ಯಾಗಲೆ ಹಳ್ಳ ಮೈದುಂಬಿ ಹರಿಯುತ್ತಿದ್ದು, ಶ್ಯಾಗಲೆ- ದಾವಣಗೆರೆ ಮಾರ್ಗದಲ್ಲಿ ಸಂಪರ್ಕವನ್ನು ತಾತ್ಕಾಲಿಕ ಕಡಿತ ಮಾಡಲಾಗಿದೆ. ಹರಿಹರ ತಾಲೂಕಿನ ದೇವರಬೆಳಕೆರೆ ಪಿಕಪ್ ಡ್ಯಾಮ್ ವ್ಯಾಪ್ತಿಯಲ್ಲಿ 15 ಎಕರೆ ಭತ್ತದ ಗದ್ದೆ ಜಲಾವೃತಗೊಂಡಿದೆ. ಭಾನುವಳ್ಳಿ ಗ್ರಾಮದ 2 ‌ಕಚ್ಚಾ ಮನೆಗೂ ಮಳೆಯಿಂದಾಗಿ ಹಾನಿಯಾಗಿದೆ.
ಡ್ರಗ್ಸ್ ಕೇಸ್​ನಲ್ಲಿ ಬರೀ ಹೆಣ್ಮಕ್ಕಳದ್ದೇ ಹೆಸರು; ನಟಿ ಪಾರುಲ್​ ಆಕ್ರೋಶ

https://www.vijayavani.net/drug-case-sanjanagalrani-arrest/
ಹಳ್ಳಿಯಲ್ಲಿ ಒಂಟಿಮನೆ ಬಾಡಿಗೆ ಪಡೆದ ಯುವಕ ರಾತ್ರಿಯಾಗುತ್ತಿದ್ದಂತೆ ತನ್ನ ವರಸೆ ಬದಲಿಸುತ್ತಿದ್ದ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 18 =
Remember me
