ಬೆಂಗಳೂರು:ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ಉಕ್ಕಿ ಹರಿಯುತ್ತಿರುವ ಜಲಾಶಯ, ಕೆರೆ-ಕಟ್ಟೆ, ಕಾಲುವೆಗಳ ನೀರು ಜನವಸತಿ ಪ್ರದೇಶಗಳತ್ತ ನುಗ್ಗಿದ್ದು, ಜನರ ಬದುಕು ಅಕ್ಷರಶಃ ಬೀದಿಗೆ ಬಿದ್ದಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಮಳೆ ಆರ್ಭಟ ತೀವ್ರವಾಗಿದ್ದು, ಯಳಂದೂರು ತಾಲೂಕಿನ ಹಲವು ಗ್ರಾಮಗಳು ಜಲಾವೃತಗೊಂಡಿವೆ. ಪಟ್ಟಣ ಪ್ರದೇಶದಲ್ಲೂ ಪ್ರವಾಹದಂತೆ ಹರಿಯುತ್ತಿರುವ ನೀರು ಕಂಡು ಜನರು ಬೆಚ್ಚಿದ್ದಾರೆ. ಇದು ಹಬ್ಬದ ಸಂಭ್ರಮ ಕಸಿದುಕೊಂಡಿತು.
ಸುವರ್ಣಾವತಿ ನದಿ ಉಕ್ಕಿ ಹರಿದು ಮಂಗಳವಾರ ಬೆಳಗ್ಗೆ ಅಗರ-ಮಾಂಬಳ್ಳಿ ಗ್ರಾಮದ ಪೊಲೀಸ್​ ಠಾಣೆಗೆ ನೀರು ನುಗ್ಗಿದೆ. ಇಲ್ಲಿನ ಸಿಬ್ಬಂದಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಬೋಟ್​ನಲ್ಲಿ ಕರೆತಂದು ರಣೆ ಮಾಡಿದರು. ಗುಂಬಳ್ಳಿ ಗ್ರಾಮದ ಕೆರೆಯ ಏರಿ ಒಡೆದಿದ್ದು ಉಪ್ಪಿನಮೋಳೆ ಗ್ರಾಮದ ಬಳಿ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರ ಸಂಪೂರ್ಣ ಮುಳುಗಡೆಯಾಗಿದೆ. ಇಲ್ಲಿನ ಸಿಬ್ಬಂದಿ ಕೆಲಕಾಲ ಜಲದಿಗ್ಬಂಧನಕ್ಕೆ ಒಳಗಾದರು. ಇಲ್ಲಿ ಮಂಗಳವಾರ ಸಂಪೂರ್ಣವಾಗಿ ಆರೋಗ್ಯ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಅರಣ್ಯ ಇಲಾಖೆ ಕಚೇರಿಯೂ ಮುಳುಗಡೆಯಾಗಿದೆ. ಜನರ ರಣೆ, ಆಸ್ತಿಹಾನಿ ತಿಳಿಯುವ ಸಲುವಾಗಿ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಡ್ರೋನ್​ ಹಾರಿಸಿ ಸರ್ವೇ ಮಾಡಲಾಯಿತು. ಕೊಳ್ಳೇಗಾಲ ಶಾಸಕ ಎನ್​. ಮಹೇಶ್​ ಹಲವು ಗ್ರಾಮಗಳಿಗೆ ಭೇಟಿ ನೀಡಿ ಸಮರೋಪಾದಿಯಲ್ಲಿ ಪರಿಹಾರ ಕಾರ್ಯ ಒದಗಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ನಾಗಮಂಗಲ ಬಸ್​ ನಿಲ್ದಾಣ ಜಲಾವೃತ:ಮಂಡ್ಯ ಜಿಲ್ಲೆಯಲ್ಲಿ ವರುಣನ ಅವಾಂತರ ಮುಂದುವರಿದಿದ್ದು, ಸೋಮವಾರ ರಾತ್ರಿ ಸುರಿದ ಜೋರು ಮಳೆಯಿಂದಾಗಿ ನಾಗಮಂಗಲ ಪಟ್ಟಣದ ಹೃದಯಭಾಗದಲ್ಲಿರುವ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣ ಹಾಗೂ ಡಿಪೋ ಸಂಪೂರ್ಣವಾಗಿ ಜಲಾವೃತವಾಗಿದೆ. ಬಸ್​ ನಿಲ್ದಾಣ ಕೆರೆಯಂತಾದ ಪರಿಣಾಮ 20ಕ್ಕೂ ಹೆಚ್ಚು ಬಸ್​ಗಳು ಭಾಗಶ@ ಮುಳುಗಡೆಯಾಗಿದ್ದವು. ಗೌರಿ, ಗಣೇಶ ಹಬ್ಬವಾಗಿದ್ದರಿಂದ ಬಸ್​ಗಳಿಲ್ಲದೆ ನೂರಾರು ಪ್ರಯಾಣಿಕರು ಪರದಾಡುವಂತಾಗಿತ್ತು. ನಾಗಮಂಗಲ–ಮೈಲಾರಪಟ್ಟಣ ರಸ್ತೆ ಸಂಪೂರ್ಣ ಕೊಚ್ಚಿಹೋಗಿದೆ. ಪಟ್ಟಣದ ಹಿರಿಕೆರೆ ಕೋಡಿಯಾಗಿದ್ದು, ಪಟ್ಟಣದ ಚಾಮರಾಜನಗರ–ಜೇವರ್ಗಿ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇನ್ನು ಶ್ರೀರಂಗಪಟ್ಟಣ ತಾಲೂಕಿನಲ್ಲಿ ಮಳೆಗೆ ಚಿಂದಗಿರಿಕೊಪ್ಪಲು, ನೆಲಮನೆ ಹಾಗೂ ಬಲ್ಲೇನಹಳ್ಳಿ ಗ್ರಾಮಗಳ ನೂರಾರು ಎಕರೆಯ ಕೃಷಿ ಭೂಮಿಯ ತೋಟಗಾರಿಕೆ ಬೆಳೆಗಳು ನಾಶವಾಗಿವೆ. ಪಾಂಡವಪುರದ ಹಿರೋಡೆ ಕೆರೆಯ ಕೋಡಿ ನೀರು ಹರಿದು ಬರುವ ಅಟ್ಟೆ ಹಳ್ಳದಲ್ಲಿ ನಿರಂತರವಾಗಿ ಸುರಿದ ರಣಮಳೆ ನೀರಿನಿಂದ ಭಾರಿ ಪ್ರವಾಹ ಸೃಷ್ಟಿಯಾಗಿದೆ. ಲೋಕಪಾವನಿ ನದಿಯೊಂದಿಗೆ ಸೇರಿ ಅ-ಪಾ-ರ ಪ್ರಮಾಣದ ಕೃಷಿ ಭೂಮಿಗಳಿಗೆ ಹಾನಿ ಉಂಟುಮಾಡಿದೆ.
ಊರೊಳಗೆ ಹೊಕ್ಕ ಕೆರೆ ನೀರು:ವಿಜಯನಗರ ಜಿಲ್ಲೆಯಲ್ಲಿ 2 ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜಿಲ್ಲೆಯ ಹಳ್ಳಗಳು ತುಂಬಿ ಹರಿಯುತ್ತಿದ್ದು, ಕೆರೆಗಳಿಗೆ ಕೋಡಿ ಬಿದ್ದಿದೆ. ಸಂಡೂರು ತಾಲೂಕಿನ ನಾರೀಹಳ್ಳ ತುಂಬಿ ಹರಿಯುತ್ತಿದ್ದು, ಪಟ್ಟಣದ ಭುಜಂಗ ನಗರದ ಜಮೀನಿನಲ್ಲಿ ನೀರು ನಿಂತಿದೆ. ಕೂಡ್ಲಿಗಿ ತಾಲೂಕಿನ ರಾಮದುರ್ಗ ಕೆರೆಗೆ ಕೋಡಿ ಬಿದ್ದಿದ್ದು, ಗುಡೇಕೋಟೆಯಲ್ಲಿ 17 ಮನೆ ಬಿದ್ದಿವೆ.
ಎಂಟು ಮಂದಿ ಬಲಿರಾಜ್ಯದಲ್ಲಿ ಮಳೆ ಆರ್ಭಟ ತೀವ್ರಗೊಂಡಿರುವ ನಡುವೆಯೇ ಸಾವು-ನೋವುಗಳು ಹೆಚ್ಚಾಗಿದ್ದು, ಮಂಗಳವಾದ ಮಳೆ ಸಂಬಂಧಿತ ಅವಡಗಳಿಗೆ ಎಂಟು ಮಂದಿ ಬಲಿಯಾಗಿದ್ದಾರೆ. ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಉದ್ಬಾಳ್​ ಗ್ರಾಮದಲ್ಲಿ ಗೋಡೆ ಕುಸಿದು ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕಿ ಶ್ರೀದೇವಿ (3) ಮೃತಪಟ್ಟಿದ್ದಾಳೆ. ಸತತ ಮಳೆಯಿಂದಾಗಿ ಗೋಡೆ ಶಿಥಿಲಗೊಂಡಿತ್ತು. ಮಸ್ಕಿ ತಾಲೂಕಿನ ಗುಡದೂರು ಬಳಿ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಕಾರು ಉರುಳಿ ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದು, ಅವರ ಪುತ್ರ ಕಾಲುವೆಯಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.
ಗಂಗಾವತಿ ತಾಲೂಕಿನ ಹೊಸಕೇರಾ ಕ್ಯಾಂಪ್​ ನಿವಾಸಿಗಳಾದ ಎಂ.ಸೂರ್ಯರಾವ್​ (62) ಹಾಗೂ ಅವರ ಪತ್ನಿ ಸುಬ್ಬಲಕ್ಷ್ಮಿ (58) ಮೃತರು. ಕಾರು ಚಲಾಯಿಸುತ್ತಿದ್ದ ಅವರ ಪುತ್ರ ಎಂ.ಶ್ರೀನಿವಾಸ (40) ಕೊಚ್ಚಿಕೊಂಡು ಹೋದವರು. ಲಿಂಗಸುಗೂರು ತಾಲೂಕಿನ ಗೋನವಾಟ್ಲ ಗ್ರಾಮಕ್ಕೆ ತೆರಳುತ್ತಿದ್ದಾಗ ದುರಂತ ಸಂಭವಿಸಿದೆ. ಟಾಟಾ ಇಂಡಿಗೋ ಕಾರು ಕಾಲುವೆಯಲ್ಲಿ ಬೀಳುತ್ತಿದ್ದಂತೆ ಚೀರಾಟ ಕೇಳಿಸಿದೆ. ಸ್ಥಳಿಯರು ಬರುವ ವೇಳೆಗೆ ಕಾರು ನೀರಿನಲ್ಲಿ ಸಂಪೂರ್ಣ ಮುಳುಗಿತ್ತು. ಎಂ.ಶ್ರೀನಿವಾಸ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದಾಗ ರಸಲು ಪ್ರಯತ್ನ ಪಟ್ಟರೂ ಸಾಧ್ಯವಾಗಿಲ್ಲ. ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ ತುಮರಿಕೊಪ್ಪ ಗ್ರಾಮದ ನಿಂಬವ್ವ ನೆಗಳೂರು (55) ಎಂಬುವರು ಮನೆಯಲ್ಲಿ ಮಲಗಿದ್ದ ಸಮಯದಲ್ಲಿ ಗೋಡೆ ಕುಸಿದು ಬಿದ್ದಿದೆ. ಉಕ್ಕಿ ಹರಿಯುತ್ತಿರುವ ವರದಾ ನದಿಯಲ್ಲಿ ಹಾವೇರಿ ತಾಲೂಕು ಕರ್ಜಗಿ ಗ್ರಾಮದ ಸುನೀಲ ನೆಗಳೂರು (18) ಎಂಬ ಯುವಕ ಕೊಚ್ಚಿ ಹೋಗಿದ್ದಾನೆ. ವರದಾ ನದಿ ದಂಡೆಯಲ್ಲೇ ಯುವಕನ ಮನೆ ಇದೆ. ಈತ ನದಿಯನ್ನು ನೋಡಲು ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು, ಕೊಚ್ಚಿಕೊಂಡು ಹೋಗಿದ್ದಾನೆ ಎನ್ನಲಾಗಿದೆ. ಈಜಲು ಹೋಗಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಟನೆ ಸವಣೂರು ಪಟ್ಟಣದ ಕೆಂಪಿಕೆರೆಯಲ್ಲಿ ಮಂಗಳವಾರ ಸಂಭವಿಸಿದೆ. ಪಟ್ಟಣದ ಕಾರಿಗಾರ ಪ್ಲಾಟ್​ ನಿವಾಸಿ ಸೈಯದ್​ ರೇಹಾನ್​ ಬಾಬಾಹುಷನ್​ ಮಂಡಾಲೆ(13) ಹಾಗೂ ಜಿಲಾನಿ ಮಹ್ಮದಖಾಸಿಂ ಮಕಾಂದಾರ (12) ಮೃತಪಟ್ಟ ಬಾಲಕರು. ನಿರಂತರ ಮಳೆ ಹಿನ್ನೆಲೆಯಲ್ಲಿ ಶಾಲೆಗಳಿಗೆ ಮಂಗಳವಾರ ರಜೆ ೂಷಿಸಲಾಗಿತ್ತು. ಈ ಇಬ್ಬರು ಇತರ ಮೂವರು ಬಾಲಕರೊಂದಿಗೆ ಈಜಾಟಕ್ಕೆಂದು ಕೆರೆಗೆ ಹೋಗಿದ್ದರು. ಆದರೆ, ಮೂವರು ಮಕ್ಕಳು ಹೆದರಿ ನೀರಿಗೆ ಇಳಿಯದೇ ಮನೆಗೆ ವಾಪಸಾಗಿದ್ದರು. ಸೈಯದ್​ ರೇಹಾನ್​ ಹಾಗೂ ಜಿಲಾನಿ ನೀರಿನ ಆಳ ತಿಳಿಯದೇ ಕೆರೆಯಲ್ಲಿ ಮುಳುಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೊಣ್ಣಹಳ್ಳಿ ಗ್ರಾಮದಲ್ಲಿ ದನದ ಕೊಟ್ಟಿಗೆ ಗೋಡೆ ಕುಸಿದು 72 ವರ್ಷದ ವೃದ್ಧ ಬಸವರಾಜ್​ ಎಂಬವರು ಮೃತಪಟ್ಟಿದ್ದಾರೆ.
4 ಸಾವಿರ ಮನೆಗಳಿಗೆ ನೀರುರಾಮನಗರ ಜಿಲ್ಲೆಯಲ್ಲಿ ಸುಮಾರು 4 ಸಾವಿರ ಮನೆಗಳಿಗೆ ನೀರು ನುಗ್ಗಿದೆ. 200ರ ಆಸುಪಾಸಿನಲ್ಲಿ ಮನೆಗಳು ಹಾನಿಗೊಳಗಾಗಿವೆ. 600 ಹೆಕ್ಟೇರ್​ ಬೆಳೆ ನಷ್ಟವಾಗಿದೆ. ರಾಮನಗರ ಮತ್ತು ಚನ್ನಪಟ್ಟಣದ ನಗರ ಪ್ರದೇಶದಲ್ಲಿ ಉಂಟಾಗಿರುವ ಹಾನಿಯನ್ನು ಅಂದಾಜಿಸಲು 10 ತಂಡಗಳನ್ನು ನೇಮಕ ಮಾಡಲಾಗಿದೆ. ಪ್ರತಿ ಮನೆಗೆ ತೆರಳಿ ತಂಡ ನೆರೆ ಪೀಡಿತರಿಂದ ಮಾಹಿತಿ ಕಲೆ ಹಾಕುತ್ತಿದೆ. ನಗರದ ಬಹುತೇಕ ಫಿಲೇಚರ್​ ಜಲಾವೃತಗೊಂಡಿವೆ. ರೇಷ್ಮೆ ನೂಲು ಬಿಚ್ಚುವ ಯಂತ್ರದ ಜತೆಗೆ ಲಕ್ಷಾಂತರ ರೂ.ಕೊಟ್ಟು ಖರೀದಿ ಮಾಡಿದ್ದ ರೇಷ್ಮೆಗೂಡು ಸಹ ನಾಶವಾಗಿದೆ. ಇನ್ನು ಸರ್ವೇ ಕಾರ್ಯಕ್ಕೆ ಬರುತ್ತಿರುವ ನಗರಸಭೆ ಸಿಬ್ಬಂದಿ ಮನೆ ದಾಖಲೆಗಳನ್ನು ಕೇಳುತ್ತಿದ್ದಾರೆ. ಸಂತ್ರಸ್ತರ ಬಳಿ ದಾಖಲೆಗಳು ಇಲ್ಲ. ಈ ವೇಳೆ ಕೆಲವರು ಸಿಬ್ಬಂದಿ ಜತೆಗೆ ವಾಗ್ವಾದ ನಡೆಸಿದ್ದಾರೆ. ಅಂತಿಮವಾಗಿ ದಾಖಲೆಗಳು ಇಲ್ಲದವರು ಬಿಳಿ ಹಾಳೆಯಲ್ಲಿ ಸ್ವಯಂ ದೃಢೀಕರಣ ಪತ್ರವನ್ನು ಅಕ್ಕಪಕ್ಕದ ಮನೆಯವರ ಸಹಿಯೊಂದಿಗೆ ನೀಡುವಂತೆ ಸೂಚನೆ ನೀಡಿದ್ದಾರೆ.
250 ಕೋಟಿ ರೂ. ಬಿಡುಗಡೆಬೆಂಗಳೂರು: ರಾಜ್ಯದಲ್ಲಿ ಮಳೆ ಹಾನಿ ಪರಿಹಾರಕ್ಕೆ 250 ಕೋಟಿ ರೂ. ಬಿಡುಗಡೆ ಮಾಡಿದ್ದು, ನಮ್ಮ ಸರ್ಕಾರ ದುಪ್ಪಟ್ಟು ನೆರವು ನೀಡುತ್ತಿದೆ ಎಂದು ಕಂದಾಯ ಸಚಿವ ಆರ್​.ಅಶೋಕ್​ ತಿಳಿಸಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ಬೇರೆ ರಾಜ್ಯಗಳಿಗಿಂತ ಹೆಚ್ಚು ಹಣ ಕೊಟ್ಟಿದ್ದೇವೆ. ಎಲ್ಲ ರೀತಿಯ ಸವಲತ್ತು ಕೊಡುತ್ತೇವೆ. ಕೇಂದ್ರದ ನೆರವು ಬರುವವರೆಗೆ ನಾವೇ ಹಣ ನೀಡುತ್ತೇವೆ. ಹಣ ಬರುತ್ತಲೇ ಜಿಲ್ಲೆಗೆ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದರು.
ರಾಜ್ಯದಲ್ಲಿ ಮಳೆಯ ಅವಾಂತರ ಹೆಚ್ಚಿದೆ. ಒಟ್ಟು 27 ಜಿಲ್ಲೆಗಳು ಮಳೆ ಬಾಧಿತವಾಗಿವೆ. 24 ಗಂಟೆಯಲ್ಲಿ 20 ಜಿಲ್ಲೆಗಳಲ್ಲಿ ವರುಣಾಘಾತ ಉಂಟಾಗಿದ್ದು, ರಾಮನಗರ, ಮಂಡ್ಯದಲ್ಲಿ ಅಧಿಕ ಮಳೆಯಾಗಿದೆ. 29,967 ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜೂನ್​ನಿಂದ ಇಲ್ಲಿಯವರೆಗೆ 96 ಮಂದಿ ಮೃತ ಪಟ್ಟಿದ್ದಾರೆ. 993 ಮನೆಗಳ ಹಾನಿಯಾಗಿವೆ. 10, 274 ಅರ್ಧ ಮನೆ ಹಾನಿಯಾಗಿದೆ ಎಂದರು.
95 ಸಂತ್ರಸರ ಶಿಬಿರ ಆರಂಭ:ಸಂತ್ರಸ್ಥರಿಗಾಗಿ 95 ಶಿಬಿರಗಳನ್ನು ಪ್ರಾರಂಭಿಸಿದ್ದೇವೆ. 9,244 ಜನ ಶಿಬಿರಗಳಲ್ಲಿದ್ದಾರೆ. ಸೋಮವಾರ 875 ಜನ ಶಿಬಿರ ಸೇರಿದ್ದಾರೆ. 5,84,000 ಹೆಕ್ಟೇರ್​ ಬೆಳೆ ನಾಶವಾಗಿದೆ. 24,099 ಮೂಲಸೌಕರ್ಯಗಳು ಹಾಳಾಗಿವೆ. 1,471 ಸೇತುವೆಗಳು ಹಾನಿಯಾಗಿವೆ. 499 ಕೆರೆಗಳು ಒಡೆದಿವೆ. 5 ಎನ್​ಡಿಆರ್​ಎ್​ ತಂಡ ನಿಯೋಜಿಸಿದ್ದೇವೆ. 23,790 ಮನೆಗಳಿಗೆ ಪರಿಹಾರಕ್ಕೆ ಶಿಫಾರಸ್ಸು ಮಾಡಿದ್ದೇವೆ. 5,80,000 ಹೆ. ಬೆಳೆ ನಾಶಕ್ಕೆ ಪರಿಹಾರ ಕೊಡಬೇಕಿದೆ. ಕೇಂದ್ರದಿಂದ 1,012 ಕೋಟಿ ಬರಬೇಕಿದೆ ಎನ್​ಡಿಆರ್​ಎ್​ ಮಾರ್ಗಸೂಚಿಯಂತೆ 1012.05 ಕೋಟಿ ರೂ. ಬರಬೇಕಿದೆ. ನೆರವಿಗಾಗಿ ಕೇಂದ್ರಕ್ಕೆ ಶಿಫಾರಸು ಮಾಡಿದ್ದೇವೆ. ಶ್ರೀದಲ್ಲೇ ನೆರವು ದೊರೆಯುವ ನಿರೀೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮೈಸೂರು ಹೆದ್ದಾರಿ ನೀರು ನಿಂತಿರುವ ಬಗ್ಗೆ ಸಂಬಂಧಪಟ್ಟವರ ಜತೆ ಮಾತುಕತೆ ನಡೆಸಲಾಗಿದೆ. ಸೋಮವಾರ ಮುಖ್ಯಮಂತ್ರಿಗಳೂ ಮಾತುಕತೆ ಮಾಡಿದ್ದಾರೆ. ನೀರು ಹರಿದು ಹೋಗಲು ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಿದರು.
ಕೆರೆ ನೀರಿಂದ ಹೆದ್ದಾರಿಯಲ್ಲಿ ಸಮಸ್ಯೆ: ನಾವು ಮಾಜಿ ಸಿಎಂ ಕುಮಾರಸ್ವಾಮಿ ಜತೆ ಇದ್ದೇವೆ. ಮೈಸೂರು ಹೆದ್ದಾರಿ ಅವೈಜ್ಞಾನಿಕವಾಗಿ ಮಾಡಿಲ್ಲ. ಕೆರೆಯ ನೀರು ಬಂದಿರುವುದರಿಂದ ಸಮಸ್ಯೆಯಾಗಿದೆ. ಮಳೆಯ ಹೆಚ್ಚಳದಿಂದ ನೀರು ಇಂಗುತ್ತಿಲ್ಲ. ಮಂಡ್ಯ,ಮೈಸೂರು ಭಾಗದಲ್ಲಿ ಎಂಟತ್ತು ಅಡಿಗೆ ನೀರು ಬರುವ ಸ್ಥಿತಿ ನಿರ್ಮಾಣವಾಗಿದೆ ಎಂದರು. ರಾಜ್ಯದಲ್ಲಿ ಮುಂದಿನ ಮೂರ್ನಾಲ್ಕು ದಿನಗಳ ಕಾಲ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, ಮುಂಜಾಗ್ರತಾ ಕ್ರಮವಾಗಿ ಏನೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕೋ ಎಲ್ಲವನ್ನೂ ತೆಗೆದುಕೊಂಡಿದ್ದೇವೆ ಎಂದು ಸಚಿವ ಅಶೋಕ್​ ತಿಳಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 4 =
Remember me
